ಕನಕಪುರ: ವೈಯಕ್ತಿಕ ದ್ವೇಷಕ್ಕೆ ಕಿಡಿಗೇಡಿಗಳಿಂದ ಕೆರೆಗೆ ವಿಷಪ್ರಾಸನ ಮಾಡಿದ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಸಾವಿಗೀಡಾಗಿರುವ ಘಟನೆ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಾತನೂರು ಹೋಬಳಿಯ ಚೂಡಹಳ್ಳಿ ಗ್ರಾಪಂ ವ್ಯಾಪ್ತಿಯ ವೀರುಪಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೀನು ಸಾಕಾಣಿಕೆ ಮಾಡಿದ್ದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ ವಡೇರಹಳ್ಳಿ ಗ್ರಾಮದ ವೆಂಕಟೇಶ್ ಚೂಡಹಳ್ಳಿ ಗ್ರಾಪಂನಲ್ಲಿ ಹರಾಜು ಮೂಲಕ ವೀರುಪಸಂದ್ರ ಗ್ರಾಮದ ಕೆರೆಗೆ 40 ಸಾವಿರ ಹಣ ಕಟ್ಟಿ ಮೀನು ಪಾಲನೆಗೆ ಹಕ್ಕನ್ನು ಪಡೆದಿದ್ದರು ಒಂದು ವರ್ಷದ ಹಿಂದೆ 80 ಸಾವಿರ ಮೀನಿನ ಮರಿಗಳನ್ನು ಬಿಟ್ಟಿದ್ದರು. ಅವು ಒಂದು ಕೆ.ಜಿ. ತೂಗುವಷ್ಟು ಬೆಳೆದಿದುÌ ಇನ್ನು ಒಂದೆರಡು ತಿಂಗಳಲ್ಲಿ ಒಂದು ಕೆ.ಜಿ.ಗೂ ಮೇಲ್ಪಟ್ಟು ಬೆಳೆದಿದ್ದ ಮೀನನ್ನು ಮಾರಾಟ ಮಾಡುವ ನಿರೀಕ್ಷೆಯಲ್ಲಿ ರೈತ ವೆಂಕಟೇಶ್ ಇದ್ದರು. ಆದರೆ, ಕಿಡಿಗೇಡಿಗಳು ಕೃತ್ಯದಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದಾರೆ. ಇದರಿಂದ ಕೆರೆಯಲ್ಲಿ ಸುಮಾರು ಒಂದು ಕೆ.ಜಿ. ತೂಗುವಷ್ಟು ಬೆಳೆದಿದ್ದ ಹಾಗೂ ಸಣ್ಣ ಮೀನುಗಳು ಸಾವಿಗಿಡಾಗಿದೆ. ಶುಕ್ರವಾರ ಬೆಳಗ್ಗೆ ಮೃತಪಟ್ಟ ಮೀನುಗಳು ನೀರಿನ ಮೇಲಾºಗದಲ್ಲಿ ತೆಲಾಡುತ್ತಿದ್ದದ್ದನ್ನು ನೋಡಿದ ರೈತ ವೆಂಕಟೇಶ್ ಸಾತನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಷವಾದ ಕೆರೆಯ ನೀರು: ಶುದ್ಧಿಗೊಳಿಸಲು ಆಗ್ರಹ: ಕಿಡಿಗೇಡಿಗಳ ಕೃತ್ಯದಿಂದ ಮೀನುಗಳ ಮಾರಣ ಹೋಮದ ಜತೆಗೆ ಕೆರೆ ನೀರು ವಿಷವಾಗಿ ಪರಿವರ್ತನೆಯಾಗಿದೆ. ಇದು ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕೃಷಿಕರು, ರೈತರು ಜಾನುವಾರುಗಳನ್ನು ಈ ಕೆರೆಯನ್ನೇ ಕುಡಿವ ನೀರಿಗೆ ಆಶ್ರಯಿಸಿದ್ದರು. ಈ ಕೆರೆಯ ನೀರನ್ನು ಕುಡಿದರೆ ಪ್ರಾಣಕ್ಕೆ ಆಪತ್ತು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನೀರಿನಲ್ಲಿ ಮೃತಪಟ್ಟಿರುವ ಸಾವಿರಾರು ಮೀನುಗಳು ನೀರಿನಲ್ಲಿ ಕೊಳೆತು ಕೆರೆಯ ನೀರು ಮತ್ತಷ್ಟು ವಿಷವಾಗುವ ಸಾಧ್ಯತೆ ಇದೆ ಹಾಗಾಗಿ ಸ್ಥಳೀಯ ಗ್ರಾಪಂ ಅಧಿಕಾರಿಗಳು ಅಥವಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನೀರಿನಲ್ಲಿ ಮೃತಪಟ್ಟಿರುವ ಕೆರೆಯ ಮೀನುಗಳನ್ನು ಹೊರ ತೆಗೆದು ವಿಲೇವಾರಿ ಮಾಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ವಿಕೃತ ಮನಸ್ಥಿತಿಯ ಕೃತ್ಯ: ವೈಯಕ್ತಿಕ ದ್ವೇಷದಿಂದ ಯಾರೋ ಕಿಡಿಗೇಡಿ ಗಳು ಬಾಳೆ ಅಥವಾ ಕೃಷಿ ಬೆಳೆಗಳಿಗೆ ಸಿಂಪಡಿ ಸುವ ಕ್ರಿಮಿನಾಶಕವನ್ನು ಕೆರೆಗೆ ಹಾಕಿದ್ದಾರೆ. ಇದರಿಂದ ಮೀನುಗಳು ಮೃತಪಟ್ಟಿವೆ. ಏನೇ ವೈಯಕ್ತಿಕ ದ್ವೇಷಗಳಿದ್ದರೂ ಈ ರೀತಿ ಕೃತ್ಯವೆಸ ಗಬಾರದು. ಇದು ವಿಕೃತ ಮನಸ್ಥಿತಿ. ತಪ್ಪಿತ ಸ್ಥರು ಯಾರೇ ಆಗಿದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆಯಿಂದ ಸಾಕಷ್ಟು ನಷ್ಟವಾಗಿದೆ ಮೀನು ಗಾರಿಕೆ ಇಲಾಖೆ ಅಥವಾ ಗ್ರಾಪಂ ಅಧಿಕಾರಿ ಗಳು ಆಗಿರುವ ನಷ್ಟಕ್ಕೆ ಪರಿಹಾರ ಕೊಡುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.