Advertisement

ಗಡಿನಾಡ ಯುವಕರ ಬಹುದಿನದ ಕನಸು : ಎಂ.ಎಕ್ಸ್‌. ಫೋರ್‌ ಫಿಟ್‌ನೆಸ್‌ ಕ್ಲಬ್‌ ಶುಭಾರಂಭ

05:51 PM Apr 16, 2019 | keerthan |

ಬದಿಯಡ್ಕ : ಕೇರಳ ಕರ್ನಾಟಕ ಗಡಿ ಪ್ರದೇಶದ ಯುವಕರ ಬಹುದಿನಗಳ ಆಸೆ ಒಂದು ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವ್ಯವಸ್ಥೆಗಳಿರುವ ಮಲ್ಟಿ ಜಿಮ್‌ ಈ ಆಸೆಯನ್ನು ಉದ್ಯಾವರ ಸ್ಥಳೀಯ ನಿವಾಸಿ ಜಿಮ್‌ ಆಟಗಾರ ಮೊಹಮ್ಮದ್‌ ಶಬೀರ್‌ ಉದ್ಯಾವರ ಹಾಗೂ ಜಾಫರ್‌ ತಂಙಲ್‌ ಉದ್ಯಾವರರವರು ಉದ್ಯಾವರ ರಫಾ ಹಾಲ್‌ನ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕಟ್ಟಡದಲ್ಲಿ ಎಂ.ಎಕ್ಸ್‌ . ಫೋರ್‌ ಫಿಟ್‌ನೆಸ್‌ ಕ್ಲಬ್‌ ಪ್ರಾರಂಭ ಮಾಡುವ ಮೂಲಕ ಈಡೇರಿಸಿದ್ದಾರೆ.

