Advertisement
1135 ಹಾಸಿಗೆ ನೀಡಲು ಖಾಸಗಿ ವೈದ್ಯಕೀಯ ಕಾಲೇಜಿಗೆ ಸೂಚನೆ :
Related Articles
Advertisement
ಸಹಾಯವಾಣಿ ಕೇಂದ್ರಗಳ ಕರೆ ಮಾರ್ಗಗಳ ಹೆಚ್ಚಳಕ್ಕೆ ಕ್ರಮ :
ಬೆಂಗಳೂರು: ಕೋವಿಡ್ ಸಹಾಯವಾಣಿ ಕೇಂದ್ರಗಳ ಕರೆ ಮಾರ್ಗಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ವಾರ್ ರೂಂ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕೆ.ಆರ್. ವೃತ್ತದಲ್ಲಿನ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿರುವ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿ, 1912 ಸಹಾಯವಾಣಿ ಕೇಂದ್ರದಲ್ಲಿನ ಕಾರ್ಯವೈಖರಿ ಪರಿಶೀಲನೆ ಮಾಡಿದರು. ಇಲ್ಲಿನ ಸಮಸ್ಯೆ ಮತ್ತು ಪರಿಹಾರ ಕುರಿತು ಚರ್ಚಿಸಿದರು. ಸಾರ್ವಜನಿಕರು ಮಾಡುವ ಕರೆಗಳಿಗೆ ತತ್‌ಕ್ಷಣವೇ ಸ್ಪಂದಿಸುವ ಹಾಗೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳ ಬೇಕು ಎಂಬುದರ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಕರೆ ಮಾರ್ಗಗಳ ಸಂಖ್ಯೆ ಹೆಚ್ಚಿಸಲು (ಲೈನ್) ತತ್‌ಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಮಯದಲ್ಲಿ ಸೆಂಟರ್ ಫಾರ್ ಇ- ಗವರ್ನೆನ್ಸ್ ಸಿಇಒ ವಿಪಿನ್ ಸಿಂಗ್, ಬೆಸ್ಕಾಂನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಗೌಡ ಸೇರಿದಂತೆ ಸರಕಾರದ ಉನ್ನತಾಧಿಕಾರಿಗಳು ಹಾಜರಿದ್ದು ಸಚಿವರಿಗೆ ಮಾಹಿತಿ ಒದಗಿಸಿದರು.
ಡೀನ್‌ಗಳೇ ಜವಾಬ್ದಾರಿ ನಿರ್ವಹಿಸಬೇಕು: ಡಿಸಿಎಂ :
ಬೆಂಗಳೂರು: ಕೋವಿಡ್ ಸೋಂಕಿತರಾಗಿ ಮನೆಯಲ್ಲೇ ಐಸೋಲೇಶನ್ ಅಥವಾ ಕ್ವಾರಂಟೈನ್ ಆಗಿರುವವರಿಗೆ ದೂರವಾಣಿ ಮೂಲಕ ವೈದ್ಯಕೀಯ ಸಲಹೆ (ಟೆಲಿ ಕನ್ಸೆಲ್ಟೆನ್ಸಿ) ನೀಡುವುದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವ ಪೂರ್ಣ ಜವಾಬ್ದಾರಿಯನ್ನು ಆಯಾ ವೈದ್ಯ ಕೀಯ ಕಾಲೇಜುಗಳ ಡೀನ್ ಗಳಿಗೆ ವಹಿಸಲಾಗಿದ್ದು, ಇದರಲ್ಲಿ ಕರ್ತವ್ಯ ಲೋಪವಾದರೆ ಡೀನ್‌ಗಳನ್ನೇ ಹೊಣೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಗುರುವಾರ ಕೋವಿಡ್ ಹೋಮ್ ಐಸೋಲೇಶನ್ ವಿಭಾಗದ ಉಸ್ತುವಾರಿಯೂ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅನಂತರ ಮಾತನಾಡಿ, ಟೆಲಿ ಕನ್ಸೆಲ್ಟೆನ್ಸಿ ಸೇವೆಗೆ ವೈದ್ಯ ವಿದ್ಯಾರ್ಥಿಗಳು ಹಾಜರಾಗದಿದ್ದರೆ ಆಯಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರು, ಡೀನ್ ಅಥವಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಟೆಲಿ ಕನ್ಸೆಲ್ಟೆನ್ಸಿ ಸೇವೆ ನೀಡಲು 7 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು 4 ಸಾವಿರ ವಿದ್ಯಾರ್ಥಿಗಳು ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇವಲ 700 ವಿದ್ಯಾರ್ಥಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉಳಿದವರೂ ಈ ಸೇವೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ, ಡಿಸಿಎಂ ಅವರ ಕಾರ್ಯದರ್ಶಿ ಪಿ. ಪ್ರದೀಪ್ ಇದ್ದರು. ಇದೇ ವೇಳೆ ಕೊರೊನಾ ಪರೀಕ್ಷೆ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಜತೆ ಅಶ್ವತ್ಥನಾರಾಯಣ ಚರ್ಚಿಸಿ ದರು. ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ 5 ದಿನ ಚಿಕಿತ್ಸೆ ಪಡೆದ ಸೋಂಕಿತರನ್ನು ಇಂಥ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಬೇಕು ಎಂದು ನಿರ್ದೇಶಿಸಿದರು.
ಭದ್ರಾವತಿಯಲ್ಲಿ ಆಕ್ಸಿಜನ್ ಉತ್ಪಾದನ ಘಟಕ ಪುನರಾರಂಭ :
ಭದ್ರಾವತಿ: ರಾಜ್ಯದಲ್ಲಿ ಉದ್ಭವಿಸಿರುವ ಆಕ್ಸಿಜನ್ ಸಮಸ್ಯೆ ಪರಿಹಾರಕ್ಕಾಗಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಆಕ್ಸಿಜನ್ ಘಟಕ ಪುನರಾರಂಭಗೊಂಡಿದ್ದು, ಉತ್ಪಾದನೆ ಆರಂಭಿಸಲಾಗಿದೆ.
ಕೊರೊನಾ ತೀವ್ರವಾಗಿ ವ್ಯಾಪಿಸು ತ್ತಿರುವ ಬೆನ್ನಲ್ಲೇ ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಕೊರತೆಯೂ ಉದ್ಭವಿಸಿರುವುದರಿಂದ ಈ ಘಟಕ ಪುನರಾರಂಭಕ್ಕೆ ಸರಕಾರ ಮುಂದಾ ಗಿದೆ. ಆಕ್ಸಿಜನ್ ಪೂರೈಕೆಯ ಹೊಣೆ ಹೊತ್ತಿರುವ ಕೈಗಾರಿಕ ಸಚಿವ ಜಗದೀಶ ಶೆಟ್ಟರ್ ಕಾರ್ಖಾನೆ ಆವರಣದಲ್ಲಿರುವ ಎಂಎಸ್‌ಪಿಎಲ್ ಆಕ್ಸಿಜನ್ ಉತ್ಪಾದನ ಘಟಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅ ಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು.
ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವುದಕ್ಕೆ ಪ್ರತೀ ತಿಂಗಳು ಅಂದಾಜು 10 ರಿಂದ 12 ಲಕ್ಷ ರೂ. ವೆಚ್ಚ ತಗಲುತ್ತದೆ. ಪ್ರತೀ ದಿನ ಉತ್ಪಾದನೆಗಾಗಿ 2 ಲಕ್ಷ ರೂ. ವಿದ್ಯುತ್ ಬಿಲ್ ಅಂದಾಜಿಸಲಾಗಿದ್ದು, ಇದನ್ನು ಜಿಲ್ಲಾಡಳಿತ ಪಾವತಿಸಲಿದೆ. ಜಿಲ್ಲೆಯಲ್ಲಿರುವ ಆಕ್ಸಿಜನ್ ಕೊರತೆ ನೀಗಿ ಅತೀ ಶೀಘ್ರದಲ್ಲಿ ಆಕ್ಸಿಜನ್ ಉತ್ಪಾದನ ಪ್ರಮಾಣವನ್ನು ಹೆಚ್ಚಿಸಿ, ಅಗತ್ಯವಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಸಹ ಆಕ್ಸಿಜನ್ ರವಾನಿಸಲು ನಿರ್ಧರಿಸಲಾಗಿದೆ ಎಂದರು.
ಮಾಹಿತಿ ಪಡೆದ ಸಚಿವರು ಕಾರ್ಖಾನೆಗೆ ಭೇಟಿ ನೀಡುವ ಮುನ್ನ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸಭೆ ನಡೆಸಿದ ಸಚಿವರು, ಜಿಲ್ಲಾಡಳಿತ ಹಾಗೂ ವಿಐಎಸ್‌ಎಲ್ ಅಧಿಕಾರಿ ಗಳಿಂದ ಆಕ್ಸಿಜನ್ ಪ್ಲಾಂಟ್‌ನ ಕುರಿತಾಗಿ ಮಾಹಿತಿ ಪಡೆದರು.
ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇದು ಪ್ರಚಾರ ತೆಗೆದುಕೊಳ್ಳುವ ಸಮಯವಲ್ಲ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಮಾತನಾಡಿದ್ದೇನೆ. ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದಾರೆ. ಇವತ್ತು 975 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುತ್ತಿದ್ದಾರೆ.-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಲ್ಯಾಬ್‌ಗಳನ್ನು ಮತ್ತಷ್ಟು ಬಲಪಡಿಸ ಬೇಕು. ಸ್ಯಾಂಪಲ್ ಕೊಟ್ಟ 24 ಗಂಟೆ ಒಳಗೆ ಫಲಿತಾಂಶ ಬರುವಂತೆ ಮಾಡಬೇಕು. ಎಷ್ಟು ಬೇಗ ಫಲಿತಾಂಶ ಹೊರಬಿದ್ದು ಚಿಕಿತ್ಸೆ ವೇಗಗತಿಯಲ್ಲಿ ನೀಡಲಾಗುತ್ತದೋ ಅಷ್ಟು ಬೇಗ ಸಾವು ತಡೆಯಬಹುದು. ಈ ಬಗ್ಗೆ ಉಪೇಕ್ಷೆ ಸರಿಯಲ್ಲ. – ಡಾ| ಸಿ.ಎನ್.ಅಶ್ವತ್ಥನಾರಾಯಣ, ಡಿಸಿಎಂ
ಬೆಂಗಳೂರಿನಲ್ಲಿ ಒಟ್ಟು 5,000 ಸ್ಟೆಪ್ ಡೌನ್ ಹಾಸ್ಪಿಟಲ್ ನಿರ್ಮಾಣದ ಗುರಿ ಇದೆ. ಇದಕ್ಕಾಗಿ ಆಸ್ಪತ್ರೆ ಪಕ್ಕದ ದೊಡ್ಡ ಹೊಟೇಲ್ ಗಳಲ್ಲಿನ ರೂಂಗಳನ್ನು ಪಡೆಯಲಾ ಗುತ್ತಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. -ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಕೆಲವು ಮೆಡಿಕಲ್ ಕಾಲೇಜಿನಲ್ಲಿ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರು ಬಂದಿದೆ. ಯಾವ ಡಾಕ್ಟರ್ ಯಾವ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದೇನೆ.-ಆರ್. ಅಶೋಕ್, ಕಂದಾಯ ಸಚಿವ
ರಾಜ್ಯದಲ್ಲಿ ಸುಮಾರು 5 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. 18-44 ವರ್ಷದ ವರಿಗೆ ನೀಡಲು 2 ಕೋಟಿಯಷ್ಟು ಲಸಿಕೆ ಆರ್ಡರ್ ಮಾಡಲಾಗಿದೆ. ಮೇ 15 ರ ವೇಳೆಗೆ ಕಂಪೆನಿಗ ಳಿಂದ ನೇರವಾಗಿ ಲಸಿಕೆ ರವಾನೆಯಾಗಲಿದೆ. -ಡಾ| ಕೆ. ಸುಧಾಕರ್, ಆರೋಗ್ಯ ಸಚಿವ