ಕೋಲಾರ: ಕೋವಿಡ್ 19 ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಮುಳಬಾಗಿ ಲಿನ ಐದು ಜನರು ಗುಣಮುಖರಾಗಿ ಶುಕ್ರವಾರ ಎಸ್.ಎನ್. ಆರ್. ಜಿಲ್ಲಾಸ್ಪತ್ರೆ ಯಿಂದ ಬಿಡುಗಡೆಯಾದರು. ಗುಣಮುಖರಾದ ಐವರಿಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಣ್ಣಿನ ಬುಟ್ಟಿ ನೀಡಿ ಶುಭ ಕೋರಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಥಮವಾಗಿ ಮುಳಬಾಗಿಲಿನ 5 ಜನರಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿತ್ತು. ಇವರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೋಲಾರ ಜಿಲ್ಲೆಗೆ ಆಗಮಿ ಸಿದ್ದರು. ಇವರಿಗೆ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಯನ್ನು ಪ್ರಾರಂಭಿಸಲಾಯಿತು. ಇವರ ಗಂಟಲು ದ್ರವವನ್ನು ಪರೀಕ್ಷಿಸಿ ನೆಗೆಟಿವ್ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
14 ಸಕ್ರಿಯ ಪ್ರಕರಣ: ಕೋವಿಡ್ 19ಗೆ ಯಾರು ಆತಂಕ ಪಡಬಾರದು. ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ವಹಿಸಬೇಕು. ಜಿಲ್ಲೆಯಲ್ಲಿ 19 ಪ್ರಕರಣಗಳು ಕಂಡು ಬಂದಿದ್ದವು. ಶುಕ್ರವಾರ 5 ಜನ ಬಿಡುಗಡೆ ಆಗಿರುವುದರಿಂದ 14 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕಂಡು ಬರುವ ಎಲ್ಲಾ ಪ್ರಕರಣಗಳನ್ನು ಗುಣಮುಖ ಗೊಳಿಸಲಾಗುವುದು ಎಂದು ತಿಳಿಸಿದರು. ಶುಕ್ರವಾರ ಪಿ-906, ಪಿ-906, ಪಿ-908, ಪಿ-909 ಮತ್ತು ಪಿ-910 ಪ್ರಕರಣಗಳು ಗುಣ ಮುಖರಾಗಿ ಬಿಡುಗಡೆ ಆದರು. ಈ ಸಂದರ್ಭದಲ್ಲಿ ಬಿಡುಗಡೆ ಆದವರಿಗೆ ಪುಷ್ಪ ಮಳೆ ಸುರಿಸಿ ಅಭಿನಂದನೆ ಸಲ್ಲಿಸಲಾಯಿತು.
ಆರೋಗ್ಯ ಸಿಬ್ಬಂದಿಗೆ ಧನ್ಯವಾದ: ಈ ಸಂದರ್ಭ ದಲ್ಲಿ ಪಾಸಿಟಿವ್ ಆಗಿ ಗುಣಮುಖ ರಾಗಿದ್ದ ಯುವತಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ 19 ಪಾಸಿಟಿವ್ ಬಂದಲ್ಲಿ ಆತಂಕಪಡಬೇಕಾ ಗಿಲ್ಲ, ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸೇವನೆ ಯಿಂದ ಗುಣಪಡಿಸಿ ಕೊಳ್ಳಬಹುದು, ಸರಕಾರಿ ಆಸ್ಪತ್ರೆಯಲ್ಲಿಯೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಾರೆ ಎನ್ನುವುದಕ್ಕೆ ತಾವುಗಳು ಗುಣಮುಖ ರಾಗಿರುವುದೇ ಸಾಕ್ಷಿಯಾಗಿದೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಂಸದ ಎಸ್. ಮುನಿಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾ ಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ನಾರಾಯಣಸ್ವಾಮಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.