Advertisement

ಪುರಸಭೆಯಲ್ಲಿ ಮುಖ್ಯಾಧಿಕಾರಿಯಿಂದ ಧ್ವಜಾರೋಹಣ

12:24 PM Aug 16, 2017 | |

ವಾಡಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 71ನೇ ಭಾರತ ಸ್ವಾತಂತ್ರ್ಯೋತ್ಸವ ರಾಷ್ಟ್ರಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ಇತ್ತೀಚೆಗಷ್ಟೆ ಚುನಾಯಿತರಾದ 23 ಜನ ಜನಪ್ರತಿನಿಧಿಗಳಿದ್ದಾಗ್ಯೂ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಅವಕಾಶದಿಂದ ವಂಚಿತಗೊಂಡು ಮೌನಕ್ಕೆ ಶರಣಾದ ಪ್ರಸಂಗ ನಡೆಯಿತು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಾಗದ ಕಾರಣ ಪ್ರಜಾಪ್ರತಿನಿಧಿಗಳ ಸಮ್ಮುಖವೇ ಮುಖ್ಯಾಧಿಕಾರಿ ಶಂಕರ ಡಿ.ಕಾಳೆ ಧ್ವಜಾರೋಹಣ ನೆರವೇರಿಸಿದ್ದು ಸದಸ್ಯರ ಮುಜುಗರಕ್ಕೆ ಕಾರಣವಾಯಿತು. ಪುರಸಭೆ ಸದಸ್ಯರಾದ ಭೀಮಶಾಜಿರೋಳ್ಳಿ, ಮುಖಂಡರಾದ ಗಿರಿಜಾಶಂಕರ ವರ್ಮಾ, ಚಂದ್ರಸೇನ ಮೇನಗಾರ, ಶ್ರವಣಕುಮಾರ ಮೌಸಲಗಿ, ಸಿದ್ದಣ್ಣ ಕಲಶೆಟ್ಟಿ ಮಾತನಾಡಿದರು. ಕಾಶೀನಾಥ ಧನ್ನಿ ನಿರೂಪಿಸಿದರು. ಜೆಇ ಅಶೋಕ ಪುಟ್‌ ಫಾಕ್‌ ವಂದಿಸಿದರು. ಕಾಂಗ್ರೆಸ್‌ ಕಚೇರಿ: ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಬ್ಲಾಕ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಟೋಪಣ್ಣ ಕೋಮಟೆ,
ಭಸೀರ್‌ ಖುರೇಶಿ, ಬಾಬುಮಿಯ್ನಾ, ದೇವಿಂದ್ರ ಕರದಳ್ಳಿ, ಶರಣಬಸು ಸಿರೂರಕರ, ಎನ್‌.ಜೈಗಂಗಾ, ನಾಶೀರ ಹುಸೇನ ಪಾಲ್ಗೊಂಡಿದ್ದರು. ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾತ್ಮಾಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಮುಖಂಡರಾದ ಭೀಮಶಾ ಜಿರೊಳ್ಳಿ, ಬಸವರಾಜ ಕೀರಣಗಿ, ಆನಂದ ಇಂಗಳಗಿ, ಬಸವರಾಜ ಯರಗಲ, ಅಭಯಕುಮಾರ ಪಾಟೀಲ, ಶ್ರವಣಕುಮಾರ ಇದ್ದರು. ಅಂಬಾಭವಾನಿ ಸಂಸ್ಥೆ:
ಕಾಂಗ್ರೆಸ್‌ ಹಿರಿಯ ಮುಖಂಡ ಭೀಮರಾವ ಧೊರೆ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕಿ ಇಂದ್ರಾಬಾಯಿ ಸೇರಿದಂತೆ ಸಹ ಶಿಕ್ಷಕರು ಪಾಲ್ಗೊಂಡಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಯಿತು. ಎಸಿಸಿ ಕಾಲೋನಿ: ಎಸಿಸಿ ಸಿಮೆಂಟ್‌ ಕಂಪನಿ ಸಹಯೋಗದಲ್ಲಿ ಡಿಎವಿ ಪಬ್ಲಿಕ್‌ ಶಾಲೆ ಹಾಗೂ ಸೇಂಟ್‌ ಅಂಬ್ರೂಸ್‌ ಕಾನ್ವೆಂಟ್‌ ಶಾಲೆಗಳು ಜಂಟಿಯಾಗಿ ಸ್ವಾತಂತ್ರೋತ್ಸವ ಆಚರಿಸಿದವು. ಎಸಿಸಿ ಮೈದಾನದಲ್ಲಿ ಅತ್ಯಾಕರ್ಷಕ ಪಥಸಂಚಲನ ನಡೆಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಭಕ್ತಿಯನ್ನು ಪ್ರತಿಬಿಂಬಿಸಿದವು. ಎಸಿಸಿ ವಲಯ ನಿರ್ದೇಶಕ ಡಾ| ಎಸ್‌.ಬಿ.ಸಿಂಗ್‌, ಜಯಪ್ರಕಾಶ ಪವಾರ, ಮುಖ್ಯಶಿಕ್ಷಕಿ ಸಿಸ್ಟರ್‌ ಸೆಲೀನ್‌, ಪ್ರಾಂಶುಪಾಲ ಬಿ.ಪ್ರಭಾಕರ ಪಾಲ್ಗೊಂಡಿದ್ದರು. ಕನ್ಯಾ ಶಾಲೆ: ಮುಖ್ಯಶಿಕ್ಷಕಿ
ಬೇಬಿನಂದಾ ದಿವಾಕರ ಧ್ವಜಾರೋಹಣ ನೆರವೇರಿಸಿದರು. ಆದಪ್ಪ ಬಗಲಿ, ನಾಗರತ್ನ ಮಲಗಾಣ, ಮೇರಿ ವರ್ಜಿನ್‌, ಗೌರಮ್ಮ ಮುಡಬೂಳಕರ, ಮುಕ್ತುಮ ಸಾಬ ಪಾಲ್ಗೊಂಡಿದ್ದರು. ಅಲ್‌ ಅಮೀನ್‌ ಉರ್ದು ಶಾಲೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೆಮೂದ್‌ ಸಾಹೇಬ ಧ್ವಜಾರೋಹಣ ನೆರವೇರಿಸಿದರು. ಬಾಬುಮಿಯ್ನಾ ಹಾಗೂ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next