Advertisement

ಮೀನು ಕ್ಷಾಮ: ಸಮುದ್ರದಿಂದ ದೂರ ಸರಿಯುತ್ತಿರುವ ಸಾಂಪ್ರದಾಯಿಕ ಬೆಸ್ತರು

07:20 PM Nov 30, 2019 | Sriram |

ಕುಂಬಳೆ: ಒಂದು ಕಾಲದಲ್ಲಿ ಕುಂಬಳೆ ಮತ್ತು ಮೊಗ್ರಾಲ್‌ ನಿವಾಸಿಗಳ ಉಪಜೀವನ ಮಾರ್ಗವಾಗಿದ್ದ ಸಾಂಪ್ರದಾಯಿಕ ಮೀನುಗಾರಿಕೆ ಇಂದು ಪ್ರಕೃತಿಯ ಮುನಿಸಿನಿಂದ ಬೆಸ್ತರಿಂದ ದೂರವಾಗುತ್ತಿದೆ.

Advertisement

ಮತ್ಸ್ಯ ಸಂಪತ್ತಿನ ಕ್ಷಾಮ, ,ಸಮುದ್ರ ಕೊರೆತ ಮುಂತಾದ ಅಕಾಲಿಕ ವಾತಾವರಣದಿಂದ ಹೆಚ್ಚಿನ ಬೆಸ್ತರು ಇಲ್ಲಿನ ಈ ಕಾಯಕದಿಂದ ದೂರ ಸಾಗಿರುವರು.
ಪ್ರಕೃತ ಈ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಮೀನು ದೊರಕುತ್ತಿದ್ದು ಇದರಿಂದ ಬೆಸ್ತರ ಆದಾಯಕ್ಕೆ ಕುತ್ತಾಗಿದ್ದು ಬೆಸ್ತರ ಜೀವನ ದುಸ್ತರವಾಗಿದೆ.

ಆರಿಕ್ಕಾಡಿ ಕಡವತ್‌,ಕೊಯಿಪ್ಪಾಡಿ,ಪೆರ್ವಾಡು ಮೊಗ್ರಾಲ್‌ ಕರಾವಳಿಯಲ್ಲಿ ಸುಮಾರು 500ರಷ್ಟು ಬೆಸ್ತ ಕುಂಟುಂಬ ತಮ್ಮ ಕುಲಕಸಬು ನಷ್ಟವಾಗುತ್ತಿರುವ ಕಾರಣ ಸಂಕಷ್ಟಕ್ಕೊಳಗಾಗಿರುವರು.

ಚವಿಟ್ಟು ವಲ ಸಂಪ್ರದಾಯ :ಇಲ್ಲಿ ಬೆಸ್ತರತಂಡ ಕಡಲಕಿನಾರೆಯಲ್ಲಿ ಬಲೆಯನ್ನು ಮೆಟ್ಟಿನಿಂತು ವೃತ್ತಾಕಾರದಲ್ಲಿ ಸಮುದ್ರಕ್ಕೆ ಬಲೆ ಎಸೆದು ಮೀನು ಹಿಡಿಯುವುದು ಹಿಂದಿನ ಕಾಲದಿಂದಲೂ ನಡೆದುಬರುತ್ತಿದೆ.ಅಲ್ಲದೆ ದೋಣಿಯ ಮೂಲಕ ಆರಿಕ್ಕಾಡಿ ಕುಂಬಳೆ ಕೊಯಿಪ್ಪಾಡಿ ಮೊದಲಾದೆಡೆಗಳಲ್ಲಿ ಮೀನುಗಾರಿಕೆ ನಡೆಸುವರು.ಈ ಬೆಸ್ತರು ಇಂದು ತಮ್ಮ ಕುಲಕಸುಬಿಲ್ಲದೆ ಇತರ ಉದ್ಯೋಗಕ್ಕಾಗಿ ಆಲೆಯುವಂತಾಗಿದೆ.
ತಮ್ಮ ದೋಣಿಗಳನ್ನು ಸಮುದ್ರ ತೀರದಲ್ಲಿ ಕಟ್ಟಿ ಹಾಕಲಾಗಿದೆ.ಮೀನಿನ ಕ್ಷಾಮ ತಲೆದೋರಿದ ಕಾರಣ ಬೆಸ್ತರ ಕುಟುಂಬ ಉಪವಾಸ ಬೀಳುವಂತಾಗಿದೆ.ಸಾಂಪ್ರದಾಯಿಕ ಮೀನುಗಾರಿಕೆಗೆ ಸುಮಾರು 75 ವರ್ಷಗಳ ಇತಿಹಾಸವಿರುವ ಈ ಪ್ರದೇಶದಲ್ಲಿ ಹಿಂದಿನ ಕಾಲದಲ್ಲಿ ಮೀನುಹಿಡಿಯಲು 6 ತಂಡಗಳಾಗಿದ್ದ ಬೆಸ್ತರ ತಂಡ ಇದೀಗ ಕೆವಲ 2 ತಂಡಗಳಿಗೆ ಸೀಮಿತಗೊಂಡಿದೆ.

