ಮಂಗಳೂರು: ರಾಜ್ಯದಲ್ಲಿ ಐದೂವರೆ ಸಿಎಂ ಗಳ ಆಡಳಿತ. ಡಿ.ಕೆ. ಶಿವಕುಮಾರ್, ಡಾ| ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಡಾ| ಯತೀಂದ್ರ, ರಣದೀಪ್ ಸುರ್ಜೇವಾಲ ಈ ಸಿಎಂ ಗಳು. ಇವರ ಮಧ್ಯೆ ಅರ್ಧ ಸಿಎಂ ಸಿದ್ದರಾಮಯ್ಯ ಅವರದ್ದು ಏನೂ ನಡೆಯುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾ ಡಿ, ಡಿ.ಕೆ.ಶಿವಕುಮಾರರಿಗೆ ರಾಜ್ಯದ ಅಭಿವೃದ್ಧಿಯ ಚಿಂತೆಯಿಲ್ಲ. ಸಿಎಂ ಆಗಲು ಕಾಯುತ್ತಿದ್ದಾರೆ. ಪರ ಮೇಶ್ವರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿ, ಪ್ರಿಯಾಂಕ್ ಖರ್ಗೆ ತಮ್ಮ ತಂದೆಯ ನೆರವಿನಿಂದ ಸೂಪರ್ ಸಿಎಂ ಆಗಿದ್ದಾರೆ. ಡಾ| ಯತೀಂದ್ರ ಅವರು ಕೂಡ ಸಿಎಂ ನಂತೆ ಕೆಲಸ ಮಾಡುತ್ತಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ ಸಿಎ (ಕಮಿಷನ್ ಏಜೆಂಟ್) ಆಗಿದ್ದು, ಗಾಂಧಿ ಪರಿವಾರದ ಎಟಿಎಂ ಮೆಷಿನ್ ಅಗಿದ್ದಾರೆ. ಇವರೆಲ್ಲ ರಾಜ್ಯವನ್ನು ವಿವಿಧ ದಿಕ್ಕುಗಳಿಗೆ ಎಳೆದಾಡುತ್ತಿದ್ದಾರೆ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ವಿದ್ಯಾ ರ್ಥಿನಿಯ ಹತ್ಯೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿದೆ ಎನ್ನುವುದಕ್ಕೆ ಸಾಕ್ಷಿ. ಕಾಂಗ್ರೆಸ್‌ನ ನಾಯ ಕತ್ವ ಮತ್ತು ಸಿದ್ಧಾಂತದಿಂದಾಗಿ ಇಂಥ ಪರಿಸ್ಥಿತಿ ಬಂದಿದೆ. ಹತ್ಯೆಗೀಡಾದ ವಿದ್ಯಾ ರ್ಥಿನಿಯ ಕುಟುಂಬದ ಜತೆ ಬಿಜೆಪಿ ನಿಲ್ಲುತ್ತದೆ. 50 ಸಾವಿರ ಮತಕ್ಕಾಗಿ ಕಾಂಗ್ರೆಸ್ ದೇಶ ವಿರೋಧಿಗಳ ಪರ ನಿಲ್ಲುತ್ತಿದೆ. ಎಸ್‌ಡಿಪಿಐ ಈಗಾಗಲೇ ಕಾಂಗ್ರೆಸನ್ನು ಸಮರ್ಥಿಸಿ ಹೇಳಿಕೆ ನೀಡಿದ್ದು, ಇದಕ್ಕೆ ಖರ್ಗೆಯವರಾಗಲಿ, ರಾಹುಲ್, ಸೋನಿಯಾ ಗಾಂಧಿ ಯವ ರಾಗಲೀ ಪ್ರತಿಕ್ರಿಯೆ ನೀಡಿಲ್ಲ ಎಂದರು.
ಹತ್ತು ವರ್ಷಗಳಲ್ಲಿ ದೇಶದಲ್ಲಿ ಎಲ್ಲ ರಂಗಗಳಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದ್ದು, ಪ್ರತಿ ನಾಗರಿ ಕನೂ ಮೋದಿ ಸರಕಾರ ಯೋಜನೆಯ ಫಲಾನುಭವಿಯಾಗಿದ್ದಾನೆ. ಜನರು ಈಗಾಗಲೇ ಬಿಜೆಪಿ ಪರ ಒಲವು ತೋರಿಸುತ್ತಿದ್ದು, ಕರ್ನಾಟಕದಲ್ಲಿ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ – ಎನ್‌ಡಿಎ ಜಯ ಗಳಿಸ ಲಿದೆ. ಮೋದಿಯ ಹೃದಯದಲ್ಲಿ ಕರ್ನಾಟಕವಿದೆ, ಕರ್ನಾಟಕ ಜನರ ಹೃದಯದಲ್ಲಿ ಮೋದಿ ಇದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಕಾರ್ಡ್‌ನ ಅವಧಿ ಈಗಾಗಲೇ ಮುಗಿದಿದೆ ಎಂದರು.
ರಾಷ್ಟ್ರೀಯ ಭದ್ರತೆಯ ವಿಷ ಯದಲ್ಲಿ ಬಿಜೆಪಿ ಸರಕಾರ ಹೆಚ್ಚಿನ ಕಾಳಜಿ ವಹಿಸಿದೆ. ಆದರೆ ಕಾಂಗ್ರೆಸ್ ರಾಷ್ಟ್ರ ವಿರೋಧಿ ಶಕ್ತಿಗಳ ಜತೆ ಕೈ ಜೋಡಿಸುತ್ತಿದೆ. ಕಾಂಗ್ರೆಸ್ ಪಕ್ಷ ಭಾರತ ವಿರೋಧಿ, ಹಿಂದೂ ವಿರೋಧಿ ಮತ್ತು ಉಗ್ರವಾದಿಗಳ ಪರ ವಾದ ಚಿಂತನೆಯನ್ನು ಹೊಂದಿದೆ ಎಂದರು. ಮುಖಂಡರಾದ ಕ್ಯಾ| ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ ಮತ್ತಿತರು ಉಪಸ್ಥಿತರಿದ್ದರು.