Advertisement

4 ದಿನಗಳಲ್ಲಿ 5 ನೌಕೆಗಳ ಮೇಲೆ ಕಡಲ್ಗಳ್ಳರ ದಾಳಿ

10:01 AM Dec 27, 2019 | Hari Prasad |

ಸಿಂಗಾಪುರ: ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವಂಥ ಸಿಂಗಾಪುರ ಜಲಸಂಧಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಬರೋಬ್ಬರಿ 5 ಹಡಗುಗಳ ಮೇಲೆ ಕಡಲ್ಗಳ್ಳರು ದಾಳಿ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

ಸೋಮವಾರ ರಾತ್ರಿ ಕಚ್ಚಾ ತೈಲ ಟ್ಯಾಂಕರ್‌ವೊಂದರ ಮೇಲೆ ದಾಳಿ ನಡೆದಿದ್ದು, ಅದಾದ ಎರಡೇ ಗಂಟೆಯಲ್ಲಿ ಮತ್ತೂಂದು ನೌಕೆಯ ಮೇಲೆ ದಾಳಿ ನಡೆದಿದೆ. ಎರಡೂ ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ಯತ್ನಿಸಿದ್ದರು.

ಆದರೆ, ಹಡಗಿನಲ್ಲಿದ್ದ ಎಚ್ಚರಿಕೆಯ ಗಂಟೆ ಮೊಳಗಿದ ಕಾರಣ ಅವರ ಯತ್ನ ವಿಫ‌ಲವಾಗಿತ್ತು. ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂಥ 29 ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next