ಗೋಂಡಿಯಾ : ಮಹಾರಾಷ್ಟ್ರದ ಗೋಂಡಿಯಾದಲ್ಲಿ ಒತ್ತೆ ಹಣಕ್ಕಾಗಿ ಏಳು ವರ್ಷ ಪ್ರಾಯದ ಶಾಲಾ ಬಾಲಕನನ್ನು ಅಪಹರಿಸಿದ ಐವರನ್ನು ಬಂಧಿಸಿರುವುದಾಗಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ.
ಕಳೆದ ಜು.3ರಂದು ಅಪಹರಿಸಲ್ಪಟ್ಟಿದ್ದ ಬಾಲಕ ಮರು ದಿನವೇ ಅನಾಥನಾಗಿ ಪತ್ತೆಯಾಗಿದ್ದು ಬಳಿಕ ಆತನನ್ನು ಆತನ ಹೆತ್ತವರೊಂದಿಗೆ ಸೇರಿಸಲಾಗಿತ್ತು.
ಬಾಲಕನನ್ನು ಒತ್ತೆ ಹಣಕ್ಕಾಗಿ ಬಂಧಿಸಿದ್ದ ಆರೋಪಿಗಳಾದ ವೈಭವ್ ಪ್ರಕಾಶ್ ವಾಶ್ನಿಕ್ 23, ಶೇಖರ ಧೂಲಿಚಂದ್ ಶೇಂಡೆ 23, ಪ್ರವೀಣ್ ಕೈಲಾಶ್ ಪಾಟೀಲ್ 22, ರಾಹುಲ್ ನಮಾಜಿ ಗವಾಡ್ 19 ಮತ್ತು ಸೌರಭ್ ಬಾಲಕೃಷ್ಣ ಗೈಧಾನಿ 19 ಇವರನ್ನು ಮಂಗಳವಾರ ನಾಗ್ಪುರದಲ್ಲಿ ಬಂಧಿಸಲಾಗಿತ್ತು.
ಸ್ಥಳೀಯ ಕ್ರೈಮ್ ಬ್ರಾಂಚ್ ಮತ್ತು ದುಗ್ಗೀಪಾರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೆರೆಯಾಗಿರುವ ಆರೋಪಿಗಳು ತಾವೆಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಗೋಂಡಿಯಾ ಪೊಲೀಸ್ ಸುಪರಿಂಟೆಂಡೆಂಟ್ ವಿನಿತಾ ಸಾಹು ಹೇಳಿದ್ದಾರೆ.