Advertisement
ಪ್ರಧಾನಿ ಮೋದಿ ಅವರನ್ನೇ ಭೇಟಿ ಮಾಡಲು ನಿರ್ಧರಿಸಲಾಗಿತ್ತಾದರೂ ಸಮಯಾವಕಾಶ ಸಿಗದ ಕಾರಣ ಪ್ರಧಾನಿ ಕಾರ್ಯದರ್ಶಿಗೆ ಮನವಿ ನೀಡಲಾಯಿತು. ವಿಷಯವನ್ನು ಪ್ರಧಾನಿ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿಯವರ ಕಾರ್ಯದರ್ಶಿ ನಿಯೋಗಕ್ಕೆ ಭರವಸೆ ನೀಡಿದರು.
ಇದೇವೇಳೆ ನಿಯೋಗ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮೀನುಗಾರಿಕೆ ಸಲಕರಣೆಗಳಿಗೆ ಜಿಎಸ್‌ಟಿ ವಿನಾಯಿತಿ, ನಾಡದೋಣಿಗಳಿಗೆ ರಿಯಾಯಿತಿ ದರದಲ್ಲಿ ಸೀಮೆ ಎಣ್ಣೆ ವಿತರಣೆ, ಕೇಂದ್ರ ದಲ್ಲಿ ಮೀನು ಗಾರಿಕೆ ಸಚಿವಾಲಯ ತೆರೆಯ ಬೇಕು, ಡೀಸೆಲ್ ರೋಡ್ ಸೆಸ್ ವಿನಾಯಿತಿ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿತು. ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೇಟ್ಲಿ ಭರವಸೆ ನೀಡಿದರು. ನಿಯೋಗದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಅ.ಭಾ. ಮೀನುಗಾರರ ವೇದಿಕೆಯ ಅಧ್ಯಕ್ಷ ವೆಲ್ಜಿಬಾಯಿ ಕೆ. ಮಸಾನಿ, ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ. ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮುಖಂಡರಾದ ನಿತಿನ್ ಕುಮಾರ್, ಮನೋಹರ ಬೋಳೂರು, ಇಬ್ರಾಹಿಂ, ದಯಾನಂದ ಕೆ. ಸುವರ್ಣ, ಕರುಣಾಕರ ಸಾಲ್ಯಾನ್, ಕಿಶೋರ್ ಸುವರ್ಣ ಇದ್ದರು.