Advertisement

ಪಾಕ್ ನಲ್ಲಿ ಒಂದೇ ಕುಟುಂಬದ ಐವರು ಹಿಂದೂಗಳ ಕತ್ತು ಸೀಳಿ ಕೊಲೆ

01:13 PM Mar 07, 2021 | Team Udayavani |

ಇಸ್ಲಮಾಬಾದ್: ಹಿಂದೂ ಕುಟುಂಬವೊಂದರ ಐವರು ಸದಸ್ಯರನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Advertisement

ಪಾಕ್​ ನಗರ ರಹೀಮ್​ ಯಾರ್​ ಖಾನ್​ನಿಂದ 15 ಕಿ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿನ ನಿವಾಸದಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ದಿ ನ್ಯೂಸ್​ ಇಂಟರ್ ನ್ಯಾಶನಲ್ ​ ವರದಿ ಮಾಡಿದೆ.

ಹರಿತವಾದ ಆಯುಧದಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಿಂದ ಹರಿತವಾದ ಕತ್ತಿ ಮತ್ತು ಗರಗಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಆಧುನಿಕ ಯುಗದ ಗ್ರಾಫಿಕ್ಸ್ ಗೆ ಬಲಿಪಶುವಾಗುವ ಭಯ ಕಾಡುತ್ತಿದೆ: ಸಿ.ಪಿ. ಯೋಗೇಶ್ವರ್

ಮೃತಪಟ್ಟವರಲ್ಲಿ ಓರ್ವ 35 ವರ್ಷದ ರಾಮ್ ಚಾಂದ್ ಎಂದು ಗುರುತಿಸಲಾಗಿದೆ. ಈತ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಎಂದು ಸಾಮಾಜಿಕ ಕಾರ್ಯಕರ್ತ ಬ್ರಿಬಲ್ ದಾಸ್ ಅವರು ದಿ ನ್ಯೂಸ್ ಇಂಟರ್ ನ್ಯಾಶನಲ್ ಗೆ ಹೇಳಿಕೆ ನೀಡಿದ್ದಾರೆ.

Advertisement

ಇದನ್ನೂ ಓದಿ: ಕೇಂದ್ರ ಸರ್ಕಾರದ ಈ ನಿರ್ಧಾರ ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ: ಕುಮಾರಸ್ವಾಮಿ ಕಳವಳ

Advertisement

Udayavani is now on Telegram. Click here to join our channel and stay updated with the latest news.

Next