Advertisement

ದೆಹಲಿಯಲ್ಲಿ ದಿನಕ್ಕೆ 5 ರೇಪ್‌ ಕೇಸ್‌ಗಳು;ಅಂಕಿ ಅಂಶದಲ್ಲಿ ಬಹಿರಂಗ

07:40 AM Jan 10, 2019 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನವೊಂದಕ್ಕೆ ಕನಿಷ್ಠ  5ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂಬ ಕಳವಳಕಾರಿ ವಿಚಾರ ಬುಧವಾರ ಪೊಲೀಸ್‌ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Advertisement

ವಿಶೇಷವೆಂದರೆ ಹೆಚ್ಚಿನ ಅತ್ಯಾಚಾರಗಳನ್ನು  ಸ್ನೇಹಿತರು ಇಲ್ಲ  ಸಂತ್ರಸ್ತೆಯ ಪರಿಚಯಸ್ಥರೇ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.ಕಳೆದ 2 ವರ್ಷಗಳಲ್ಲಿ ಈ ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2017 ರಲ್ಲಿ 39 %(802)ಅತ್ಯಾಚಾರಗಳನ್ನು ಪರಿಚಯಸ್ಥರೇ ಮಾಡಿದ್ದು, 2018 ರಲ್ಲಿ 44%(888)ಪ್ರಕರಣಗಳು ದಾಖಲಾಗಿವೆ.ಈ ಪ್ರಕರಣಗಳಲ್ಲಿ ಆರೋಪಿ ಸಂತ್ರಸ್ತೆಯ ಸ್ನೇಹಿತ ಇಲ್ಲ ಗೆಳೆಯನಾಗಿದ್ದಾನೆ.

ಈ ರೀತಿಯ ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಾದ ಬಳಿಕ 95% ಪ್ರಕರಣಗಳನ್ನು ಬಗೆ ಹರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

2018 ರಲ್ಲಿ 2,043 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು , 2017 ಕ್ಕೆ ತುಲನೆ ಮಾಡಿದರೆ 2,057 ರೇಪ್‌ ಕೇಸ್‌ಗಳು ದಾಖಲಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next