Advertisement

ಹಕ್ಕು ಚಲಾಯಿಸಿದ್ದಕ್ಕೆ ಐದು ಗುಂಡುಗಳು ದೇಹ ಹೊಕ್ಕವು!

02:05 AM May 22, 2019 | Team Udayavani |

ಇದು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆದ ಘಟನೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಲ್ಲಿನ ಗ್ರಾಮವೊಂದರ ಮತಗಟ್ಟೆಯಲ್ಲಿ ಚಲಾವಣೆ ಯಾದ ಮತಗಳು ಕೇವಲ 7. ಆ ಪೈಕಿ 5 ಮತಗಳು ಪಿಡಿಪಿ ಕಾರ್ಯಕರ್ತ ಮೊಹಮ್ಮದ್‌ ಜಮಾಲ್‌ ಅವರ ಕುಟುಂಬ ಸದಸ್ಯರದ್ದು. ಆದರೆ, ತಮ್ಮ ಕುಟುಂಬವನ್ನು ಹಕ್ಕು ಚಲಾಯಿಸಲು ಪ್ರೋತ್ಸಾಹಿಸಿ, ಮತಗಟ್ಟೆಗೆ ಕರೆದೊಯ್ದಿದ್ದಕ್ಕೆ ಜಮಾಲ್‌ಗೆ ಸಿಕ್ಕ ಪ್ರತಿ ಫ‌ಲವೇನು ಗೊತ್ತಾ? ಸಾವು!

Advertisement

ಮತದಾನದ ಮಾರನೇ ದಿನವೇ 5 ಗುಂಡುಗಳು ಜಮಾಲ್‌ರ ದೇಹವನ್ನು ಹೊಕ್ಕಿವೆ. ಮನೆಯೊಳಗೆ ಕೊಠಡಿಯಲ್ಲಿ ಕುಳಿತಿದ್ದ ಅವರನ್ನು ಕಿಟಕಿಯಾಚೆಯಿಂದ ಬಂದು ಹತ್ಯೆಗೈಯಲಾಗಿದೆ. ಇದು ಕಣಿವೆ ರಾಜ್ಯದ ಉಗ್ರರು ನಡೆಸಿದ ದುಷ್ಕೃತ್ಯ. ಮತದಾನಕ್ಕೆ ಬಹಿಷ್ಕಾರ ಹಾಕುವಂತೆ ಉಗ್ರರು ಕರೆ ನೀಡಿದ್ದರು. ಹೀಗಾಗಿ, ಜಮ್ಮು-ಕಾಶ್ಮೀರದ ಈ ಗ್ರಾಮದಲ್ಲಿನ ಬಹುತೇಕ ಮಂದಿ ಹಕ್ಕು ಚಲಾಯಿಸುವ ಧೈರ್ಯ ತೋರಿರಲಿಲ್ಲ. ಆದರೆ, ಜಮಾಲ್‌ ಕುಟುಂಬದ ಐವರು ಸದಸ್ಯರು ಮತ್ತು ಇತರೆ ಇಬ್ಬರು ಮಾತ್ರ ಅಂದು ಮತದಾನ ಮಾಡಿದ್ದರು. ಈ ಮಾಹಿತಿ ಪಡೆದ ಉಗ್ರರು, ಜಮಾಲ್‌ರ ಮನೆಗೆ ನುಗ್ಗಿ ಅವರನ್ನು ಕೊಂದು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next