Advertisement

ಮೂಡಲಗಿಯ ಐದು ಸೇತುವೆಗಳು ಸಂಪೂರ್ಣ ಮುಳಗಡೆ: ಸಂಚಾರ ಸ್ಥಗಿತ

11:15 AM May 21, 2022 | Team Udayavani |

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿದ್ದು, ಮೂಡಲಗಿ ತಾಲೂಕಿನ ಘಟಪ್ರಭಾ ನದಿಯ ಐದು ಸೇತುವೆಗಳು (ಬ್ರೀಡ್ಜ್ ಕಂ ಬ್ಯಾರೇಜ್) ಹಾಗೂ ನದಿ ದಡದಲ್ಲಿರುವ ಕೃಷಿ ಭೂಮಿಗಳು ಜಲಾವೃತಗೊಂಡಿದೆ.

Advertisement

ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸುಣಧೋಳಿ, ಕಮಲದಿನ್ನಿ, ಹುಣಶ್ಯಾಳ ಪಿ.ವೈ, ಅವರಾದಿ, ಢವೇಳಶ್ವರ ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಕೊರೋನಾ ಸಂಕಷ್ಟ ಹಾಗೂ ಕಳೆದ ವರ್ಷ ಜೂನ್ ನಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿ, ಸಾವಿರಾರೂ ಎಕರೆ ಕೃಷಿಗೆ ಹಾನಿಯುಂಟಾಗಿತ್ತು. ಈ ಭಾರಿ ಅದೇ ರೀತಿಯಲ್ಲಿ ಗೋವಿನ ಜೋಳ, ಕಬ್ಬಿನ ಗದ್ದೆಗಳಲ್ಲಿ ನೀರು ನುಗ್ಗಿದ್ದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಧಿಕಾರಿಗಳ ನಿರ್ಲಕ್ಷ: ಮಳೆಗಾಲ ಸಂದರ್ಭದಲ್ಲಿ ಸೇತುವೆಗಳಿಗೆ ಹಾಕಲಾಗಿದ್ದ ಗೇಟ್‌ಗಳನ್ನು ತೆಗೆಯದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಸೇತುವೆಗಳು ಹಾಗೂ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಕಾರಣ ಎಂದು ರೈತಾಪಿ ವರ್ಗದವರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರೈತರ ಕೈ ಸೇರದ ಬೆಳೆ ಪರಿಹಾರ: ಕಳದ ವರ್ಷ ಜೂನ್ ತಿಂಗಳಲ್ಲಿ ಮಳೆಯಿಂದಾಗಿ ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಾಗಿದರಿಂದ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಸಾವಿರಾರೂ ಎಕರೆ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ರೈತರು ಬೆಳದ ಬೆಳೆ ನಾಶವಾಗಿತ್ತು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆ ಸಮಿಕ್ಷೆ ಮಾಡಿತ್ತು. ಹಾನಿಯಾದ ಬೆಳೆಗೆ ಕಂದಾಯ ಇಲಾಖೆಯಿಂದ ಪರಿಹಾರವನ್ನು ಕೊಡಿಸಲಾಗುವುದು ಎಂದು ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಕೆಲವು ರೈತರಿಗೆ ಪರಿಹಾರ ನೀಡಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಮೂರು ತಿಂಗಳಲ್ಲಿ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಗೆದ್ದ ಪ್ರಗ್ನಾನಂದ

ಗದ್ದೆಗಳಿಗೆ ನೀರು ನುಗ್ಗಲು ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಮಳೆಯಾಗುವ ಸಂದರ್ಭದಲ್ಲಿ ಸೇತುವೆಗಳಿಗೆ ಅಡ್ಡಲಾಗಿ ಹಾಕಿರುವ ಗೇಟ್‌ಗಳನ್ನು ತೆಗೆಯಬೇಕು ಆದರೆ ಅಧಿಕಾರಿಗಳು ಗೇಟ್‌ಗಳನ್ನು ತೆಗೆಯದಿರುವುದರಿಂದ ರೈತರ ಬೆಳೆಗಳು ನಾಶವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ರೈತರ ಪಂಪ್ ಸೆಟ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ.  –ಪದ್ಮಾಕರ ಉಂದ್ರಿ ರೈತ ಸಂಘದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next