Advertisement

ಮಲ್ಪೆ: ಘರ್ಷಣೆಗೆ ತಿರುಗಿದ ಮೀನುಗಾರರ ಪ್ರತಿಭಟನೆ 

07:13 AM Mar 05, 2019 | Team Udayavani |

ಮಲ್ಪೆ; ಲೈಟ್ ಫಿಶಿಂಗ್, ಬುಲ್ ಟ್ರಾಲ್ ಅವೈಜ್ಞಾನಿಕ ಮೀನುಗಾರಿಕೆ ವಿರೋಧಿಸಿ ಮಂಗಳವಾರ ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪರ್ಸಿನ್ ಬೋಟ್ ಮೀನುಗಾರರು ಮತ್ತು ಆಳ ಸಮುದ್ರ ಮೀನುಗಾರರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. 

Advertisement

ಪರ್ಸಿನ್ ಬೋಟ್ ಮೀನುಗಾರರು ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿದ್ದರೂ ಇದುವರೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಂದರು ಗೇಟ್ ಅನ್ನು  ಮುಚ್ಚಿ ಆಳ ಸಮುದ್ರ ಮೀನುಗಾರರು  ಪ್ರತಿಭಟನೆ ನಡೆಸುತಿದ್ದರು. ಈ ನಡುವೆ ಬಂದರು ಗೇಟ್ ಬಂದ್ ಮಾಡಿದಕ್ಕೆ ಪರ್ಸಿನ್ ಮೀನುಗಾರರು ಅಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರು ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

ಡಿವೈಎಸ್ ಪಿ ಜೈಶಂಕರ್ ಮಾತನಾಡಿ ಮೀನುಗಾರ ಮುಖಂಡರು ತಮ್ಮಲ್ಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಎಂದು ಸಲಹೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next