Advertisement
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತೂಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದ್ದು, ಹೆಚ್ಚು-ಕಡಿಮೆ ತಿಂಗಳಾಂತ್ಯದಲ್ಲಿ ಸೇವೆಗೂ ಅಣಿಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಮೀನುಗಳು ಮಸಾಜ್ ಮಾಡಿ, ಪಾದಗಳ ಅಂದ ಹೆಚ್ಚುಸುವುದರ ಜತೆಗೆ ಆಹ್ಲಾದಕರ ಅನುಭವದೊಂದಿಗೆ “ಕೂಲ್’ ಮಾಡಿ ಕಳುಹಿಸಲಿವೆ.
ಕೈಗೆಟಕುವ ದರ ನಿಗದಿಪಡಿಸಲು ಬೆಂಗಳೂರು ವಿಭಾಗೀಯ ರೈಲ್ವೆ ಉದ್ದೇಶಿಸಿದೆ.
Related Articles
Advertisement
ಆದಾಯದಮೂಲವೂ…ಆರೋಗ್ಯದೃಷ್ಟಿಯೂ…:ಹೊರಗುತ್ತಿಗೆ ಮೂಲಕ ಇದರ ನಿರ್ವಹಣೆ ಮಾಡಲಿದ್ದು, ಬರುವ ಆದಾಯದಲ್ಲಿ ಪಾಲುದಾರಿಕೆ ಹೊಂದುವ ಚಿಂತನೆ ಇದೆ. ಮೀನು ಮಸಾಜ್ ಉದ್ದೇಶ ಒಂದೆಡೆ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿ, ಮತ್ತೂಂದೆಡೆ ಆದಾಯದ ಮೂಲವೂ ಆಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಅಕ್ವೇರಿಯಂ, ಕಾರಂಜಿ, ಫಿಶ್ ಸ್ಪಾ, ರೈಲು ಆರ್ಕೆಡ್‌ನಂತಹ ಹಲವು ವಿನೂತನ ಪ್ರಯೋಗಗಳೊಂದಿಗೆ ಹೃದಯಭಾಗದಲ್ಲಿರುವ ರೈಲು ನಿಲ್ದಾಣವು ನಗರದ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲಿದೆ. ಎಲ್ಲ ಮೀನುಗಳಿಂದ ಮಸಾಜ್ ಆಗುವುದಿಲ್ಲ.
ಇದಕ್ಕಾಗಿ ಹಲವು ಪ್ರಕಾರದ ಮೀನುಗಳಿವೆ. ಉದಾಹರಣೆಗೆ ಹರ್ಬಲ್, ವೈನ್, ಚಾಕೊಲೇಟ್ ಅಂಶಗಳ ಪೆಡಿಕ್ಯೂರ್ ಜನಪ್ರಿಯ. ಅಲ್ಲದೆ, ಓರಿಫ್ಲೇಮ್, ಮ್ಯಾಕ್, ವಿಎಲ್‌ಸಿಸಿ, ಓರ್ಲಿ ಇಂತಹ ಉತ್ತಮ ಗುಣಮಟ್ಟದ ಬ್ರ್ಯಾಂಡ್ ನ ಪೆಡಿಕ್ಯೂರ್
ಮಾಡಿಸಿಕೊಳ್ಳಬೇಕಾದರೆ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದರ ಜತೆಗೆ ದೇಶೀಯವಾಗಿಯೂ ಕಡಿಮೆ ವೆಚ್ಚದಲ್ಲಿ ಪೆಡಿಕ್ಯೂರ್ ಮೀನಿನ ಪ್ರಕಾರಗಳೂ ಇವೆ. ಅವುಗಳನ್ನು ಪರಿಚಯಿಸುವ ಯೋಚನೆ ಇದೆ ಎಂದು ಹೆಸರು ಹೇಳಲಿಚ್ಛಿಸದ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಏನಿದು”ಫಿಶ್ ಸ್ಪಾ’?
