Advertisement

ಮತ್ಸ್ಯಪ್ರಿಯರಿಗೆ ದುಬಾರಿ ದರದ ಬಿಸಿ

11:17 PM Apr 15, 2020 | Sriram |

ಉಡುಪಿ: ಲಾಕ್‌ಡೌನ್‌ ಇದ್ದರೂ ನಾಡದೋಣಿ ಮೀನುಗಾರಿಕೆ ನಡೆಸು ವಂತೆ ಅನುಮತಿ ನೀಡಲಾಗಿತ್ತು. ಆದರೆ ಬೆಲೆ ಮಾತ್ರ ಹಿಂದಿಗಿಂತ ಮೂರು ಪಟ್ಟು ಅಧಿಕವಿರುವು ದರಿಂದ ಮತ್ಸ್ಯಪ್ರಿಯರಿಗೆ ನಿರಾಸೆಯಾಗಿದೆ. ಅಲ್ಪಪ್ರಮಾಣದಲ್ಲಿ ಸಿಗುವ ಮೀನಿಗೆ ಅಪಾರ ಬೇಡಿಕೆಯಿರುವುದರಿಂದಾಗಿ ಸಿಕ್ಕಾಪಟ್ಟೆ ದರ ಏರಿಕೆ ಮಾಡುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸುತ್ತಾರೆ ಗ್ರಾಹಕರು.

Advertisement

ಗ್ರಾಹಕರಿಗೆ ಹೊರೆ
ಕೋವಿಡ್ 19 ಭೀತಿ ಇದೇ ರೀತಿ ಮುಂದು ವರಿದಿದ್ದೇ ಆದಲ್ಲಿ ಮೀನಿನ ದರ ಮತ್ತಷ್ಟು ಗಗನಕ್ಕೇರಲಿದೆ. ರಾಜ್ಯದಲ್ಲಿ 9 ಸಾವಿರಕ್ಕೂ ಅಧಿಕ ಕರಾವಳಿ ನಾಡ ಮೀನುಗಾರರು ಹಾಗೂ ಸಹಸ್ರಾರು ಒಳನಾಡು ಮೀನುಗಾರರ ಜೀವನೋಪಾಯ ದೃಷ್ಟಿಯಿಂದ ಈ ಅವಕಾಶ ವನ್ನು ಕಲ್ಪಿಸಲಾಗಿತ್ತು. ಆದರೆ ಗ್ರಾಹಕರಿಗೆ ರಿಯಾ ಯಿತಿ ದರದಲ್ಲಿ ಮೀನುಗಳನ್ನು ನೀಡುವ ಬದಲು ವಿಪರೀತ ದರ ವಿಧಿಸಲಾಗುತ್ತಿದೆ ಎಂಬ ಆರೋಪವಿದೆ.

ಈ ಹಿಂದೆ ಮೀನುಗಳನ್ನು ಏಲಂ ಹಾಕುವ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಮೀನುಗಾರರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ದಲ್ಲಾಳಿಗಳು ಗ್ರಾಹಕರ ಮುಖವಾಡದ ಮೂಲಕ ಖರೀದಿಸಿ ದುಪ್ಪಟ್ಟು ದರದಲ್ಲಿಯೂ ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್‌ಗೂ ಮುನ್ನವೇ ಮೀನಿನ ಕೊರತೆ ಇತ್ತಾದರೂ ದರ ಏರಿಕೆ ಗ್ರಾಹಕರಿಗೆ ಹೊರೆ ಅನಿಸುತ್ತಿರಲಿಲ್ಲ. ಆದರೆ 2 ಬಂಗುಡೆ ಮೀನಿಗೆ 100, 6 ಕಲ್ಲರ್‌ ಮೀನಿಗೆ 500 ರೂ., 1 ಕೊಡ್ಡೆಯಿ ಮೀನಿಗೆ 100 ರೂ. ಪಡೆಯುತ್ತಿದ್ದಾರೆ.

ಕೋಳಿಯೂ ದುಬಾರಿ
ಕೋವಿಡ್ 19 ಭೀತಿಗೂ ಮುನ್ನ ಹಕ್ಕಿಜ್ವರ ಬಾಧೆಯಿಂದಾಗಿ ಕೋಳಿಮಾಂಸದ ದರದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಆದರೆ ಈಗ ಇದರ ದರವೂ ಏರಿಕೆಯಾಗಿದೆ. ಕೆ.ಜಿ.ಗೆ 180 ರೂ.ಗಳಿಂದ 200 ರೂ.ಗಳ ಆಸುಪಾಸಿನಲ್ಲಿ ಕೋಳಿ ಮಾಂಸ ಮಾರಾಟವಾಗುತ್ತಿದೆ. ಆದರೆ, ಕೋಳಿ ಮಾಂಸ ಪ್ರಿಯರ ಸಂಖ್ಯೆಯೂ ಕೂಡ ಅದಕ್ಕೆ ಸಮಾನವಾಗಿ ಕುಸಿಯುತ್ತಿದೆ. ಕೋಳಿ ಮೊಟ್ಟೆಯ ದರವೂ ಹೋಲ್‌ಸೇಲ್‌ನಲ್ಲಿ 4 ರೂ. ಹಾಗೂ ಇತರೆಡೆಗಳಲ್ಲಿ 5ರೂ.ಗಳಿಗೆ ಮಾರಾಟವಾಗುತ್ತಿದೆ.

ಮೀನುಗಳ ಅಭಾವ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೀನುಗಳಿಗೆ ವಿಪರೀತ ಪ್ರಮಾಣದಲ್ಲಿ ಬೇಡಿಕೆ ಇದೆ. ಮತ್ತೂಂದೆಡೆ ಮೀನುಗಳ ಅಭಾವವಿದೆ. ಹಾಗಾಗಿ ದರದಲ್ಲಿ ಏರಿಕೆ ಮಾಡಲಾಗಿದೆ. ಏಲಂ ಮಾಡಲು ಅವಕಾಶ ಇಲ್ಲದ ಕಾರಣ ದುಬಾರಿ ದರಕ್ಕೆ ಮೀನುಗಳು ಮಾರಾಟವಾಗುತ್ತಿವೆ.
-ಜನಾರ್ದನ ತಿಂಗಳಾಯ,
ಅಧ್ಯಕ್ಷರು,
ನಾಡದೋಣಿ ಮೀನುಗಾರರ ಸಂಘ ಮಲ್ಪೆ

Advertisement
Advertisement

Udayavani is now on Telegram. Click here to join our channel and stay updated with the latest news.

Next