Advertisement

ಅಲ್ ಖೈದಾ ಸಂಪರ್ಕ: ಅಸ್ಸಾಂನಲ್ಲಿ ಬಾಂಗ್ಲಾ ಪ್ರಜೆ ಸೇರಿ ಐವರ ಬಂಧನ

02:45 PM Mar 05, 2022 | Team Udayavani |

ದಿಸ್ಪುರ : ಅಸ್ಸಾಂನ ಬಾರ್ಪೇಟಾ ಜಿಲ್ಲೆಯಲ್ಲಿ ಅಲ್-ಖೈದಾ ಉಗ್ರ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಬಾಂಗ್ಲಾದೇಶಿ ಪ್ರಜೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಾಂತ ಶನಿವಾರ ಹೇಳಿದ್ದಾರೆ.

Advertisement

ರಾಜ್ಯ ಪೊಲೀಸರ ವಿಶೇಷ ವಿಭಾಗವು ಹಂಚಿಕೊಂಡ ಗುಪ್ತಚರ ವರದಿಯನ್ನು ಆಧರಿಸಿ, ಬಾರ್ಪೇಟಾ ಪೊಲೀಸರು ಹೌಲ್ಯಾಂಡ್ ಕಲ್ಗಾಚಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಿಂದ ಐವರನ್ನು ಬಂಧಿಸಿದ್ದಾರೆ ಎಂದು ಮಹಂತ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಬಾಂಗ್ಲಾದೇಶದ ಪ್ರಜೆ, ಎಂಡಿ ಸುಮನ್ ಅಲಿಯಾಸ್ ಸೈಫುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ಎಕ್ಯೂಐಎಸ್‌ಗೆ ಜೆಹಾದಿ ಕೆಲಸಕ್ಕೆ ಬರ್ಪೇಟಾವನ್ನು ಬೇಸ್ ಆಗಿ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಇತರ ನಾಲ್ವರಿಗೆ ದುಷ್ಪ್ರೇರಣೆ ನೀಡಿದ್ದ ಎಂದು ತಿಳಿದು ಬಂದಿದೆ.

ಬಂಧಿತರ ಬಳಿ ಇದ್ದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next