ನೀವು ಪಾದಗಳನ್ನು ನೀರಿನಲ್ಲಿ ಇಳಿಬಿಟ್ಟು ಕೂರುತ್ತಿದ್ದಂತೆ ಬುಳುಬುಳು ಬಾಯಿ ಬಿಡುತ್ತಾಬರುವಮೀನುಗಳು, ಒಡೆದ ಪಾದದ ಚರ್ಮವನ್ನು ತಿಂದು ಹಾಕುತ್ತವೆ. ಮೊಣಕಾಲಿನವರೆಗೆ ಕಾಲುಗಳನ್ನು ತೊಳೆದುಕೊಂಡ ನಂತರ 50ರಿಂದ 60 ಪುಟ್ಟಪುಟ್ಟ ಮೀನುಗಳು ತುಂಬಿದ ನೀರಿನ ತೊಟ್ಟಿಯಲ್ಲಿ ಇಳಿಬಿಟ್ಟರೆ ಸಾಕು. 15 ನಿಮಿಷದಲ್ಲಿಬಿರುಕು ಪಾದವನ್ನು ನಯಗೊಳಿಸಿರುತ್ತದೆ. ನೀರಿನಲ್ಲಿ ನೆನೆಯುತ್ತಾ ಪಾದ ಮೃದುವಾಗುತ್ತಾ ಹೋದಂತೆ ಮೀನು ಮೇಲ್ಭಾಗದ ಚರ್ಮವನ್ನು ತಿಂದು ಹಾಕುತ್ತವೆ. ಇದನ್ನೂ ಓದಿ :ಟ್ರಕ್ ನಿಂದ ಆಯತಪ್ಪಿ ಬಿದ್ದ ಚಾಲಕ : ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಈ ಮೊದಲು ಸುರಂಗ ಮತ್ಸ್ಯಾಗಾರ ಆರಂಭ
ಜುಲೈನಲ್ಲಷ್ಟೇ ದೇಶದ ಮೊದಲ ಸುರಂಗ ಮತ್ಸ್ಯಾಗಾರವನ್ನು ಅನಾವರಣಗೊಂಡಿದೆ. ಅಮೆಜಾನ್ ನದಿ ಕಲ್ಪನೆಯಡಿ 12 ಅಡಿ ಉದ್ದದ ಈ ಸುರಂಗ ಮತ್ಸ್ಯಾಗಾರ (ಅಕ್ವೇರಿಯಂ) ರೂಪಿಸಲಾಗಿದೆ. ಸುರಂಗದೊಳಗೆ ಸಾಗುತ್ತಿದ್ದರೆ, ಅಮೆಜಾನ್ ನದಿಯೊಳಗೆ ಸಾಗುತ್ತಿರುವ ಮೀನುಗಳನ್ನು ಪ್ರತ್ಯಕ್ಷ ನೋಡುತ್ತಿರುವಂತೆ ಭಾಸವಾಗುತ್ತದೆ. ಸಾಗರದಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳು, ಸಮುದ್ರ ಜೀವಿಗಳ ಮಾದರಿಗಳು ಇಲ್ಲಿ ಇವೆ. ಈ ಸುರಂಗ ಪ್ರವೇಶಕ್ಕೆ 25 ರೂ ಶುಲ್ಕ ನಿಗದಿ ಮಾಡಲಾಗಿದೆ. ಏನು ಉಪಯೋಗ?
– ಮೀನುಗಳು ಉಗುರಿನ ಮಧ್ಯ ಇರುವ ಕಸ, ಒಣಗಿ ಸಿಬಿರು ಎದ್ದ ಚರ್ಮವನ್ನು ತಿಂದು ಹಾಕುವುದರಿಂದ ಸ್ಕ್ರಬ್ಬಿಂಗ್ ಆಗುತ್ತದೆ.
– ಒರಟು ಚರ್ಮ ತಿನ್ನುವಾಗ ಚರ್ಮಕ್ಕೆ ಉತ್ತಮ ಮಸಾಜ್ ಸಿಗುತ್ತದೆ. ಚರ್ಮಕ್ಕೆ ಹೊಳಪು ಬರುತ್ತದೆ.
– ಕೆಲ ಪ್ರಷರ್ ಪಾಯಿಂಟ್ ಮೇಲೆ ನಯವಾಗಿ ಒತ್ತುವುದರಿಂದ ಒತ್ತಡ ನೋವು ಶಮನಗೊಳ್ಳುತ್ತದೆ.
– ಮೀನು ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಅಂಗಾಲು ಹುಣ್ಣು, ಗಾಯಕ್ಕೂ ಇದು ಶಮನಕಾರಿ.
– ಮೀನಿನ ಎಂಜಲಿನಲ್ಲಿ ಉತ್ತಮ ಆಂಟಿಸೆಪ್ಟಿಕ್ ಗುಣವಿದ್ದು ಇದರಿಂದ ಹುಣ್ಣು ಬೇಗ ಮಾಯುತ್ತದೆ. – ವಿಜಯ ಕುಮಾರ್ ಚಂದರಗಿ