Advertisement
ಮೃತರನ್ನು ಸುಂದರ್ ಕರ್ಮಾಲಿ, ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಗುರುತಿಸಲಾಗಿದೆ.
ಸುಂದರ್ ಕರ್ಮಾಲಿ ಹಾಗೂ ಪತ್ನಿ ರೂಪಾ ದೇವಿ ಅದ್ಯಾವುದೋ ವಿಚಾರಕ್ಕೆ ಹೊಸ ವರ್ಷದ ಮೊದಲ ದಿನ(ಜ.1) ಜಗಳವಾಡಿಕೊಂಡಿದ್ದಾರೆ ಅದ್ಯಾಕೋ ಜಗಳ ವಿಪರೀತ ಹಂತಕ್ಕೆ ತಲುಪಿದೆ ಈ ವೇಳೆ ಪತಿ ಸುಂದರ್ ತನ್ನ ಬೈಕನ್ನು ಬಾವಿಗೆ ದೂಡಿದ್ದಾನೆ. ಇದಾದ ಸ್ವಲ್ಪ ಸಮಯದ ನಂತರ ತನ್ನ ತಪ್ಪಿನ ಅರಿವಾಗಿ ಬಾವಿಗೆ ದೂಡಿದ ಬೈಕನ್ನು ಮೇಲಕ್ಕೆ ತೆಗೆಯಲು ಬಾವಿಗೆ ಇಳಿದಿದ್ದಾನೆ. ಈ ವೇಳೆ ಸುಂದರ್ ಅಸ್ವಸ್ಥಗೊಂಡಿದ್ದಾನೆ ಇದನ್ನು ಕಂಡ ಪತ್ನಿ ರೂಪ ತನ್ನ ಗಂಡನನ್ನು ರಕ್ಷಣೆ ಮಾಡುವಂತೆ ಬೊಬ್ಬೆ ಹೊಡೆದಿದ್ದಾಳೆ ಮಹಿಳೆಯ ಬೊಬ್ಬೆ ಕೇಳಿ ನೆರೆಮನೆಯ ನಾಲ್ವರು ಯುವಕರು ಬಾವಿಗೆ ಬಿದ್ದ ಮಹಿಳೆಯ ಪತಿಯ ರಕ್ಷಣೆಗೆ ಮುಂದಾಗಿ ಒಬ್ಬರ ಹಿಂದೆ ಒಬ್ಬರಂತೆ ಬಾವಿಗೆ ಇಳಿದಿದ್ದಾರೆ, ಹೀಗೆ ಬಾವಿಗೆ ಇಳಿದ ಎಲ್ಲರೂ ಅಸ್ವಸ್ಥಗೊಂಡು ಬಾವಿಯಲ್ಲೇ ಪ್ರಾಣ ಬಿಟ್ಟಿದ್ದಾರೆ.
Related Articles
Advertisement
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು