Advertisement

ಜಗನ್‌ ಸಂಪುಟದಲ್ಲಿ ಐವರು ಡಿಸಿಎಂಗಳು

10:53 AM Jun 09, 2019 | mahesh |

ಅಮರಾವತಿ: ದೇಶದಲ್ಲಿಯೇ ಮೊದಲ ಬಾರಿಗೆ ಎಂಬಂತೆ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದ ನೂತನ ಸರ್ಕಾರವು ಐವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಂಡಿದೆ. ಶುಕ್ರವಾರ ಬೆಳಗ್ಗೆ ನಡೆದ ವೈಎಸ್‌ಆರ್‌ ಕಾಂಗ್ರೆಸ್‌ನ ಶಾಸಕರ ಸಭೆಯಲ್ಲಿ ಸಿಎಂ ಜಗನ್‌ ಈ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.

Advertisement

ಜತೆಗೆ 20 ಮಂದಿ ಸಚಿವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ನೂತನ ಸಚಿವರ ಪದಗ್ರಹಣ ಸಮಾರಂಭ ಶನಿವಾರ ನಡೆಯಲಿದೆ. ವಿಶೇಷವೆಂದರೆ, ದೇಶದಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದ ಉಪಮುಖ್ಯಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ.

ಐವರು ಉಪಮುಖ್ಯಮಂತ್ರಿಗಳನ್ನು ಆಂಧ್ರಪ್ರದೇಶದ ಐದು ಭಾಗಗಳಿಂದ ಮತ್ತು ಐದು ಸಮುದಾಯದಿಂದ ಆಯ್ಕೆ ಮಾಡ ಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಕಾಪು ಸಮುದಾಯಕ್ಕೆ ನೀಡಲಾಗಿದೆ. ಇವರೆಲ್ಲರ ಆಡಳಿತಾವಧಿ ಎರಡೂವರೆ ವರ್ಷ ಮಾತ್ರ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next