ಬೆಂಗಳೂರು: ರಾಜ್ಯದಲ್ಲಿ ಇಂದು ಐದು ಹೊಸ ಕೋವಿಡ್-19 ಪ್ರಕರಣಗಳು ದೃಢವಾಗಿದೆ. ಈ ಎಲ್ಲಾ ಐದು ಪ್ರಕರಣಗಳು ಕಲಬುರಗಿಯಲ್ಲೇ ದೃಢವಾಗಿದೆ.
ಸೋಂಕಿತ ಸಂಖ್ಯೆ 175 ಮತ್ತು 205ರ ಸಂಪರ್ಕದಿಂದ ಈ ಎಲ್ಲಾ ಐದು ಪ್ರಕರಣಗಳು ದೃಢವಾಗಿದೆ.
ಇಂದಿನ ಐದು ನೂತನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.
ಸೋಂಕಿತ ಸಂಖ್ಯೆ 175ರ ಸಂಪರ್ಕದಿಂದ 17 ವರ್ಷ ಮತ್ತು 50 ವರ್ಷದ ಪುರುಷನಿಗೆ ಸೋಂಕು ಖಚಿತವಾಗಿದೆ. ಸೋಂಕಿತ ಸಂಖ್ಯೆ 205ರ ಸಂಪರ್ಕದಿಂದ 13 ವರ್ಷ ಮತ್ತು 19 ವರ್ಷದ ಗಂಡು, 30 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತ ಸಂಖ್ಯೆ 395 ಆಗಿದ್ದು, 111 ಜನರು ಗುಣಮುಖರಾಗಿದ್ದಾರೆ. 16 ಜನರು ಸೋಂಕು ಕಾರಣದಿಂದ ಸಾವನ್ನಪ್ಪಿದ್ದಾರೆ.