ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಕ್ಷಿಪ್ರಗತಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಂಡರೆ, ಭಾರತದ ಅರ್ಥವ್ಯವಸ್ಥೆ ಚೇತರಿಕೆ ಕಾಣಿಸಿಕೊಳ್ಳಲಿದೆ.
ಸೋಂಕಿನ ಪರಿಸ್ಥಿತಿಯಿಂದಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸವಾಲು ಎದುರಾಗಿದೆ ಎಂದು ರೇಟಿಂಗ್ಸ್ ಸಂಸ್ಥೆ, ಫಿಚ್ ಬುಧವಾರ ತಿಳಿಸಿದೆ.
ಭಾರಿ ಪ್ರಮಾಣದಲ್ಲಿ ಲಸಿಕೆ ನೀಡುವುದರಿಂದ ಉದ್ದಿಮೆ ಕ್ಷೇತ್ರ ಚೇತರಿಕೆ ಕಾಣಲಿದೆ ಮತ್ತು ಗ್ರಾಹಕರು ಹೆಚ್ಚಿನ ವಿಶ್ವಾಸದಿಂದ ಮಾರುಕಟ್ಟೆಯಲ್ಲಿ ಖರೀದಿಗೂ ಮುಂದಾಗಲಿದ್ದಾರೆ.
ಇದೇ ವೇಳೆ, ದೇಶದ ನಿರೀಕ್ಷಿತ ಅಭಿವೃದ್ಧಿ ದರವನ್ನು ಶೇ.10ಕ್ಕೆ ಇಳಿಸಿದೆ. ಕೆಲ ಸಮಯಗಳ ಹಿಂದೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.12ರಂತೆ ಅರ್ಥ ವ್ಯವಸ್ಥೆ ಅಭಿವೃದ್ಧಿ ಸಾಧಿಸಲಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿಕೊಂಡಿತ್ತು.
ಇದನ್ನೂ ಓದಿ :ಏಕ ಪರದೆ ಚಲನಚಿತ್ರ ಮಂದಿರಗಳಿಗೆ 2021-22 ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