Advertisement

ನೀತಿ ಸಂಹಿತೆ ಉಲ್ಲಂಘಿಸಿ ಫ್ಲೆಕ್ಸ್‌ ಅಳವಡಿಕೆ

02:09 PM Dec 12, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನಲ್ಲಿ ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಡಿ.16ರವರೆಗೆ ಜಾರಿಯಲ್ಲಿದೆ. ಹೀಗಿದ್ದರೂ ಸಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೆಕ್ಸ್‌ ಗಳನ್ನು ಅಳವಡಿಕೆ ಮಾಡುವ ಮೂಲಕ ಬಿಜೆಪಿ ಮುಖಂಡರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

Advertisement

ಈ ಬಗ್ಗೆ ತಾಲೂ ಕು ಆಡಳಿತ ಹಾಗೂ ಪುರಸಭೆ ಮುಖ್ಯಾ ಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡಿ.12ರ ಭಾನುವಾರ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಹುಟ್ಟುಹಬ್ಬವಿರುವ ಕಾರಣ ಶುಕ್ರವಾರವೇ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ಪಟ್ಟಣ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ಹೆದ್ದಾರಿ, ರಸ್ತೆ, ವಿದ್ಯುತ್‌ ಕಂಬ ಹಾಗೂ ಪ್ರವಾಸಿ ಮಂದಿರ, ಪುರಸಭೆ ಮುಂಭಾಗ ಶಾಸಕರು ಮತ್ತು ಬೆಂಬಲಿಗರ ಭಾವಚಿತ್ರವಿರುವ ಫ್ಲೆಕ್ಸ್‌ ಗಳನ್ನು ಕಟ್ಟಲಾಗಿದೆ. ಇದರಿಂದ ನೀತಿ ಸಂಹಿತೆ ಸಂಪೂರ್ಣ ಉಲ್ಲಂಘನೆಯಾಗಿದೆ.

ಹೆಸರಿಗೆ ಮಾತ್ರ ಪ್ಲಾಸ್ಟಿಕ್‌ ನಿಷೇಧ: ಪಟ್ಟಣ ಪುರಸಭೆ ಅಧಿಕಾರಿಗಳು ಕೆಲ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವ ಅಂಗಡಿ, ಹೋಟೆಲ್‌ಗ‌ಳ ಮೇಲೆ ದಾಳಿ ಮಾಡಿ ದಂಡ ವಿಧಿಸುತ್ತಾರೆ. ಆದರೆ, ರಾಜ ಕೀಯ ಕಾರ್ಯಕ್ರಮಗಳು ತಾಲೂಕಿನಲ್ಲಿ ನಡೆದಾಗ ಫ್ಲೆಕ್ಸ್‌ಗಳು ಹತ್ತಾರು ಕಡೆ ಹಾಕಿದರೂ ಕಂಡು ಕಾಣದಂತೆ ಮೌನ ವಹಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಫ್ಲೆಕ್‌ ಅಳವಡಿಕೆ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ ರಾಜ್‌ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

“ಶಾಸಕ ಕೈಗೊಂಬೆಯಂತೆ ತಹಶೀಲ್ದಾರ್‌ ಹಾಗೂ ಪುರಸಭೆ ಮುಖ್ಯಾಧಿಕಾರಿ ವರ್ತಿಸುತ್ತಿ ದ್ದಾರೆ. ಈ ಕಾರಣದಿಂದ ಹೆದ್ದಾರಿಯಲ್ಲಿ ಫ್ಲೆಕ್ಸ್‌ ಅಳವಡಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾದರೂ ಕ್ರಮಕ್ಕೆ ಮುಂದಾಗಿಲ್ಲ.” ● ಎನ್‌.ಕುಮಾರ್‌.

“ಪುರಸಭಾ ಸದಸ್ಯ ಡಿ.16ರವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಪಟ್ಟಣದ ಹೆದ್ದಾರಿಯಲ್ಲಿ ಫ್ಲೆಕ್‌ ಅಳವಡಿಕೆ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ.” ● ರವಿಶಂಕರ್‌, ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next