ಸೈದಾಪುರ: ಮಕ್ಕಳ ಗುಣಮಟ್ಟದ ಕಲಿಕೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮುಖ್ಯಗುರು ಸತೀಶ ಡಿ ಅಭಿಪ್ರಾಯಪಟ್ಟರು.
ಸಮೀಪದ ಆನೂರು ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಒತ್ತಡದ ಜೀವನ ಮತ್ತು ಬದಲಾದ ಆಹಾರ ಪದ್ಧತಿಯಿಂದಜನರು ಮತ್ತು ಮಕ್ಕಳು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇವುಗಳಿಂದತಪ್ಪಿಸಿಕೊಳ್ಳಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಯೋಗಸಾನ, ಪ್ರಾಣಾಯಾಮ ಅಭ್ಯಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಆರೋಗ್ಯವಂತ ದೇಶವನ್ನು ನಿರ್ಮಿಸಲುಪ್ರಧಾನಿ ಮೋದಿಯವರು ಫಿಟ್ ಇಂಡಿಯಾ(ಸದೃಢ ಭಾರತ) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ದೇಶವನ್ನುಆರೋಗ್ಯದತ್ತ ತೆಗೆದುಕೊಂಡು ಹೋಗಲುಈ ಅಭಿಯಾನ ನಮಗೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಹರ್ಷವರ್ಧನ ಶಿಕ್ಷಕರುಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಕಲಿಸಿಕೊಟ್ಟರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ವೆಂಕಟರೆಡ್ಡಿ, ಸದಸ್ಯರಾದ ಅಬ್ದುಲ್ ಕರೀಂ, ಕಲ್ಲಮ್ಮ, ನಿಂಬೆಮ್ಮ, ಕಲ್ಲಪ್ಪ, ಶಿಕ್ಷಕರಾದ ರಮೇಶ, ಕೊಟ್ರಮ್ಮ, ಗೀತಾ,ಹಣಮಂತ್ರಾಯ, ಶಂಭುಲಿಂಗಪ್ಪ, ಮಂಗಳಗೌರಮ್ಮ, ಹಣಮಂತ, ರುದ್ರಪ್ಪಗೌಡ,ಮಲ್ಲಪ್ಪ, ಬೆಟ್ಟಯ್ಯ ಸ್ವಾಮಿ, ಬಂದಪ್ಪಗೌಡ,ಸೋಮನಾಥ ರೆಡ್ಡಿ, ಲಿಂಗಯ್ಯ ಸ್ವಾಮಿ,ಫಕೀರಸಾಬ, ಕಲ್ಲಪ್ಪ, ಪರ್ವರೆಡ್ಡಿ,ನಬೀಚಾಂದ್, ಶಂಕ್ರಪ್ಪ, ಯಲ್ಲಪ್ಪ, ಚಾಹುಸೇನ್ ಹಾಗೂ ಗ್ರಾಮಸ್ಥರು ಇದ್ದರು.