Advertisement

ಐವರು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕರ ಬಿಡುಗಡೆ

09:53 AM Dec 31, 2019 | Hari Prasad |

ಶ್ರೀನಗರ: 148 ದಿನಗಳ ಕಾಲ ಗೃಹಬಂಧನದಲ್ಲಿ ಇರಿಸಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ರಾಜಕಾರಣಿಗಳನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ.

Advertisement

ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕರಾದ ಇಷ್ಫಾಕ್‌ ಜಬ್ಟಾರ್‌ ಮತ್ತು ಗುಲಾಮ್‌ ನಬಿ ಭಟ್‌, ಪಿಡಿಪಿಯ ಬಷೀರ್‌ ಮಿರ್‌, ಝಹೂರ್‌ ಮಿರ್‌ ಮತ್ತು ಯಾಸಿರ್‌ ರೆಸಿ ಅವರನ್ನು ಎಂಎಲ್‌ಎ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಅವರೆಲ್ಲರೂ ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಮುಷ್ಕರಗಳಿಗೆ ಕರೆ ನೀಡುವುದಿಲ್ಲ ಎಂದು ವಾಗ್ಧಾನ ಮಾಡಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next