Advertisement

ಸೀಮೆಎಣ್ಣೆ ಪೂರೈಕೆಯಾಗದೆ ಎರಡು ತಿಂಗಳು: ಸಂಕಷ್ಟದಲ್ಲಿ ನಾಡದೋಣಿ ಮೀನುಗಾರರು

01:26 AM Apr 26, 2023 | Team Udayavani |

ಬೈಂದೂರು/ಮಲ್ಪೆ: ಕಳೆದ ಎರಡು ತಿಂಗಳುಗಳಿಂದ ಸಾಂಪ್ರದಾಯಿಕ ಯಾಂತ್ರೀಕೃತ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಮೂರು ಜಿಲ್ಲೆಗಳ ಬಹುತೇಕ ನಾಡದೋಣಿಗಳು ಲಂಗರು ಹಾಕಿವೆ.

Advertisement

ಮೀನುಗಾರಿಕೆ ಋತು ಆರಂಭಗೊಂಡ ಬಳಿಕ ಇಲ್ಲಿಯ ವರೆಗೆ ಒಬ್ಬ ಪರವಾನಿಗೆದಾರರಿಗೆ ತಲಾ ಸರಾಸರಿ 169 ಲೀ.ನಿಂದ 280 ಲೀ.ಗಳಷ್ಟೇ ದೊರಕಿದೆ. 2 ತಿಂಗಳುಗಳಿಂದ ಪೂರೈಕೆಯೇ ಇಲ್ಲದ ಕಾರಣ ದುಡಿ ಯುವ ಅವಧಿಯಲ್ಲಿ ನಾಡದೋಣಿ ಗಳು ಲಂಗರು ಹಾಕಬೇಕಾ ಗಿದೆ. ಮೇ ತಿಂಗಳಲ್ಲಿ ಮೀನುಗಾರಿಕೆ ಕೊನೆಗೊಳ್ಳಲಿದ್ದು, ಅದನ್ನೇ ನಂಬಿ ಬದುಕುತ್ತಿರುವ ನಮಗೆ ದಿಕ್ಕು ತೋಚದಂತಾಗಿದೆ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಕೆಲವೊಂದು ನಾಡದೋಣಿಗಳು ಈ ಹಿಂದೆ ದಾಸ್ತಾನು ಇರಿಸಲಾಗಿದ್ದ ಸೀಮೆಎಣ್ಣೆ ಬಳಸಿಕೊಂಡು ಮೀನುಗಾರಿಕೆ ಮಾಡಿದರೆ, ಹೆಚ್ಚಿನ ನಾಡದೋಣಿಗಳು ಬಂದರಿನಲ್ಲೇ ಉಳಿದಿವೆ.

2022-23ರ ಎಪ್ರಿಲ್‌ನಲ್ಲಿ ಸೀಮೆಎಣ್ಣೆ ಪೂರೈಕೆಯನ್ನು 150 ಲೀ.ನಿಂದ 300 ಲೀ.ಗೆ ಹೆಚ್ಚಿಸಲು ಮೀನುಗಾರಿಕೆ ಇಲಾಖೆ ಸಮ್ಮತಿಸಿತ್ತು. ಆದರೆ ನಮಗೆ ದೊರಕಿರುವುದು ಅಂಶಿಕ. ಕೆಲವರು
ಗರಿಷ್ಠ 280 ಲೀ. ಪಡೆದುಕೊಂಡರೆ ಹಲವರಿಗೆ 169 ಲೀ. ಮಾತ್ರ ಲಭಿಸಿದೆ. ಮಾರ್ಚ್‌ನಿಂದ ಸಿಗದ ಕಾರಣಕ್ಕೆ ಮೀನುಗಾರಿಕೆ ನಡೆಸಲಾ ಗದೆ ನಮ್ಮ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಸರಕಾರ ಆದಷ್ಟು ಬೇಗ ಸೀಮೆಎಣ್ಣೆ ಬಿಡುಗಡೆ ಗೊಳಿಸಬೇಕು ಎಂದು ಸಾಂಪ್ರದಾಯಿಕ ಯಾಂತ್ರೀಕೃತ ನಾಡದೋಣಿ ಮೀನು ಗಾರರು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಜನವರಿಯಲ್ಲಿ ಹಂಚಿಕೆ ಮಾಡಿದ 90 ಕಿ.ಲೀ. ಮತ್ತು ಮಾರ್ಚ್‌ನ‌ಲ್ಲಿ 1,200 ಕಿ.ಲೀ. ಬಿಡುಗಡೆ ಮಾಡುವಂತೆ ನಿಗಮಕ್ಕೆ ಆದೇಶ ನೀಡಿದ್ದರೂ ಇದುವರೆಗೂ ಮೀನುಗಾರರ ಕೈ ಸೇರಿಲ್ಲ.
– ಗೋಪಾಲ್‌ ಆರ್‌.ಕೆ., ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next