Advertisement

ರಾಯಗಢ ನದಿಯಲ್ಲಿ ಇಬ್ಬರು ಮಕ್ಕಳ ಸಹಿತ ಐವರು ಮುಳುಗಿ ಸಾವು

12:15 PM Jun 07, 2017 | Team Udayavani |

ಮುಂಬಯಿ : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶಿರವಳ್ಳಿ ನದಿಯಲ್ಲಿ ಇಬ್ಬರು ಮಕ್ಕಳ ಸಹಿತ ಐವರು ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಇಂದು ಬುಧವಾರ ಬೆಳಗ್ಗೆ ಇಬ್ಬರು ಮಕ್ಕಳೊಂದಿಗೆ ಮೂವರು ಮಹಿಳೆಯರು ಬಟ್ಟೆ ತೊಳೆಯಲೆಂದು ನದೀ ದಡಕ್ಕೆ ಹೋಗಿದ್ದಾಗ ಈ ದುರ್ಘ‌ಟನೆ ನಡೆಯಿತೆಂದು ಅವರು ಹೇಳಿದ್ದಾರೆ. 

ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾಗ ಮಕ್ಕಳು ನೀರಿನಲ್ಲಿ ಆಟವಾಡಿಕೊಂಡಿದ್ದರು. ಆಗ ಅವರು ಮುಳುಗಿ ಮೃತಪಟ್ಟರು ಎಂದು ತಿಳಿದು ಬಂದಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next