Advertisement

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

05:08 PM May 06, 2024 | Team Udayavani |

ಚೆನ್ನೈ: ಇಬ್ಬರು ಮಹಿಳೆಯರು ಸೇರಿದಂತೆ ಐವರು ವೈದ್ಯಕೀಯ ವಿದ್ಯಾರ್ಥಿಗಳು ತಮಿಳುನಾಡಿನ ಕನ್ಯಾಕುಮಾರಿ ಕರಾವಳಿಯ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ತಮ್ಮ ಕೋರ್ಸ್‌ನ ಕೊನೆಯ ವಾರಗಳಲ್ಲಿರುವ ವಿದ್ಯಾರ್ಥಿಗಳು ಖಾಸಗಿ ಬೀಚ್‌ನಲ್ಲಿ ಈಜಲು ಹೊರಟಿದ್ದರು. ಖಾಸಗಿ ಬೀಚ್ ಗೆ ಪ್ರವೇಶ ನಿರಾಕರಿಸಿದ್ದರೂ ವಿದ್ಯಾರ್ಥಿಗಳು ಈಜಲು ಹೋಗಿದ್ದರು ಎಂದು ವರದಿಯಾಗಿದೆ.

“ವಿದ್ಯಾರ್ಥಿಗಳ ತಂಡವು ಮುಚ್ಚಿದ ಲೆಮೂರ್ ಬೀಚ್ ಗೆ ತೆಂಗಿನ ತೋಟದ ಮೂಲಕ ಪ್ರವೇಶಿಸಿದೆ. ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ಅದನ್ನು ಮುಚ್ಚಲಾಗಿತ್ತು. ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಕನ್ಯಾಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇ ಸುಂದರವತನಂ ತಿಳಿಸಿದ್ದಾರೆ.

ತಿರುಚಿರಾಪಳ್ಳಿಯ ಎಸ್‌ಆರ್‌ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಗುಂಪು ಭಾನುವಾರ ಕನ್ಯಾಕುಮಾರಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ತಮ್ಮೊಳಗೆ ಸಣ್ಣ ಗುಂಪುಗಳಾಗಿ ಮಾಡಿಕೊಂಡ ಅವರುಗಳು ನಗರದಲ್ಲಿ ಸುತ್ತಾಡಿದ್ದರು. ಈ ನಿರ್ದಿಷ್ಟ ಗುಂಪು ಖಾಸಗಿ ಬೀಚ್‌ ಗೆ ಬಂದಿತು.

ಮೃತರನ್ನು ತಂಜಾವೂರಿನ ಚಾರುಕವಿ, ನೇವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ ನ ಪ್ರವೀಣ್ ಸ್ಯಾಮ್ ಮತ್ತು ಆಂಧ್ರಪ್ರದೇಶದ ವೆಂಕಟೇಶ್ ಎಂದು ಗುರುತಿಸಲಾಗಿದೆ.

Advertisement

ಇತರ ಮೂವರು ಮಹಿಳಾ ಇಂಟರ್ನಿಗಳಾದ ಕರೂರಿನ ನೇಶಿ, ತೇಣಿಯ ಪ್ರೀತಿ ಪ್ರಿಯಾಂಕಾ ಮತ್ತು ಮಧುರೈನ ಶರಣ್ಯ ಅವರನ್ನು ರಕ್ಷಿಸಲಾಗಿದ್ದು, ಆಸರಿಪಳ್ಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next