Advertisement

ಸೆಲೆಬ್ರಿಟಿಗಳ ದೇಹದಾಢ್ಯತೆಯನ್ನು ನೋಡಿ ಅವರಂತೆ ನಮ್ಮ ದೇಹವನ್ನಾಗಿಸಬೇಕೆಂಬುದು ಪ್ರತಿಯೊಬ್ಬ ಪುರಷನಿಗೂ ಅನಿಸುತ್ತದೆ. ಆದರೆ ಈ ಸದೃಢ ದೇಹವನ್ನು ಹೊಂದಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇನ್ನು ಇದನ್ನು ಒಂದು ದಿನದಲ್ಲಿಯೂ ಸಹ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಇದನ್ನು ಒಂದು ದಿನದಲ್ಲಿಯೂ ಸಹ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಸಮಯವನ್ನು ಕೂಡಾ ವ್ಯಯ ಮಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಇದೀಗ ಆರಂಭಗೊಂಡಿರುವ ಎಂ.ಎಕ್ಸ್‌. ಫೋರ್‌ ಫಿಟ್‌ನೆಸ್‌ ಕ್ಲಬ್‌ನಲ್ಲಿ ಇದಕ್ಕೆ ಅನುಕೂಲಕವಾಗಿರುವ ಏರೋಬಿಕ್‌ ವರ್ಕ್‌ ಔಟ್ಸ್‌ , ಅನ್ರೊಬಿಕ್‌ ವಕೌಟ್ಸ್‌ , ರೆಸಿಸ್ಟನ್ಸ್‌ ಟ್ರೈನಿಂಗ್‌, ಡೈನಾಮಿಕ್‌ ವಕಟ್‌, ಸುಪರ್‌ ಸೆಟ್‌ ವರ್ಕ್‌, ಎಂಡ್ನೂರೆನ್ಸ್‌ ಸ್ಟ್ರೆಂಗ್‌ , ಬ್ಯಾಲೆನ್ಸ್‌ ಪ್ಲೆಕ್ಸಿಬಿಲಿಟಿ ಟ್ರೈನಿಂಗ್‌ ಮೊದಲಾದ ರೀತಿಯ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಿದೆ. ಜೊತೆಯಾಗಿ ಸ್ಟ್ರೀಂ ಬಾತ್‌, ರೆಸ್ಟ್‌ ರೂಂ, ವೈ ಫೈ , ಮಿನರಲ್‌ ವಾಟರ್‌ಗಳ ಸೌಲಭ್ಯಗಳಿವೆ. ಮಹಿಳೆಯರಿಗೂ ಪುರುಷರಿಗೂ ಇಲ್ಲಿ ಬೇರೆ ಬೇರೆ ಸಮಯಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಉದ್ಯಾವರ ರಫಾಹಾಲ್‌ ಸಮೀಪದ ಗುಡ್‌ಹೋಪ್‌ ಕಟ್ಟಡದ ಮಹಡಿಯಲ್ಲಿ ವಿಶಾಲವಾದ ಹವಾನಿಯಂತ್ರಿತ ಸುಸಜ್ಜಿತವಾದ ಹಾಲ್‌ನಲ್ಲಿ ಮೊಹಮ್ಮದ್‌ ಶಬೀರ್‌ರವರ ಪುತ್ರ ಮಾಸ್ಟರ್‌ ಮೊಯಿದೀನ್‌ ಶಯಾನ್‌ ರಿಬ್ಬನ್‌ ಕತ್ತರಿಸುವ ಮೂಲಕ ಮಲ್ಟಿ ಜಿಮ್‌ಕ್ಲಬ್‌ ಉದ್ಘಾಟಿಸಿದರು. ಬಳಿಕ ಜಿಮ್‌ನ ಉಪಕರಣಗಳನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಟ ಅಬು ಸಲೀಂ ಉದ್ಘಾಟಿಸಿ ಮಾತನಾಡಿದ ಅವರು ಸುಂದರ ದೇಹ ಪಡೆಯಬೇಕಾದರೆ ಸ್ನಾಯುಗಳ ಬೆಳವಣಿಗೆ ಮತ್ತು ಬಲಿಷ್ಟ ಸ್ನಾಯುಗಳನ್ನು ಪಡೆಯುವುದು ತುಂಬಾ ಮುಖ್ಯ. ಸರಿಯಾದ ಆಹಾರ ಕ್ರಮ ಹಾಗೂ ವ್ಯಾಯಾಮದಿಂದ ಇದು ಸಾಧ್ಯ. ಇದಕ್ಕೆ ತಾಳ್ಮೆ ಕೂಡಾ ಅತ್ಯಗತ್ಯ. ನಾಡಿನ ಯುವಕರ ಆರೋಗ್ಯವನ್ನು ಕಾಪಾಡಲು ಸ್ಥಾಪಿತವಾದ ಎಂ.ಎಕ್ಸ್‌ . ಫೋರ್‌ ಫಿಟ್‌ನೆಸ್‌ ಕ್ಲಬ್‌ ಯುವಕರಿಗೊಂದು ವರದಾನವಾಗಿಲಿ ಎಂಬುದಾಗಿ ಹಾರೈಸಿದರು. ಬಳಿಕ ಜಿಮ್‌ನ ಬಗ್ಗೆ ಪರಿಚಯವನ್ನು ನೀಡಿದ ಮಹೂನ್‌ ಸದಖತ್‌ ಮಲಪ್ಪುರಂರವರು ಮಾತನಾಡಿ ಜಿಮ್‌ ವ್ಯಾಯಾಮದ ಬಗ್ಗೆ ಹಲವರಿಗೆ ಹಲವು ರೀತಿಯ ತಪ್ಪು ಅಭಿಪ್ರಾಯಗಳು ಇವೆ. ಆದರೆ ಜಿಮ್‌ ಆಟದಲ್ಲಿ ಯಾವುದೇ ಅಡ್ಡಪರಿಣಾಮಗಳು ಬರಲು ಸಾಧ್ಯತೆ ಇಲ್ಲ. ಇದು ಶರೀರವನ್ನು ಪಡೆಯಲು ಬಲಿಷ್ಟವಾದ ಸ್ನಾಯು ಮಾಂಸ ಖಂಡಗಳನ್ನು ಪಡೆಯಲು ಒಳ್ಳೆಯ ಜಿಮ್‌ ಜಿಮ್‌ ತರಬೇತುದಾರರಿಂದ ನಡೆಸಲ್ಪಡುವ ಒಂದು ವ್ಯಾಯಾಮವಾಗಿದೆ ಎಂದು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಇಕ್ಬಾಲ್‌ ಎಫ್‌ ಲಾಂಚ್‌, ಅಬ್ದುಲ್‌ ರಹ್ಮಾನ್‌ ಬಾಬಾ, ಆದಂ ಕುಂಞಿ, ಶೆಖ್‌ ಮೊಯಿದೀನ್‌. ಹನೀಫ್‌ ಪಿ ಎ, ಅಲಿ ಕುಟ್ಟಿ ನ್ಯಾಷನಲ್‌, ಪುತ್ತು ಹನೀಫ್‌, ಅಸಿಫ್‌, ಮುಸ್ತಫ ಉದ್ಯಾವರ, ಇಬ್ರಾಹಿಂ ಕೆ, ಮೊಹಮ್ಮದ್‌ ಎಂ ಪಿ, ನೂರುದ್ದೀನ್‌, ಜಮಾಲ್‌ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮಿಸ್ಟರ್‌ ಕರ್ನಾಟಕ ರವಿ ಕುಲಾಯಿ ಹಾಗೂ ತ್ರಿ ಟೈಮ್ಸ್‌ ಮೋಸ್ಟ್‌ ಮಸ್ಟ್‌ ಕಿಲ್ಲರ್‌ ಅವಾರ್ಡ್‌ ವಿಜೇತ ಸನತ್‌ ದೇವಾಡಿಗರಿಂದ ದೇಹದಾಢ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next