Advertisement

ನಾರ್ತ್‌ ಕೆರೋಲಿನಾಗೆ ಅಪ್ಪಳಿಸಿದ ಫ್ಲಾರೆನ್ಸ್‌

01:31 PM Sep 15, 2018 | Team Udayavani |

ವಿಲ್ಲಿಂಗ್ಟನ್‌: ಉತ್ತರ ಕೆರೋಲಿನಾದ ರೈಟ್ಸ್‌ವಿಲ್ಲೆ ಬೀಚ್‌ಗೆ ಶುಕ್ರವಾರ ಸಂಜೆ ವೇಳೆಗೆ ಫ್ಲಾರೆನ್ಸ್‌ ಚಂಡಮಾರುತ ಅಪ್ಪಳಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಚಂಡಮಾರುತದ ಪರಿಣಾಮ ಎಂಬಂತೆ, ನಾರ್ತ್‌ ಕೆರೋಲಿನಾದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ಜೊತೆಗೆ ಗಂಟೆಗೆ 90 ಮೈಲು ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹೊರಬಾರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Advertisement

ಜಾಕ್ಸನ್‌ವಿಲ್ಲೆಯಲ್ಲಿ ಬಿರುಗಾಳಿಯ ರಭಸಕ್ಕೆ ಮೋಟೆಲ್‌ವೊಂದು ಕುಸಿದು ಬಿದ್ದಿದ್ದು, ಒಳಗಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ನ್ಯೂ ಬರ್ನ್ ಸಿಟಿಯಲ್ಲಿ ಸಿಲುಕಿಕೊಂಡಿದ್ದ 150 ಮಂದಿಯನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. 12 ಸಾವಿರಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. 4.50 ಲಕ್ಷಕ್ಕೂ ಅಧಿಕ ಮನೆಗಳು ಹಾಗೂ ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನವೇ ಮಿಯಾಮಿಯಲ್ಲಿರುವ ನ್ಯಾಷನಲ್‌ ಹರಿಕೇನ್‌ ಸೆಂಟರ್‌, ಭಾರೀ ಪ್ರಮಾಣದ ಬಿರುಗಾಳಿ ಬೀಸುವ ಕುರಿತು ಮುನ್ಸೂಚನೆ ನೀಡಿತ್ತು. ಅದರಂತೆ, ಗಾಳಿಯ ರಭಸಕ್ಕೆ ಕೆರೋಲಿನಾ ಕರಾವಳಿಯುದ್ದಕ್ಕೂ ಸಮುದ್ರದ ನೀರು ತೀರಪ್ರದೇಶದ ರಸ್ತೆಗಳನ್ನು ಜಲಾವೃತಗೊಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next