Advertisement

ಗಂಭೀರ ರೋಗಕ್ಕೂ ಅಗಸೆ ಮದ್ದು

12:24 PM Jan 19, 2018 | |

ವಿಜಯಪುರ: ಅಗಸೆ ಬಳಕೆಯಿಂದ ಕ್ಯಾನ್ಸರ್‌, ರಕ್ತದ ಒತ್ತಡ, ಹೃದಯಾಘಾತದಂಥ ಹಲವು ಗಂಭೀರ ರೋಗಗಳ ನಿಯಂತ್ರಣದಲ್ಲಿ ಮಹತ್ವ ಪಾತ್ರ ವಹಿಸಲಿದೆ ಎಂದು ಕಾನ್ಪುರದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಅಗಸೆ ವಿಭಾಗದ ಯೋಜನಾ ಸಂಯೋಂಜಕ ಡಾ| ಪಿ.ಕೆ. ಸಿಂಗ್‌ ಹೇಳಿದರು.

Advertisement

ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಪಲಯದ ಕೃಷಿ ವಿದ್ಯಾಲಯದ ಕೇಂದ್ರ ಸಭಾಂಗಣದಲ್ಲಿ ಭಾರತೀಯ
ಕೃಷಿ ಅನುಸಂಧಾನ ಪರಿಷತ್‌, ವಿಜಯಪುರದ ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಗಸೆ
ವಿಭಾಗದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಗಸೆ ಬೆಳೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ
ಅವರು ಮಾತನಾಡಿದರು.

ಭಾರತೀಯ ಕೃಷಿ ಸಂಸ್ಕೃತಿ ಭಾಗವಾಗಿರುವ ಅಗಸೆ, ವೇದಗಳಲ್ಲಿಯೂ ಉಲ್ಲೇಖವಾಗಿದೆ. ಆಧುನಿಕ ಜೀವನ ಶೈಲಿ, ಸಿದ್ಧ ಆಹಾರದಿಂದ ದೇಶಿ ಕೃಷಿಯಿಂದ ಅಗಸೆ ಮಾಯವಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ರೈತರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ವಾತ ರೋಗಕ್ಕೆ ರಾಮಬಾಣವಾಗಿರುವ ಅಗಸೆಯನ್ನು ಉತ್ತರ ಭಾರತದಲ್ಲಿ ಎಣ್ಣೆ, ಬೀಜದಿಂದ ವಿವಿಧ ಖಾದ್ಯ ತಯಾರಿಸಿ ಹಲವು ಬಗೆಯಲ್ಲಿ ಆಹಾರವಾಗಿ ಬಳಸುತ್ತಾರೆ. ಇದೇ ಕಾರಣಕ್ಕೆ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಗಸೆ ಬೆಳೆಯಲಾಗುತ್ತಿದೆ. ಆಹಾರ ಮಾತ್ರವಲ್ಲದೇ ಲೈಲಾನ್‌ ಬಟ್ಟೆ ತಯಾರಿಕೆಯಲ್ಲಿ ಅಗಸೆ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು.

ಇಷ್ಟೊಂದು ಮಹತ್ವವಿದ್ದರೂ ಕೂಡ ದಕ್ಷಿಣ ಭಾರತದಲ್ಲಿ ಅಗಸೆ ಬೆಳೆ ಪ್ರಮಾಣ ಇದೀಗ ಅತ್ಯಂತ ಕಡಿಮೆ ಪ್ರದೇಶದಲ್ಲಿ
ಬೆಳೆಯಲಾಗುತ್ತಿದೆ. ಪರಿಣಾಮ ಹಲವು ಪರಿಣಾಮ ಹಾಗೂ ಲಾಭದಾಯಕ ಎನಿಸಿರುವ ಅಗಸೆ ಬೆಳೆಗೆ ರೈತರು ಆಧುನಿಕ ಬೀಜ ಹಾಗೂ ಕ್ರಮಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ| ಎಸ್‌.ಬಿ. ಕಲಘಟಗಿ ಮಾತನಾಡಿ, ಅಗಸಿ ಮಹತ್ವ ಬಹಳಷ್ಟಿದೆ. ನಮ್ಮ ಹಿರಿಯರು ಅದರ
ಮಹತ್ವದ ಅರಿವು ಇಲ್ಲದಿದ್ದರೂ ಅಗತ್ಯ ಪ್ರಮಾಣದಲ್ಲಿ ಅಗಸೆ ಬೆಳೆಯುವ, ಆಹಾರದಲ್ಲಿ ಬಳಕೆ ಮಾಡುತ್ತಿದ್ದರು. ಅಗಸೆ ಬೆಳೆ ಬೆಳೆಯಲು ಹಾಗೂ ಬಳಕೆ ವಿಷಯದಲ್ಲಿ ಉತ್ತರ ಭಾರತದ ರೈತರು ನೀಡುವಷ್ಟು ಮಹತ್ವ ದಕ್ಷಿಣ ಭಾರತದಲ್ಲಿ ನೀಡುತ್ತಿಲ್ಲ. ಇದರ ಮಹತ್ವ ಅರಿತು ರೈತರು ಜೋಳದಲ್ಲಿ ಪ್ರತಿಸಾಲಿನಲ್ಲಿ ಮಿಶ್ರಬೆಳೆಯಾಗಿ ಬೆಳೆಯುವ ಬದಲು ಮೂರು-ನಾಲ್ಕು ಸಾಲು ಬಿತ್ತನೆ ಮಾಡಿದರೆ, ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ನೀರು ನಿಲ್ಲುವ ತಗ್ಗು ಪ್ರದೇಶದಲ್ಲಿ ತಡವಾಗಿ ಗೋಧಿ, ಕಡಲೆ ಬಿತ್ತುವ ಬದಲು ಅಗಸೆ ಬಿತ್ತನೆ ಮಾಡಿದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ| ಅಜೀತಕುಮಾರ, ಡಾ| ರಾಜಣ್ಣ ಇದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಹಿರಿಯ ಸಂಶೋಧಕ ಡಾ| ಎಸ್‌.ಎ.ಬಿರಾದಾರ ಮಾತನಾಡಿದರು. ಡಾ| ಜಗದೀಶ ವಂದಿಸಿದರು. ಶ್ವೇತಾ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next