Advertisement

ಮತಪಟ್ಟಿ ಸರಿಪಡಿಸಿ: ಶಿವಣ್ಣ

06:02 PM Mar 10, 2018 | Team Udayavani |

ತುಮಕೂರು: ಮತದಾರರ ಪಟ್ಟಿ ಸರಿಪಡಿಸಿ ನಕಲಿ ಮತದಾರರನ್ನು ತೆಗೆದು ಹಾಕದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಸೊಗಡು ಎಸ್‌.ಶಿವಣ್ಣ ಎಚ್ಚರಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 35 ಸಾವಿರಕ್ಕೂ ಅಧಿಕ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ನಾವು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಬಗ್ಗೆ ಪರಿಶೀಲಿಸಲು ಚುನಾವಣಾ ಆಯೋಗ ಸೂಚಿಸಿದರೂ ಜಿಲ್ಲಾಧಿಕಾರಿಗಳು ನೆಪಮಾತ್ರಕ್ಕೆ ಪರಿಶೀಲನೆ ನಡೆಸಿ ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದಾರೆಂದು ದೂರಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಮತದಾರರ ಪಟ್ಟಿಯಲ್ಲಿನ ನಕಲಿ ಮತದಾರರನ್ನು ಪತ್ತೆ ಹಚ್ಚುವಲ್ಲಿ ವಿಫ‌ಲರಾಗಿದ್ದು, ಮನೆ ಮನೆ ಸರ್ವೆ ಹೆಸರಿನಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 ಕಳೆದ ಫೆ.7 ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ವರದಿಯಲ್ಲಿ ಇಡೀ ಪ್ರಕರಣದ ಹೊಣೆಗಾರರನ್ನಾಗಿ ನಗರಪಾಲಿಕೆ ಕಂದಾಯ ಅಧಿಕಾರಿ ಲಕ್ಷ್ಮಣಕುಮಾರ್‌ರನ್ನು ಅಮಾನತುಪಡಿಸಲಾಗಿದೆ. ಆದರೆ ಸಹಾಯಕ ಚುನಾವಣಾಧಿಕಾರಿಯಾಗಿದ್ದ ತುಬ್ಸಮ್‌ ಜಹೇರ್‌ ಅವರನ್ನು ರಕ್ಷಿಸಲು ಲಕ್ಷ್ಮಣ್‌ ಕುಮಾರ್‌ ಮೇಲೆ ಅಮಾನತಿನ ಗದಾ
ಪ್ರಹಾರ ಮಾಡಿದ್ದಾರೆ. ಕೇವಲ 3 ದಿನದಲ್ಲಿ 4680 ಮತದಾರರ ಮಾಹಿತಿ ಸಂಗ್ರಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. 

ಇನ್ನೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿದೆ. ಒಂದು ವೇಳೆ ಅಂತಿಮ ಪಟ್ಟಿಯಲ್ಲಿ ದೂರಿನಲ್ಲಿ ಹೆಸರಿಸಿರುವ ನಕಲಿ
ಮತದಾರರನ್ನು ಕೈ ಬಿಡದಿದ್ದರೆ, ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲು ಹತ್ತುವುದು ಅನಿವಾರ್ಯ ಎಂದು ನುಡಿದರು.
 
ತುಮಕೂರು ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ. ನಗರದ ಬಿ.ಎಚ್‌.ರಸ್ತೆಯ ಎನ್‌ಇಪಿಎಸ್‌ ಠಾಣೆಯ ಎದುರಿನಲ್ಲಿ ಈ ಮೊದಲು ಮಸೀದಿ ನಿರ್ಮಾಣಕ್ಕೆಂದು ಹಾಕಿದ್ದ ಪಾಯವನ್ನು ಸಾರ್ವಜನಿಕರ ವಿರೋಧದ ಎದುರಾದ ಕಾರಣ ವಾಣಿಜ್ಯ ಮಳಿಗೆಯಾಗಿ ಪರಿವರ್ತಿಸಲಾಗಿದೆ. ಆದರೆ ಈ ಕಟ್ಟಡ ನಿರ್ಮಾಣಕ್ಕೆ ನಗರಪಾಲಿಕೆಯಿಂದಾಗಲಿ, ನಗರಾಭಿವೃದ್ಧಿ ಪ್ರಾಧಿಕಾರದಿಂದಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಇದುವರೆಗೂ ಅನುಮತಿ ಪಡೆದಿಲ್ಲ.

Advertisement

ಇವುಗಳಿಗೆ ಕಡಿವಾಣ ಹಾಕದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್‌, ಜಿಪಂ ಸದಸ್ಯ ರಾಮಾಂಜಿನಪ್ಪ, ಪಂಚಾಕ್ಷರಯ್ಯ, ಶಾಂತರಾಜು, ಟಿ.ಜಿ.ಮಂಜುನಾಥ್‌
ಉಮಾಶಂಕರ್‌, ಕೆ.ಪಿ.ಮಹೇಶ್‌ ಇದ್ದರು. 

ಮತದಾರರ ಪಟ್ಟಿಯಲ್ಲಿ 2013-14ನೇ ಸಾಲಿನಲ್ಲಿ ಸುಮಾರು 15 ಸಾವಿರ ಮತದಾರರನ್ನು ಫಾರಂ. ನಂ 6
ನೀಡದೆಯೇ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ಮತದಾರರ ಅರ್ಜಿ ನೀಡುವಂತೆ ಕೇಳಿದರೆ ಇದುವರೆಗೂ ಜಿಲ್ಲಾ
ಚುನಾವಣಾ ಶಾಖೆ ಮಾಹಿತಿ ನೀಡಿಲ್ಲ.
 ಸೊಗಡು ಶಿವಣ್ಣ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next