ಸಂಕ್ರಾಂತಿ ಹಬ್ಬದ ಬಳಿಕ ನಿಧಾನವಾಗಿ ಒಂದರ ಹಿಂದೊಂದು ಹೊಸ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಳ್ಳುತ್ತಿವೆ. ಈಗಾಗಲೇ ದರ್ಶನ್ ಅಭಿನಯದ “ರಾಬರ್ಟ್’, ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’, ಧ್ರುವ ಸರ್ಜಾ ಅಭಿನಯದ “ಪೊಗರು’, ಸುದೀಪ್ ಅಭಿನಯದ “ಕೋಟಿಗೊಬ್ಬ-3′, ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’ ಹೀಗೆ ಅನೇಕ ಸ್ಟಾರ್ ನಟರ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಚಿತ್ರರಂಗದ ಮೂಲಗಳ ಪ್ರಕಾರ ಫೆಬ್ರವರಿ ಮೊದಲ ವಾರದಿಂದ, ತಿಂಗಳಿಗೆ ಕನಿಷ್ಟ ಅಂದ್ರೂ ಒಂದು -ಎರಡು ಸ್ಟಾರ್ ನಟರ, ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವುದು ಬಹುತೇಕ ಪಕ್ಕಾ ಆಗಿದೆ.
ಇದರ ನಡುವೆಯೇ ತಮ್ಮ ಬಿಡುಗಡೆಗಾಗಿ ಕಳೆದ ಹಲವು ತಿಂಗಳಿನಿಂದ ಕಾದುಕುಳಿತಿದ್ದ ಅನೇಕ ಹೊಸಬರ ಸಿನಿಮಾಗಳು ಕೂಡ ನಿಧಾನವಾಗಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಳ್ಳುತ್ತಿವೆ. ಸ್ಟಾರ್ ನಟರ, ಬಿಗ್ ಬಜೆಟ್ ಸಿನಿಮಾಗಳ ನಡುವೆಯೇ ಸಿಕ್ಕ ಸಮಯಾವಕಾಶವನ್ನು ಬಳಸಿಕೊಂಡು ಅನೇಕ ಹೊಸಬರ ಸಿನಿಮಾಗಳು ಥಿಯೇಟರ್‌ಗೆ ಬರಲು ರೆಡಿಯಾಗಿ ಕೂತಿವೆ.
ಈ ವರ್ಷದ ಆರಂಭದಿಂದಲೇ ವಾರಕ್ಕೆ ಒಂದು -ಎರಡು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಈ ವಾರ ಬರೋಬ್ಬರಿ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಲಡ್ಡು’, “ಕತ್ಲೆಕಾಡು’, “ಪಂಟ್ರಾ’, “ತಲಾಖ್ ತಲಾಖ್ ತಲಾಖ್’ ಮತ್ತು “ರಾಜಮಾರ್ಗ’ ಸೇರಿದಂತೆ ಐದು ಸಿನಿಮಾಗಳು ಈ ವಾರ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ಸಿನಿಮಾಗಳ ಪಟ್ಟಿಗೆ ಇನ್ನೆರಡು ದಿನದಲ್ಲಿ ಇನ್ನೂ ಕೆಲ ಹೊಸಚಿತ್ರಗಳ ಹೆಸರು ಸೇರ್ಪಡೆಯಾದರೂ, ಆಗಬಹುದು ಎನ್ನುತ್ತಿವೆ ಗಾಂಧಿನಗರದ ಮೂಲಗಳು.
ಇನ್ನು ಮುಂದಿನ ವಾರ ಕೂಡ ಮೂರು ಹೊಸಬರ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಈ ಪಟ್ಟಿಗೆ ಇನ್ನೂ ಎರಡು -ಮೂರು ಹೊಸಚಿತ್ರಗಳ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಒಟ್ಟಾರೆ ಕಳೆದ ಒಂದು ವರ್ಷದಿಂದ ಈಚೆಗೆ ಸಿನಿಮಾಗಳ ಬಿಡುಗಡೆ ಇಲ್ಲದೆ ಭಣಗುಡುತ್ತಿದ್ದ ಚಿತ್ರಮಂದಿರಗಳ ಮುಂದೆ ಮತ್ತೆ ಸಾಲು ಸಾಲು ಸಿನಿಮಾಗಳ ಕಟೌಟ್ ಬೀಳುತ್ತಿದ್ದು, ತಮ್ಮ ಅಭಿರುಚಿಗೆ ತಕ್ಕಂತೆ ಹತ್ತಾರು ಭಿನ್ನ – ವಿಭಿನ್ನ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕ ಪ್ರಭುಗಳ ಮುಂದೆ ಇದೆ.
ಆದರೆ ಇಷ್ಟೊಂದು ಹೊಸಬರ ಚಿತ್ರಗಳ ಯಾವ ಚಿತ್ರಗಳು ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರಲಿವೆ ಅನ್ನೋದಕ್ಕೆ ಮಾತ್ರ ಸದ್ಯಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಅದೇನೆ ಇರಲಿ, ಒಟ್ಟಾರೆ ಸಾಲು ಸಾಲು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡು ಥಿಯೇಟರ್‌ಗೆ ಬರುತ್ತಿರುವುದರಿಂದ, ನಿಧಾನವಾಗಿ ಚಿತ್ರರಂಗ ಮತ್ತೆ ಕಳೆಕಟ್ಟುತ್ತಿರುವುದಂತೂ ಸುಳ್ಳಲ