Advertisement
ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸರ್ವಜೀವಿಗಳ ಸಂಕಷ್ಟ ನಿವಾರಣೆಯಾಗಿ ಎಲ್ಲರ ಬದುಕಿನಲ್ಲಿ ಸುಖ-ಶಾಂತಿ ನೆಲೆಸಬೇಕು. ಸಾಧು-ಸಂತರ ತತ್ವಗಳನ್ನು ಅನುಸರಿಸಿದರೆ ಭಾರತ ವಿಶ್ವಗುರುವಾಗುತ್ತದೆ ಎಂದರು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿ, ಯಾರು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೋ ಸಮಾಜ ಅಂಥವರಿಗೆಬೆಲೆ ಕೊಡುತ್ತದೆ. ಈ ಸಮಯವನ್ನು ಹೊಸ ವಿಚಾರ, ಅನುಭವ, ಸಾಧನೆ ಮಾಡಲು ಬಳಸಿಕೊಳ್ಳಬೇಕು ಎಂದರು.
ರಮೇಶ ಹುಂಜಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್.ಎಸ್.ಮಠದ ನಿರೂಪಿಸಿದರು. ಕೆಂಪಣ್ಣಾ ದೇಸಾಯಿ ಸ್ವಾಗತಿಸಿದರು. ಮುಕುಂದ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ ಚೌಗಲೆ ವಂದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥೋತ್ಸವ ನೋಡುಗರ ಮನ ಸೆಳೆಯಿತು. ಕಾಳಿಕಾದೇವಿಗೆ ಪಂಚಾಭಿಷೇಕ, ದೇವಿಗೆ ಉಡಿ ತುಂಬಲಾಯಿತು. ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಕಂಡಿತು.