Advertisement
ಆಟೋ ಮತ್ತು ಬಿಸ್ಕೆಟ್ ತಯಾರಿಕೆ ವಲಯ ಕಳೆದ ಕೆಲವು ತಿಂಗಳಿಂದ ತೀವ್ರವಾಗಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ರಿಯಾಯಿತಿ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು.
ಆಟೋ ವಲಯದಲ್ಲಿ ಫಿಟ್‌ಮೆಂಟ್ ಸಮಿತಿ ಕೆಲವೊಂದು ಅಂಶಗಳನ್ನು ಮನಗಂಡಿದೆ. ಅದರ ಪ್ರಕಾರ ಈಗಿನ ಹಿನ್ನಡೆಗೆ ಬ್ಯಾಂಕ್ ಹೊರತಾದ ಸಾಲಗಾರರು ಕಾರಣ, ಅಲ್ಲದೇ ಆಟೋ ಕೈಗಾರಿಕೆಗಳ ಹಿನ್ನೆಡೆ, ಬೇಡಿಕೆ ಪೂರೈಕೆ ನಡುವಿನ ಅಸಮತೋಲನ, ಬಿಎಸ್4 ಮತ್ತು ಬಿಎಸ್6 ಎಂಜಿನ್ ವಾಹನಗಳ ಮಾರಾಟದಲ್ಲಿ ಆದ ಬದಲಾವಣೆ, ಹಣದ ಚಲಾವಣೆ ಕುಂಠಿತಗೊಂಡಿದ್ದರಿಂದಲೂ ಹೀಗಾಗಿದೆ ಎಂದು ಹೇಳಿದೆ. ಅಲ್ಲದೇ ಒಂದು ವೇಳೆ ಈಗ ಜಿಎಸ್‌ಟಿ ದರ ಕಡಿತ ಮಾಡಿದರೆ ಅದರ ಪರಿಣಾಮ ಬೇರೆಯ ವಲಯಗಳ ಮೇಲೂ ಆಗಬಹುದು. ಅಲ್ಲದೇ ಇತರ ವಲಯದವರೂ ದರ ಕಡಿತಕ್ಕೆ ಆಗ್ರಹಿಸಬಹುದು ಎಂದು ಹೇಳಿದೆ.
Related Articles
ಬಿಸ್ಕೆಟ್ ಸೇರಿದಂತೆ ಬೇಕರಿ ತಿನ್ನಿಸುಗಳು, ತರಕಾರಿಗಳು, ಮಿನರಲ್ ವಾಟರ್ ಬಾಟಲಿಗಳು, ಹಾಗೂ ಸಿದ್ಧ ಆಹಾರ ಪ್ಯಾಕೆಟ್‌ಗಳ ಮೇಲಿನ ದರದ ಮೇಲಿನ ಶುಲ್ಕವನ್ನು ಕಡಿತಗೊಳಿಸಲು ಪಾಲೇಜಿ, ಬ್ರಿಟಾನಿಯಾ ಕಂಪನಿಗಳು ಕೇಳಿಕೊಂಡಿದ್ದವು. ಆದರೆ ಅವರ ಆಸೆಯೂ ನಿರಾಸೆಗೊಂಡಿದ್ದು, ಪ್ಯಾನಲ್ ಸದಸ್ಯರು ಸದ್ಯ ದರದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದಿದ್ದಾರೆ. ಬಿಸ್ಕೆಟ್‌ಗೆ ವಿವಿಧ ಸ್ಲಾéಬ್‌ಗಳಲ್ಲಿ ದರಗಳನ್ನು ವಿಧಿಸುವುದರಿಂದ ತೆರಿಗೆ ತಪ್ಪಿಸಲು ಕಾರಣವಾಗಬಹುದು ಎಂದು ಅದು ಅಭಿಪ್ರಾಯ ಪಟ್ಟಿದೆ. ಸದ್ಯ ಕಡಿಮೆ ದರದ ಬಿಸ್ಕೆಟ್‌ಗಳ ಮೇಲೆ ಶೇ.18ರಷ್ಟು (100 ಕೆ.ಜಿ.) ಜಿಎಸ್‌ಟಿ ಇದ್ದು ಇದನ್ನು ಶೇ.5ರಷ್ಟಕ್ಕೆ ಇಳಿಸಬೇಕೆನ್ನುವ ಬೇಡಿಕೆ ಕಂಪೆನಿಗಳದ್ದಾಗಿತ್ತು.
Advertisement