Advertisement
ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನು ಗಾರಿಕೆ ಮೇ 31ಕ್ಕೆ ಕೊನೆಗೊಂಡಿದ್ದು, ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ಅವು ಸಮುದ್ರಕ್ಕೆ ಇಳಿಯಬೇಕಾದರೆ ಮಳೆ ಉತ್ತಮವಾಗಿ ಬಂದು, ದೊಡ್ಡ ಮಟ್ಟದ ತೂಫಾನ್ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ವಿಳಂಬವಾಗಿಯೇ ಮುಂಗಾರು ಆರಂಭ ವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.
ಮುಂಗಾರಿನಲ್ಲಿ ನಡೆಯುವ ನಾಡ ದೋಣಿ ಮೀನುಗಾರಿಕೆಯಲ್ಲಿ ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಕ್ಕಿದಲ್ಲಿ ದಿನವೊಂದರ ವಹಿವಾಟು ಕೋ.ರೂ. ಸ್ತರಕ್ಕೇರುತ್ತದೆ. ಈ ಸೀಸನ್‌ನಲ್ಲಿ ನಾಡದೋಣಿಗಳಿಗೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ವಿಳಂಬವಾದಷ್ಟು ಮೀನುಗಾರರಿಗೆ ನಷ್ಟವೇ ಹೆಚ್ಚು.
Related Articles
ಇನ್ನೂ ಮಳೆ ಬಂದಿಲ್ಲ. ತೂಫಾನ್ ಕೂಡ ಕಾಣಿಸಿಲ್ಲ. ಹಾಗಾಗಿ ನಾಡ ದೋಣಿ ಮೀನುಗಾರಿಕೆಯು ಜು.10ರ ಬಳಿಕವಷ್ಟೇ ಆರಂಭವಾಗಬಹುದು. ಕಳೆದ ಬಾರಿಯೂ ಜು. 20ರ ಅನಂತರವಷ್ಟೇ ಆರಂಭ ವಾಗಿತ್ತು ಎಂದು ಗಂಗೊಳ್ಳಿ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ “ಉದಯವಾಣಿ’ಗೆ ತಿಳಿಸಿದ್ದಾರೆ.
Advertisement