Advertisement

ಇರಾನ್‌ನಲ್ಲಿ ದಿಗ್ಬಂಧಿತ ಆರು ಬೆಸ್ತರ ಬಿಡುಗಡೆ

10:01 AM Oct 16, 2018 | Team Udayavani |

ಬೈಂದೂರು: ಗಡಿ ಉಲ್ಲಂಘನೆಯ ಆರೋಪದಲ್ಲಿ ಇರಾನಿ ಪೊಲೀಸರಿಂದ ಬಂಧಿತರಾದ ಉತ್ತರ ಕನ್ನಡದ 17 ಮತ್ತು  ಉಡುಪಿ ಜಿಲ್ಲೆಯ ಶಿರೂರು ಮೂಲದ ಓರ್ವ ಮೀನುಗಾರರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ದುಬಾೖ ಕೆಎನ್‌ಆರ್‌ಐ ಸ್ಪಂದಿಸಿದೆ. ಇವರ ಪ್ರಯತ್ನದ ಬಳಿಕ ಆರು ಮಂದಿಯನ್ನು ಇರಾನ್‌ ಸರಕಾರ ಬಿಡುಗಡೆಗೊಳಿಸಿದ್ದು, ಉಳಿದವರನ್ನು ವಾರದೊಳಗೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ದುಬಾೖ ಮೂಲಗಳಿಂದ ತಿಳಿದುಬಂದಿದೆ.

Advertisement

ಜು. 27ರಂದು ದುಬಾೖಯಿಂದ ಮೀನುಗಾರಿಕೆಗೆ ತೆರಳಿದ ಶಿರೂರಿನ ಅಬ್ದುಲ್‌ ಹುಸೇನ್‌ ಸಹಿತ ಒಟ್ಟು 18 ಜನರನ್ನು ಅಕ್ರಮ ಗಡಿ ಪ್ರವೇಶದ ಆಪಾದನೆಯಲ್ಲಿ ಇರಾನಿ ಪೊಲೀಸರು ಬಂಧಿಸಿದ್ದರು. ಈ ವರದಿ “ಉದಯವಾಣಿ’ ಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ “ನಮ್ಮ ಕುಂದಾಪ್ರ ಕನ್ನಡ ಬಳಗ’ದ ಗೌರವಾಧ್ಯಕ್ಷ ಹಾಗೂ ದುಬಾೖ ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದ ತಂಡ ದುಬಾೖಯಲ್ಲಿರುವ ಭಾರತೀಯ ಉಪ ರಾಯಭಾರಿ ಕಚೇರಿಗೆ ಭೇಟಿ ನೀಡಿ ಉಪ ರಾಯಭಾರಿ ವಿಪುಲ್‌ ಅವರೊಂದಿಗೆ ಸಮಾಲೋಚನೆ ನಡೆಸಿತ್ತು.

“ಭಟ್ಕಳ್‌’ ಸಂಘಟನೆಯ ಮುಖ್ಯಸ್ಥ ರಾದ ಸಯೀದ್‌ ಖಲೀಲ್‌, ಕೆಎನ್‌ಆರ್‌ಐ ಕಾರ್ಯಕಾರಿಣಿ ಸದಸ್ಯ ಮೊಹಮ್ಮದ್‌, ಕಾರ್ಯದರ್ಶಿ ಪ್ರಭಾಕರ ಅಂಬಲತೆರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next