Advertisement
ನಿಷ್ಕಳಂಕ ಆಡಳಿತಭ್ರಷ್ಟಾಚಾರ ರಹಿತ ಆಡಳಿತ ಬಿಜೆಪಿ ಸರಕಾರದಲ್ಲಿ ಕಂಡು ಬಂದಿತ್ತು. ಯಾವುದೇ ಗಂಭೀರ ಸ್ವರೂಪದ ಆರೋಪಗಳು ಕೇಳಿಬರದಂತೆ ಸರಕಾರ ನಡೆದಿತ್ತು. ತನ್ನ ಸಂಸದರು ಮತ್ತು ಸಚಿವರನ್ನು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಪಕ್ಷ ಎಚ್ಚರಿಕೆ ವಹಿಸಿತ್ತು. ಇದು ಪರೋಕ್ಷವಾಗಿ ದೇಶದಲ್ಲಿ ಮೋದಿ ಹಾಗೂ ಸರಕಾರದ ಕುರಿತು ಒಳ್ಳೆಯ ಅಭಿಪ್ರಾಯ ಮೂಡಿ ಬರಲು ನೆರವಾಗಿತ್ತು.
ಸಂಬಂಧ ವೃದ್ಧಿಗಾಗಿ ಮೋದಿ ನಡೆಸಿದ ವಿದೇಶ ಪ್ರವಾಸ ಪ್ಲಸ್ ಆಯಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜತೆಗೆ ಸ್ನೇಹ ವೃದ್ಧಿಗೆ ಸರಕಾರ ಗಮನ ಹರಿಸಿತ್ತು. ಪುಲ್ವಾಮಾ ಮತ್ತು ಬಾಲಾಕೋಟ್ ಘಟನೆ ಬಳಿಕ ಪಾಕಿಸ್ಥಾನದ ಜತೆಗೆ ಯುದೊœàನ್ಮಾದ ಏರ್ಪಟ್ಟಾಗ ಚೀನ ಹೊರತು ಪಡಿಸಿ ಇತರ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತವು. ಜೈಶ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವ ಭಾರತದ ಆಗ್ರಹಕ್ಕೆ ರಾಷ್ಟ್ರಗಳ ಬೆಂಬಲ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮ
ಬಿಜೆಪಿ ತನ್ನ ಐಟಿ ಸೆಲ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದೆ. ಪಕ್ಷ ಅಧಿಕಾರಕ್ಕೆ ಬಂದಾಗಿನ ದಿನಗಳಿಂದ ಸರಕಾರದ ಹಲವು ಕಾರ್ಯಕ್ರಮಗಳಿಗೆ ಪ್ರಚಾರ ನೀಡಿದೆ. ವಿಪಕ್ಷಗಳ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡುತ್ತಿತ್ತು. ಬಿಜೆಪಿ ಐಟಿ ಸೆಲ್‌ಗಳಿಗೆ ಪ್ರತಿ ಯಾಗಿ ವಿಪಕ್ಷಗಳ ಐಟಿ ಸೆಲ್‌ಗಳು ಪೈಪೋಟಿ ನೀಡುವಂತಿರಲಿಲ್ಲ. ಇದು ಯುವ ಜನರನ್ನು ಸೆಳೆಯಿತು.
Related Articles
ಬಿಜೆಪಿ ಯುವ ಮತದಾರರ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಮೋದಿ ಅವರ ಹಿಂದೂ ಟ್ರಂಪ್ ಕಾರ್ಡ್ ಮತ್ತು ಕೆಲವು ಘೋಷಣೆಗಳು ಯುವಕರನ್ನು ಹೆಚ್ಚು ಆಪ್ತರನ್ನಾಗಿಸಿತು. ಫೇಸ್‌ಬುಕ್, ಟ್ವೀಟರ್‌ನಲ್ಲಿ ಮೋದಿ ಬೆಂಬಲಿಸುವ ಯುವಕರ ಸಂಖ್ಯೆ ಹೆಚ್ಚಾಯಿತು. ಇತ್ತೀಚಿನ ವರ್ಷಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಅಂಶ ಬಿಜೆಪಿಯ ಪರವಾಗಿ ಕೆಲಸ ಮಾಡಿತು.
Advertisement
ಸದಾ ಕ್ರಿಯಾಶೀಲತೆನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರತಿ ನಿತ್ಯವೂ ಸುದ್ದಿಯಲ್ಲಿರುತ್ತಿದ್ದರು. ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಪ್ರಧಾನಿಯಾದ ಬಳಿಕ ನಡೆದ ಕೆಲವು ಘಟನೆಗಳಿಗೆ ಸ್ಪಂದಿಸಿದ ರೀತಿ ದೇಶದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿದಿನ ಒಂದಲ್ಲ ಒಂದು ಕಾರ್ಯದ ನಿಮಿತ್ತ ಸದಾ ಸುದ್ದಿಯ ಮುಖ್ಯ ಭೂಮಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಜನರಿಗೂ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಮೋದಿ ಅವರಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯಬಹುದು ಎಂಬ ನಂಬಿಕೆ ಅವರಲ್ಲಿ ಮನೆ ಮಾಡಿ ಕಮಲದತ್ತ ಮತ ಚಲಾಯಿಸಲ್ಪಟ್ಟಿತು.