ಗಂಗಾವತಿ :ತಾಲೂಕಿನ ಹನುಮನಹಳ್ಳಿಯಲ್ಲಿ ಕಳೆದ 20 ದಿನಗಳಿಂದ ಕೋತಿಯೊಂದು ಒದೆಯುವುದು ಮತ್ತು ಏಕಾಏಕಿ ಮೇಲೆರಗುತ್ತಿದ್ದು ಐವರನ್ನು ತೀವ್ರಗಾಯಗೊಳಿಸಿದೆ.
ಹನುಮನಹಳ್ಳಿ ಸುತ್ತಮುತ್ತ ಕೋತಿ ಹಾವಳಿ ಹೆಚ್ಚಾಗಿದ್ದು ಕೋತಿ ದಾಳಿ ಘಟನೆಯಲ್ಲಿ ಒಬ್ಬರ ಕೈ ಮುರಿದಿದ್ದು ಉಳಿದವರಿಗೆ ಕೈ,ಕಾಲು ಮತ್ತು ತೊಡೆ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ.
ಹನುಮನಹಳ್ಳಿ ಗ್ರಾಮದ ಮಲ್ಲಮ್ಮ ಸಣ್ಣಲಿಂಗಪ್ಪ(50 ) ಹೊಲದಲ್ಲಿ ಮೇವು ಕೊಯ್ಯುವ ಸಂದರ್ಭದಲ್ಲಿ ಹಿಂದಿನಿಂದ ಕೋತಿ ಆಗಮಿಸಿ ಒದ್ದ ಪರಿಣಾಮ ಬಲಗೈ ಮುರಿದಿದ್ದು ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಮುರಿದ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಪುನಃ ಬುಧವಾರ ಮಧ್ಯಾಹ್ನ ಆಟವಾಡುತ್ತಿದ್ದ ಸಾಗರ್ (12) ಮೀನಾಕ್ಷಿ ನಾಗರಾಜ (23) ಕೋತಿ ಇವರ ಬೆನ್ನು ಬಿದ್ದು ಮನಸೋ ಇಚ್ಛೆ ಕಡಿದ ಪರಿಣಾಮ ಕೈ,ಕಾಲು ಮತ್ತು ತೊಡೆ ಭಾಗದಲ್ಲಿ ಕಚ್ಚಿ ತೀವ್ರ ಗಾಯಗಳಾಗಿವೆ.ಗಾಯಳುಗಳನ್ನು ಗಂಗಾವತಿ ಖಾಸಗಿ ಆಸ್ಪತ್ರೆ ಮತ್ತು ಆನೆಗೊಂದಿ ಸರಕಾರಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗಿದೆ.
Related Articles
ಅಧಿಕಾರಿಗಳ ನಿರ್ಲಕ್ಷ್ಯ
ಹನುಮನಹಳ್ಳಿ ಸುತ್ತಮುತ್ತ ಗ್ರಾಮಗಳ ಜನತೆಗೆ ಕೋತಿಯೊಂದು ಕಾಟಕೊಡುತ್ತಿದ್ದು ಕಳೆದ 20 ದಿನಗಳಲ್ಲಿ ಐವರು ಜನರಿಗೆ ಕಡಿದಿದ್ದು ಇವರಲ್ಲಿ ಮೂರು ಜನರಿಗೆ ತೀವ್ರ ಗಾಯಗಳಾಗಿವೆ.ಈ ಕುರಿತು ಹನುಮನಹಳ್ಳಿಯ ಗ್ರಾಮಸ್ಥರು ತಾಲೂಕು ಆಡಳಿತ ,ಸಾಣಾಪೂರ ಗ್ರಾ.ಪಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮಕೈಗೊಂಡು ಕೋತಿ ಸೆರೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ.ಕೂಡಲೇ ಕೋತಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.