Advertisement
ಮುಲಾಯಂ ಸಿಂಗ್ ಕುಟುಂಬಕ್ಕೆ ಮತ್ತೂಂದು ಆಘಾತ :
Related Articles
Advertisement
ಯೋಗಿ ವಿರುದ್ಧ ಚಂದ್ರ: ಗೋರಖ್‌ಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ನಾಯಕ ಚಂದ್ರಶೇಖರ ಆಜಾದ್ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಸಮಾಜವಾದಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ವಿರುದ್ಧ ಬ್ರಾಹ್ಮಣ ಸಮುದಾಯದ ನಾಯಕನನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ.
ಪರ್ರಿಕರ್ ಪುತ್ರಗಿಲ್ಲ ಬಿಜೆಪಿ ಟಿಕೆಟ್ :
ಗೋವಾ ಚುನಾವಣೆಗಾಗಿ ಬಿಜೆಪಿ 34 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ಸಿಎಂ ದಿ| ಮನೋಹರ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್‌ಗೆ ಟಿಕೆಟ್ ನೀಡಲಾಗಿಲ್ಲ. ಪಣಜಿ ಕ್ಷೇತ್ರದಿಂದ ಅಟಾನ್ಸಿಯೋ ಬಾಬುಶ್ ಮಾನ್ಸೆರೆಟ್ಟೆ ಅವರಿಗೆ ಟಿಕೆಟ್ ನೀಡಲಾಗಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾಂಕೆಲಿಂನಿಂದ ಸ್ಪರ್ಧಿಸಲಿದ್ದಾರೆ. ಟಿಕೆಟ್ ನಿರಾಕರಿಸಿದ್ದರಿಂದ ಕ್ರುದ್ಧರಾಗಿರುವ ಉತ್ಪಲ್ ಅವರನ್ನು ಸಮಾಧಾನಪಡಿಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ಪಲ್ ಶೀಘ್ರದಲ್ಲಿಯೇ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಮನೋಹರ್ ಪರ್ರಿಕರ್ ಪುತ್ರನಿಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ. ಬಿಜೆಪಿ ತನ್ನ ಅಗತ್ಯ ಪೂರೈಸುವ ವರೆಗೆ ಮುಖಂಡರಿಗೆ ಮನ್ನಣೆ ನೀಡುತ್ತದೆ. ಅನಂತರ ನಿರ್ಲಕ್ಷಿಸುತ್ತದೆ. ಉತ್ಪಲ್ ಮನಸ್ಸು ಮಾಡಿದರೆ ಆಪ್‌ನಿಂದ ಸ್ಪರ್ಧಿಸಬಹುದು ಎಂದಿದ್ದಾರೆ. ಅವರ ಆಹ್ವಾನಕ್ಕೆ ಸಿಎಂ ಪ್ರಮೋದ್ ಸಾವಂತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ತು ಶಾಸಕರಿಗಿಲ್ಲ ಟಿಕೆಟ್ :
ಉತ್ತರಾಖಂಡದಲ್ಲಿ 59 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಾಜಿ ಸಿಎಂ ಬಿ.ಸಿ.ಖಂಡೂರಿ ಪುತ್ರಿ ಸೇರಿದಂತೆ ಹತ್ತು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಟ್ಟಿಯಲ್ಲಿ 15 ಮಂದಿ ಬ್ರಾಹ್ಮಣ ಸಮುದಾಯದವರಿಗೆ, ವ್ಯಾಪಾರಿ ಸಮುದಾಯದ ಮೂವರಿಗೆ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಆರು ಮಂದಿ ಮಹಿಳೆಯರು, 13 ಮಂದಿ ಎಸ್‌ಸಿ ಸಮುದಾಯಕ್ಕೆ ಸೇರಿದವರು ಸೇರಿದ್ದಾರೆ ಎಂದರು. ಪಕ್ಷದಿಂದ ಉಚ್ಚಾಟನೆಗೊಂಡ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಸ್ಪರ್ಧಿಸಿರುವ ಕೋಟದ್ವಾರ್ ಕ್ಷೇತ್ರಕ್ಕೆ ಸದ್ಯಕ್ಕೆ ಯಾರನ್ನೂ ಹೆಸರಿಸಲಾಗಿಲ್ಲ.
ಧುರಿಯಿಂದ ಭಗವಂತ್:
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಸಿಂಗ್ ಮಾನ್ ಧುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ನಾಯಕ ರಾಘವ್ ಛಡ್ಡಾ ಈ ಮಾಹಿತಿ ನೀಡಿದ್ದಾರೆ. ಧುರಿ ಕ್ಷೇತ್ರವನ್ನು ಸದ್ಯ ಕಾಂಗ್ರೆಸ್‌ನ ದಲ್ವೀರ್ ಸಿಂಗ್ ಗೋಲ್ಡಿ ಪ್ರತಿನಿಧಿಸುತ್ತಿದ್ದಾರೆ. ಪಕ್ಷದ ಆಯ್ಕೆಯ ಬಗ್ಗೆ ಭಗವಂತ್ ಸಿಂಗ್ ಮಾನ್ ಫೇಸ್‌ಬುಕ್ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಎಸ್‌ಪಿ ಕೂಡ 14 ಮಂದಿಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ಹಾಲ್‌ನಿಂದ ಅಖೀಲೇಶ್ ಸ್ಪರ್ಧೆ? :
ಸಮಾಜವಾದಿ ಪಕ್ಷದ ಪ್ರಭಾವ ಹೆಚ್ಚಾಗಿರುವ ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಿಂದ ಅಖೀಲೇಶ್ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ. ಏಕೆಂದರೆ ಮೈನ್‌ಪುರಿ ಜಿಲ್ಲೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಜಿಲ್ಲೆ. 1993ರಿಂದ ಮೈನ್‌ಪುರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಐದೂ ವಿಧಾನಸಭೆ ಕ್ಷೇತ್ರಗಳಲ್ಲಿ ಅಖೀಲೇಶ್ ಯಾದವ್ ಅವರ ಪಕ್ಷದ ಅಭ್ಯರ್ಥಿಗಳೇ ಗೆದ್ದು ಬರುತ್ತಿದ್ದಾರೆ.