ಮುಂದಿನ ದಿನಗಳಲ್ಲಿ ಈ ತಂಡಗಳು ಉದ್ಯೋಗವಿಲ್ಲದೆ ಈ ಕಾಯಕದಿಂದ ದೂರವಾಗುವ ಕಾಲ ದೂರವಿಲ್ಲ.ವರ್ಷದಿಂದ ವರ್ಷಕ್ಕೆ ಸಮುದ್ರದಿಂದ ದೊರಕುವ ಮೀನುಗಳ ಸಂಖ್ಯೆ ಕುಂಠಿತವಾಗುತ್ತಿದೆ ಎಂದು ಸರಕಾರದ ಅಂಕಿ ಅಂಶ ಸಾರುವುದು.ಯಂತ್ರಬೋಟ್‌ಗಳಿಂದ ಆಳ ಸಮುದ್ರಮೀನುಗಾರಿಕೆಯಲ್ಲಿ ಮರಿ ಮೀನುಗಳನ್ನೂ ಹಿಡಿಯುವ ಕಾರಣ, ಮೀನುಗಾರಿಕೆ,ನಿಧಿತ ಬಲೆಯ ಉಪ ಯೋಗ,ಇನ್ನಿತರ ಕಾರಣದಿಂದ ಕಳೆದ 2012 ರಿಂದ ಮೀನುಗಳ ಕ್ಷಾಮ ತಲೆದೋರಿರುವುದಾಗಿ ಮೀನುಗಾರಿಕೆ ಇಲಾಖೆಯ ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದ 590 ಕಿ.ಮೀ.ಉದ್ದ ದ ಸಮುದ್ರ ಕರಾವಳಿಯಲ್ಲಿ 222 ಮತ್ಸ್ಯ ಗ್ರಾಮಗಳಲ್ಲಿ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿರುವ ಸುಮಾರು 10 ಲಕ್ಷದಷ್ಟು ಬೆಸ್ತರ ಜಟಿಲವಾದ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂಬ ಆರೋಪ ಕಡಲ ಮಕ್ಕಳದು.ಇದೇ ರೀತಿ ಮುಂದುವರಿದಲ್ಲಿ ಕುಂಬಳೆ ಆರಿಕ್ಕಾಡಿ ಸಹಿತ ಕಾಸರಗೋಡು ಜಿಲ್ಲೆಯ ವಿವಿದೆಡೆಗಳ ಬೆಸ್ತರ ಕುಟುಂಬ ಮುಂದೆ ಕೆಲಸವಿಲ್ಲದೆ ಅಲೆದಾಡುವುದಕ್ಕೆ ಮುನ್ನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರಕಾರ, ಜನಪ್ರತಿನಿಧಿಗಳು ಮತ್ತು ಇಲಾಖೆ ಮುಂದಾಗಬೇಕಾಗಿದೆ.

Advertisement

ಮೀನಿನ ಲಭ್ಯತೆ ಕುಂಠಿತ
ಕೆಲವೊಂದು ಕಾರಣಗಳಿಂದ ಎಲ್ಲಾ ಕಡೆಗಳಲ್ಲೂ ಸಮುದ್ರದಿಂದ ದೊರಕುವ ಮೀನಿನ ಲಭ್ಯತೆ ಕುಂಠಿತವಾಗುತ್ತಿದೆ.ಬೆಸ್ತರಿಗೆ ಸರಕಾರದಿಂದ ಇಲಾಖೆಯ ಮೂಲಕ ಹಲವಾರು ಯೋಜನೆಗಳನ್ನು ನೀಡಲಾಗುವುದು.ಜೂನ್‌ ಜುಲೈ ತಂಗಳಲ್ಲಿ ಉಚಿತ ರೇಶನ್‌, ಬೆಸ್ತರ ಮಕ್ಕಳಿಗೆ ಪದವಿ ತನಕ ಉಚಿತ ಶಿಕ್ಷಣ,ಸಂಬಾದ್ಯ ಆಶ್ವಾಸ ಪದ್ಧತಿ ಯೋಜನೆ,ಸಮುದ್ರ ಕಿನಾರೆಯಲ್ಲಿ 50 ಮೀ.ನೊಳಗೆ ಮನೆ ಕಟ್ಟಿದವರಿಗೆ ಬೇರೆಡೆ 3 ಸೆಂಟ್ಸ್‌ ಸ್ಥಳ ಮತ್ತು ಹೊಸ ಮನೆ ಮತ್ತು ಕೆಲವು ಸಂದರ್ಭಗಳಲ್ಲಿ ತುರ್ತು ಪರಿಹಾರವನ್ನು ನೀಡಲಾಗುವುದು.
-ಜಿ. ಜೊಮೋನ್‌
ಎಸ್‌.ಐ.ಫಿಶರೀಸ್‌ ಮತ್ಸ್ಯ ಭವನ ಕುಂಬಳೆ

ಸವಲತ್ತು ಏನೇನೂ ಸಾಲದು
ಇದೇ ರೀತಿಯ ಮೀನು ಕ್ಷಾಮ ಉಂಟಾದಲ್ಲಿ ನಾವು ಇನ್ನಷ್ಟು ದರಿದ್ರರಾಗಿಬಾಳ ಬೇಕಾಗುವುದು.ಸರಕಾರದಿಂದ ನಮಗೆ ಸಿಗುವ ಸವಲತ್ತು ಏನೇನೂ ಸಾಲದು.ನಮ್ಮತ್ತ ಸರಕಾರ ಚುನಾಯಿತ ಪ್ರತಿನಿಧಿಗಳು ಮತ್ತು ಇಲಾಖೆ ಗಮನ ಹರಿಸಿ ನಮ್ಮನ್ನು ಕಾಪಾಡಬೇಕಿದೆ.
 -ಅಬ್ದುಲ್‌ ರಹೀಂ
ಬೆಸ್ತ ಕುಂಬಳೆ ಕೊಯಿಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next