Advertisement

ಮೀನುಗಾರಿಕೆ ಋತು ಮುಕ್ತಾಯ ; ಮೀನು ಲಭ್ಯತೆ ಪ್ರಮಾಣ ಹೆಚ್ಚಳ

09:05 AM Jun 15, 2020 | mahesh |

ಮಂಗಳೂರು: ಕರಾವಳಿಯಲ್ಲಿ ಜೂ. 15ರಿಂದ ಜುಲೈ 31ರ ವರೆಗೆ ಒಟ್ಟು 47 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು, ಈ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀನುಗಳ ಲಭ್ಯತೆ ಪ್ರಮಾಣ ಹೆಚ್ಚಳವಾಗಿದೆ. ದ.ಕ. ಜಿಲ್ಲೆಯಲ್ಲಿ 2017-18ರಲ್ಲಿ ಒಟ್ಟು 1,63,925 ಟನ್‌ ಪ್ರಮಾಣದ ಮೀನು ಲಭಿಸಿತ್ತು. 2018-19ರಲ್ಲಿ 1,59,825 ಟನ್‌ ಮತ್ತು 2019-20ನೇ ಸಾಲಿನಲ್ಲಿ ಅತೀ ಹೆಚ್ಚು ಅಂದರೆ 1,80,189 ಟನ್‌ ಮೀನು ಲಭ್ಯವಾಗಿದೆ. ಅದೇ ರೀತಿ, ಉಡುಪಿ ಜಿಲ್ಲೆಯಲ್ಲಿ 2017-18ರಲ್ಲಿ 1,28,136 ಟನ್‌, 2018-19ರಲ್ಲಿ 1,17,895 ಟನ್‌ ಮತ್ತು 2019-20ರಲ್ಲಿ 1,21,479 ಟನ್‌ ಮೀನು ಲಭಿಸಿದೆ.

Advertisement

ಮುಂದೇನು ತಿಳಿಯದು ಮುಂದೇನು ತಿಳಿಯದು
ಈ ಬಾರಿ ಜೂನ್‌ 14ರ ವರೆಗೆ ಮೀನುಗಾರಿಕೆಗೆ ಅವಕಾಶ ನೀಡಿದರೂ ದ.ಕ. ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವ ಬೋಟುಗಳು ಮಾರ್ಚ್‌ 22ಕ್ಕೆ ದಡ ಸೇರಿದ್ದವು. ಕೋವಿಡ್ ಕಾರಣದಿಂದ ಆಂಧ್ರ, ಒಡಿಶಾ, ಝಾರ್ಖಂಡ್‌ ಮೂಲದ ಕಾರ್ಮಿಕರು ತವರಿಗೆ ತೆರಳಿದ್ದಾರೆ. ಹೀಗಾಗಿ ಆಗಸ್ಟ್‌ ತಿಂಗಳಲ್ಲಿ ಮೀನುಗಾರಿಕಾ ಋತು ಆರಂಭವಾಗುವಾಗ ಕಾರ್ಮಿಕರ ಕೊರತೆ ಉಂಟಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮೀನುಗಾರ ಮುಖಂಡರು.

ಜು. 31ರ ವರೆಗೆ ನಿಷೇಧ
10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಬೋಟ್‌ ಮೀನುಗಾರಿಕೆಗೆ ಜೂ.15ರಿಂದ ಜು.31ರ ವರೆಗೆ ನಿಷೇ ಧ ಇರುತ್ತದೆ. ನಿಯಮ ಉಲ್ಲಂಘಿಸಿದವರನ್ನು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಲಾಕ್‌ಡೌನ್‌ ಕಾರಣಕ್ಕೆ ಈ ಬಾರಿ 47 ದಿನಗಳವರೆಗೆ ಆಳ ಸಮುದ್ರದ ಮೀನುಗಾರಿಕೆಗೆ ನಿಷೇಧ ಇರುತ್ತದೆ.
– ಪಾರ್ಶ್ವನಾಥ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರು ದ.ಕ. ಜಿಲ್ಲೆ

ಮೀನು ಲಭ್ಯತೆ ಹೆಚ್ಚಳ
ಮಲ್ಪೆಯಲ್ಲಿ ಜೂ.8ರ ವರೆಗೆ ಮಾತ್ರ ಮೀನುಗಾರಿಕೆಗೆ ಬೋಟ್‌ಗಳು ತೆರಳಿವೆ. ಕಳೆದ ಕೆಲವು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜಿಲ್ಲೆಯಲ್ಲಿ ಮೀನಿನ ಲಭ್ಯತೆ ತುಸು ಹೆಚ್ಚಿತ್ತು.
-ಗಣೇಶ್‌ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರು, ಉಡುಪಿ ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next