Advertisement

Madikeri ಬಾಲಕಿ ಮೇಲೆ ಅತ್ಯಾಚಾರ: ಐವರ ಬಂಧನ

11:54 PM Jul 10, 2024 | Team Udayavani |

ಮಡಿಕೇರಿ: ಓರ್ವ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಮತ್ತೋರ್ವ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದ 12 ಗಂಟೆಯ ಒಳಗಾಗಿ ಪ್ರಕರಣದ 5 ಮಂದಿ ಆರೋಪಿಗಳನ್ನು ಕುಟ್ಟ ಪೊಲೀಸರು ಬಂಧಿಸಿದ್ದಾರೆ.

Advertisement

ಪೊನ್ನಂಪೇಟೆ ತಾಲೂಕಿನ ಕುಟ್ಟ ನಾಥಂಗಾಲ ನಿವಾಸಿ ನವೀಂದ್ರ(24), ಅಕ್ಷಯ್‌(27), ಕೇರಳದ ತೋಲ್ಪಟ್ಟಿ ನಡುಂದನ ಕಾಲನಿ ನಿವಾಸಿಗಳಾದ ರಾಹುಲ್‌(21), ಮನು (25) ಹಾಗೂ ಸಂದೀಪ್‌(27) ಬಂಧಿತರು.

ಜು.9ರ ಮಧ್ಯಾಹ್ನ 3.15 ಗಂಟೆಗೆ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಬಾಲಕಿಯರು ಹಾಗೂ ಮೂವರು ಯುವಕರು ತೆರಳುತ್ತಿದ್ದರು. ಆಗ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಿ ಅದರಲ್ಲಿದ್ದ ಇಬ್ಬರಲ್ಲಿ ತಮ್ಮನ್ನು ನಾಗರಹೊಳೆಗೆ ಬಿಡುವಂತೆ ಕೇಳಿಕೊಂಡರು.

ಅದಕ್ಕೊಪ್ಪಿದ ಕಾರಿನವರು ಇವರನ್ನು ಕರೆದೊಯ್ದರು. ಸ್ವಲ್ಪ ದೂರ ತೆರಳಿದ ಬಳಿಕ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಅಪರಿಚಿತ ಇಬ್ಬರು ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಜತೆಯಲ್ಲಿ ಬಂದಿದ್ದ ಇತರ ಮೂವರು ಮತ್ತೋರ್ವ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ. ಬಳಿಕ ಬಾಲಕಿಯರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next