Advertisement

ಮೀನುಗಾರರ ಕಿಸಾನ್‌ ಕ್ರೆಡಿಟ್‌ ಕಾರ್ಡ್‌; ಉಡುಪಿ ಜಿಲ್ಲೆಗೆ ಅತೀ ಹೆಚ್ಚು ಮಂಜೂರು

01:41 AM Mar 02, 2020 | Sriram |

ಉಡುಪಿ: ಕೇಂದ್ರ ಸರಕಾರ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಮೀನುಗಾರರು ಮತ್ತು ಮೀನು ಕೃಷಿಕರಿಗೆ ವಿಸ್ತರಿಸಿದ್ದು, ರಾಜ್ಯಕ್ಕೆ ಇದುವರೆಗೆ ಮಂಜೂರಾದ 1,140 ಕಾರ್ಡ್‌ಗಳಲ್ಲಿ 528 ಉಡುಪಿ ಜಿಲ್ಲೆಗೆ ಲಭಿಸಿವೆ.

Advertisement

ಈ ಯೋಜನೆಯನ್ನು 2020ರ ಜ. 2ರಂದು ತುಮಕೂರಿನಲ್ಲಿ ನಡೆದ ಪಿಎಂ ಕಿಸಾನ್‌ ಸಮ್ಮಾನ್‌ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಗಿತ್ತು. ಉಡುಪಿಯಲ್ಲಿ ಒಟ್ಟು 1,98,759 ಮೀನುಗಾರರಿದ್ದು, ಅವರಲ್ಲಿ 1,05,260 ಮಂದಿ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ 39,960 ಮೀನುಗಾರರಿದ್ದಾರೆ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ 698 ಮೀನುಗಾರರು ಕಿಸಾನ್‌ಕಾರ್ಡ್‌ ಕ್ರೆಡಿಟ್‌ ಕಾರ್ಡ್‌ ಪಡೆದುಕೊಂಡಿದ್ದಾರೆ. ಉಭಯಜಿಲ್ಲೆಗಳಿಂದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಕೋರಿ ಸುಮಾರು
3,500 ಅರ್ಜಿಗಳು ಬಂದಿವೆ. ಇಲಾಖೆ ಸೂಚಿಸಿದ ಸಮರ್ಪಕ ದಾಖಲೆಗಳಿದ್ದರೆ ಸಾಲ ಸೌಲಭ್ಯಕ್ಕೆ ಅರ್ಹರೆಂದು ಶಿಫಾರಸು ಮಾಡುತ್ತಾರೆ. ಮೀನುಗಾರರು ಖಾತೆ ಹೊಂದಿರಬೇಕು. ಆಧಾರ್‌ ಕಾರ್ಡ್‌, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದಾಖಲೆ ನೀಡಬೇಕು. ಭೂಮಿ ಇದ್ದರೆ ಅದರ ಪಹಣಿ ಬೇಕು.

ಗರಿಷ್ಠ 3.80 ಲ.ರೂ. ಸಾಲ
ಮೀನುಗಾರಿಕೆ ಅಭಿವೃದ್ಧಿಗೆ ಈ ಯೋಜನೆ ವರದಾನವಾಗಿದ್ದು, ಈ ವೃತ್ತಿಯಲ್ಲಿ ಇರುವವರಿಗೆ ಗರಿಷ್ಠ 3.80 ಲ.ರೂ.ವರೆಗೆ ಸಾಲಸೌಲಭ್ಯ ದೊರೆಯಲಿದೆ. ಮೀನುಗಾರಿಕೆಗೆ ಸಂಬಂಧಪಟ್ಟ ಯಾವುದೇ ವೃತ್ತಿಯಲ್ಲಿ ತೊಡಗಿದವರಿಗೂ ಈ ಯೋಜನೆ ಅನ್ವಯವಾಗುತ್ತದೆ.

ಪ್ರೋತ್ಸಾಹಧನವೂ ಲಭ್ಯ
ಮೀನುಗಾರಿಕೆಯಲ್ಲಿ ತೊಡಗಿರುವವರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯಡಿ ಸಾಲಸೌಲಭ್ಯ ಪಡೆದು ಅದನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಪ್ರೋತ್ಸಾಹಧನ (ಸಬ್ಸಿಡಿ)ವೂ ದೊರಕಲಿದೆ.

Advertisement

ಮೀನುಗಾರರ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಲಾಸಲಾಗುತ್ತದೆ. ಕರಾವಳಿಯಲ್ಲಿ ಉತ್ತಮ ಸ್ಪಂದನೆ ಇದೆ.
-ಡಿ. ತಿಪ್ಪೇಸ್ವಾಮಿ,
ಕೆ. ಗಣೇಶ್‌, ಮೀನುಗಾರಿಕೆ
ಇಲಾಖೆ ಜಿಲ್ಲಾ ಉಪ ನಿರ್ದೇಶಕರು, ದ.ಕ., ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next