Advertisement

Fitness;ಮಾರ್ಚ್‌ 5 ರಂದು ಪಂತ್‌ಗೆ ಸರ್ಟಿಫಿಕೆಟ್‌: ಸೌರವ್‌ ಗಂಗೂಲಿ

11:15 PM Mar 02, 2024 | Team Udayavani |

ಹೊಸದಿಲ್ಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್‌ ಪಂತ್‌ ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಮಾರ್ಚ್‌ 5ರಂದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯು ಅವರನ್ನು ಫ‌ುಲ್‌ ಫಿಟ್‌ ಎಂದು ಘೋಷಿಸಲಿದೆ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್‌ ನಿರ್ದೇಶಕ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

ಪಂತ್‌ ಚೇತರಿಕೆ ಬಗ್ಗೆ ಮಾತನಾಡಿದ ಗಂಗೂಲಿ, “ತಾನು ಫಿಟ್‌ ಎಂದು ಸಾಬೀತುಪಡಿಸಲು ಪಂತ್‌ ಎಲ್ಲವನ್ನೂ ನಿರೂಪಿದ್ದಾರೆ. ಹೀಗಾಗಿ ರಿಷಭ್‌ ಫ‌ುಲ್‌ ಫಿಟ್‌ ಆಗಿದ್ದಾರೆ ಎಂದು ಎನ್‌ಸಿಎ ಘೋಷಿಸಲಿದೆ’ ಎಂದು ಮಾಹಿತಿ ನೀಡಿದರು.

ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದಾದಾ, “ಪಂತ್‌ ಸಂಪೂರ್ಣ ಫಿಟ್‌ ಎಂದು ಎನ್‌ಸಿಎ ಘೋಷಿಸುವವರೆಗೂ ಕಾಯಿರಿ. ಬಳಿಕ ನಾವು, ಡೆಲ್ಲಿ ನಾಯಕತ್ವದ ಬಗ್ಗೆ ಮಾತಾಡೋಣ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next