Advertisement

ಬಾಗ್ದಾದ್ ಹಸಿರು ವಲಯಕ್ಕೆ ಅಪ್ಪಳಿಸಿದ 5 ರಾಕೆಟ್: ಹೆಚ್ಚಾದ ಉದ್ವಿಗ್ನತೆ !

10:02 AM Jan 28, 2020 | Mithun PG |

ಬಾಗ್ದಾದ್: ಅಮೇರಿಕಾ ರಾಯಭಾರ ಕಚೇರಿಗಳು ಸೇರಿದಂತೆ ಹಲವು ವಿದೇಶಿ ರಾಯಭಾರ ಕಚೇರಿಗಳಿರುವ ಬಾಗ್ದಾದ್ ನ ಹಸಿರು ವಲಯಕ್ಕೆ  5  ಕತ್ಯುಷಾ ರಾಕೆಟ್ ಗಳು ಬಂದು ಅಪ್ಪಳಿಸಿವೆ ಎಂದು ಇರಾಕ್ ನ ಭದ್ರತಾ ಪಡೆಗಳು ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ. ಆದರೇ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

Advertisement

ಟೈಗ್ರೀಸ್​ ನದಿ ಸಮೀಪ ದೊಡ್ಡದಾದ ಶಬ್ದ ಕೇಳಿಬಂದಿದೆ. ಬಾಗ್ದಾದ್‌ನ ‘ಹಸಿರು ವಲಯ’ ಇರಾಕಿ ರಾಜಧಾನಿಯ ಮಧ್ಯಭಾಗದಲ್ಲಿ ಹೆಚ್ಚು ಭದ್ರತೆಯುಳ್ಳ ಪ್ರದೇಶವಾಗಿದ್ದು, ಅಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ವಿದೇಶಿ ರಾಜತಾಂತ್ರಿಕ ಕಚೇರಿಗಳು ಇವೆ. ಅಮೇರಿಕಾದ ಸೈನ್ಯವನ್ನು ಬಾಗ್ದಾದ್ ನಿಂದ ಹಿಂತೆಗೆದುಕೊಳ್ಳುವಂತೆ ಸಾವಿರಾರು ಜನರು ಪ್ರತಿಭಟನೆ ನಡೆಸಿದ ಎರಡು ದಿನದಲ್ಲಿ ಈ ರಾಕೆಟ್ ಗಳು ಬಂದು ಅಪ್ಪಳಿಸಿವೆ. ಅಮೆರಿಕವನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.

ಈ ತಿಂಗಳ ಆರಂಭದಲ್ಲಿ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೇರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಜನರಲ್ ಖಾಸೀಂ ಸೊಲೈಮಾನಿ ಅವರನ್ನು ಹತ್ಯೆಗೈಯಲಾಗಿತ್ತು, ಈ ಘಟನೆಯ ನಂತರ  ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next