Advertisement

ಸಾಗರ: 46 ವರ್ಷಗಳಿಂದ ಮನೆಯಂಗಳದಲ್ಲಿಯೇ ಧ್ವಜಾರೋಹಣ!

04:27 PM Aug 15, 2022 | Suhan S |

ಸಾಗರ: ರಾಷ್ಟ್ರೀಯ ಹಬ್ಬಗಳನ್ನು ಸರಕಾರಿ ಕಚೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ  ಆಚರಿಸುವುದು ಕಡ್ಡಾಯ. ಅದರಲ್ಲಿಯೂ ಈ ಬಾರಿಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆ ಮನೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗಿದೆ.

Advertisement

ಆದರೆ ತಾಲೂಕಿನ ಬೆಳೆಯೂರಿನ ರಂಗಕರ್ಮಿ, ಪ್ರಗತಿಪರ ಕೃಷಿಕ ದೇವೇಂದ್ರ ಅವರು ತಮ್ಮ ಮನೆಯಂಗಳದಲ್ಲಿ ಧ್ವಜಾರೋಹಣ ನೆರವೇರಿಸುವ ಕಾರ‍್ಯವನ್ನು ಕಳೆದ 45 ವರ್ಷಗಳಿಂದ ಮಾಡುತ್ತಿದ್ದಾರೆ.  ತಮ್ಮ ಮನೆಯ ಅಂಗಳದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಸಂಭ್ರಮ ಸಡಗರಗಳೊಂದಿಗೆ ಮನೆಮಂದಿ, ಆಸುಪಾಸಿನ ನಿವಾಸಿಗಳ ಜತೆಗೆ ಮಾಡುತ್ತಾರೆ. ಜೊತೆಗೆ ವಿಶೇಷ ಸಿಹಿತಿನಿಸು ಸಿದ್ಧಪಡಿಸಿ, ರಾಷ್ಟ್ರೀಯ ಹಬ್ಬವನ್ನು ಆಚರಿಸುವ ಪದ್ಧತಿ ಅನುಸರಿಸಿದ್ದಾರೆ.

ಈ ಬಾರಿ ಸೋಮವಾರದ ರಾಷ್ಟ್ರಧ್ವಜಾರೋಹಣದಲ್ಲಿ  ರಂಗಕರ್ಮಿ ದೇವೇಂದ್ರ ಬೆಳೆಯೂರು, ಮಮತಾ, ಸತೀಶ್ ಹೆಗಡೆ, ಗೌತಮಿ, ಭಾರ್ಗವಿ, ಅದಿತಿ ಹೆಗಡೆ, ಮಹಾಬಲ ಹೆಗಡೆ, ಗಿರಿ, ನೀರಜಾ ಬೆಳೆಯೂರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next