Advertisement

ಫಿಚ್‌ ರೇಟಿಂಗ್‌ ಬದಲಿಲ್ಲ

09:58 AM Nov 16, 2018 | Team Udayavani |

ಹೊಸದಿಲ್ಲಿ: ಪ್ರತಿಷ್ಠಿತ ಜಾಗತಿಕ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಫಿಚ್‌ ಗುರುವಾರ ಭಾರತದ ಆರ್ಥಿಕತೆಯ ರೇಟಿಂಗ್‌ ಪ್ರಕಟಿಸಿದ್ದು, ಬಿಬಿಬಿ ಮೈನಸ್‌ ಅನ್ನೇ ಕಾಯ್ದುಕೊಂಡಿದೆ. ಕಳೆದ 12 ವರ್ಷಗಳಿಂದಲೂ ಫಿಚ್‌ ಇದೇ ರೇಟಿಂಗ್‌ ಅನ್ನು ಭಾರತಕ್ಕೆ ನೀಡಿದ್ದು, ಈ ಬಾರಿಯೂ ಬದಲಾವಣೆ ಮಾಡಿಲ್ಲ. ಸ್ಥಿರ ಮುನ್ನೋಟ ಹೊಂದಿರುವ ಈ ಶ್ರೇಣಿಯು ಹೂಡಿಕೆಯ ವಿಚಾರದಲ್ಲಿ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ. ವಿತ್ತೀಯ ಪರಿಸ್ಥಿತಿಯು ಇನ್ನೂ ಸುಸ್ಥಿರವಾಗಿಲ್ಲ ಹಾಗೂ ಸೂಕ್ಷ್ಮ ಆರ್ಥಿಕತೆಗೆ ಗಂಭೀರ ಅಪಾಯಗಳಿವೆ ಎಂದು ಫಿಚ್‌ ವರದಿ ಮಾಡಿದೆ. ಮತ್ತೂಂದು ಪ್ರಮುಖ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌ 2017ರಲ್ಲಿ ಭಾರತದ ರೇಟಿಂಗ್‌ ಅನ್ನು ಹೆಚ್ಚಿಸಿದ್ದರ ಹಿನ್ನೆಲೆಯಲ್ಲಿ, ಫಿಚ್‌ ಕೂಡ ರೇಟಿಂಗ್‌ ಮೇಲ್ದರ್ಜೆಗೆ ಏರಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next