ಮಲ್ಪೆ: ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು ಅದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರ ಉತ್ತೇಜನ ನೀಡಬೇಕಾಗಿದೆ. ಮೀನುಗಾರರು ಪ್ರವಾಸೋದ್ಯಮದಲ್ಲಿಯೂ ತೊಡಗಿ ಆದಾಯ ವೃದ್ಧಿಸಿಕೊಳ್ಳಬಹುದು ಎಂದು ಅಂಬಲ ಪಾಡಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ರವಿವಾರ ಉಡುಪಿ ಕೋಡಿಬೆಂಗ್ರೆ ಯಲ್ಲಿ ಕೇರಳ ಮಾದರಿ ನೂತನ ಬೋಟ್‌ಹೌಸ್ ತಿರುಮಲ ಕ್ರೂಸ್ ಉದ್ಘಾಟಿಸಿ ಅವರು ಮಾತನಾಡಿ ದರು.
ಕಿದಿಯೂರು ಹೊಟೇಲ್‌ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಗುಣಮಟ್ಟದ ಸೇವೆ ಯಿಂದ ಉದ್ಯಮ ಯಶಸ್ವಿಯಾಗಲು ಸಾಧ್ಯ ಎಂದರು.
ಉಡುಪಿ ಕರಾವಳಿ ಪ್ರವಾಸೋ ದ್ಯಮ ಅಸೋಸಿಯೇಶನ್ ಅಧ್ಯಕ್ಷ ಮನೋಹರ್ ಶೆಟ್ಟಿ, ಉಡುಪಿ ಕರ್ಣಾಟಕ ಬ್ಯಾಂಕ್‌ನ ಪ್ರಾ. ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾಲಕ್ಷ್ಮೀ ಆರ್., ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿಗಳಾದ ಯುವ ರಾಜ್ ಸಾಲ್ಯಾನ್ ಮಸ್ಕತ್, ಕೇಶವ ಕುಂದರ್, ಗೋಪಾಲ್ ಕುಂದರ್ ಕೊಡವೂರು, ಸುಧಾಕರ ಕುಂದರ್, ನವೀನ್ ಕುಂದರ್, ಹರೀಶ್ ಜಿ.ಕೋಟ್ಯಾನ್, ಗೋಪಾಲ್ ಮೆಂಡನ್, ಮಹಾಬಲ ತೋಳಾರ್, ಶಂಕರ್ ಕುಂದರ್, ತಿರುಮಲ ಕ್ರೂಸ್‌ನ ಪಾಲು ದಾರರಾದ ನಾಗರಾಜ್ ಬಿ. ಕುಂದರ್, ಕೃಷ್ಣ ಬಿ. ಕುಂದರ್, ವಿಶ್ವನಾಥ್ ಶ್ರೀಯಾನ್ ಉಪಸ್ಥಿತರಿದ್ದರು. ಸತೀ ಶ್ಚಂದ್ರ ಶೆಟ್ಟಿ ನಿರೂಪಿಸಿ, ವಂದಿಸಿದರು.
ಬೋಟ್‌ಹೌಸ್ ಹೇಗಿದೆ?
ದೊಡ್ಡ ಬೋಟ್‌ಹೌಸ್ ಇದಾಗಿದ್ದು, 5 ಬೆಡ್‌ರೂಂ ಒಳಗೊಂಡಿದೆ. ಡೇ ಕ್ರೂಸ್, ನೈಟ್ ಕ್ರೂಸ್, ಓವರ್‌ನೆçಟ್ ಮತ್ತು ಡೇ ಆ್ಯಂಡ್ ನೈಟ್ ಕ್ರೂಸ್ ಹೀಗೆ ಒಟ್ಟು 4 ವಿಭಾಗದ ಯಾನ ಇದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ, ನೈಟ್‌ಕ್ರೂಸ್ ಸಂಜೆ 5ರಿಂದ ರಾತ್ರಿ 9.30ರ ವರೆಗೆ, ಓವರ್‌ನೆçಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30ರ
ವರೆಗೆ, ಡೇ ಆ್ಯಂಡ್ ನೈಟ್ ಕ್ರೂಸ್‌ನಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8.30ರ ವರೆಗೆ ಉಳಿದುಕೊಳ್ಳಬಹುದಾಗಿದೆ.
ಮುಖ್ಯ ಅತಿಥಿಯಾಗಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್. ಮಾತನಾಡಿ, ಪ್ರವಾಸೋದ್ಯಮದಲ್ಲಿ ಕೇರಳ ಮುಂಚೂಣಿಯಲ್ಲಿದೆ. ಕೇರಳದಲ್ಲಿ 1,200 ಹೌಸ್‌ಬೋಟ್‌ಗಳು ಇದ್ದು, 1,600 ಕೋ.ರೂ. ಆದಾಯ ಬರುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಇಂತಹ ಯೋಜನೆ ಹಾಕಿಕೊಳ್ಳಲು ಉತ್ತಮ ಅವಕಾಶಗಳಿವೆ ಎಂದರು.