Advertisement

ರಾಮನಾಥಪುರದಲ್ಲಿ ಮತ್ಸ್ಯ ಸಂಕುಲಕ್ಕೆ ಕಂಟಕ

04:01 PM Mar 29, 2023 | Team Udayavani |

ಅರಕಲಗೂಡು : ತಾಲೂಕಿನ ರಾಮನಾಥಪುರದ ಪವಿತ್ರ ಕಾವೇರಿ ವಹ್ನಿ ಪುಷ್ಕರಣಿ ನಿರ್ವಹಣೆ ಕೊರತೆಯಿಂದಾಗಿ ಬೇಸಿಗೆಯಲ್ಲಿ ನದಿ ನೀರು ಇಳಿಕೆಯಾಗಿ ಮೀನುಗಳಿಗೆ ಜೀವಸೆಲೆ ಸಿಗದೆ ಮತ್ಸ್ಯರಾಶಿ ನಶಿಸುವ ಆತಂಕ ಎದುರಾಗಿದೆ.

Advertisement

ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನ ಸನ್ನಿಧಿಯಲ್ಲಿರುವ ವಹ್ನಿ ಪುಷ್ಕರ ಣಿಯಲ್ಲಿ ಸಾವಿರಾರು ಮೀನು ಗಳು ನೆಲೆಸಿವೆ. ಜಾತ್ರೆ ವೇಳೆ ಮೀನುಗಳನ್ನು ನೋಡಲು ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಬೇಸಿಗೆ ಬಿಸಿಲಿಗೆ ನದಿ ನೀರು ಕಡಿಮೆಯಾಗಿ ಆಹಾರ ಕೂಡ ಸಿಗದೆ ಮೀನುಗಳು ಜೀವಕ್ಕೆ ತೊಡಕಾಗಿದೆ.

ನದಿ ನೀರು ಕಡಿಮೆಯಾದ ಸಂದರ್ಭದಲ್ಲಿ ಪ್ರತಿ ವರ್ಷ ಮೀನುಗಳ ಶಿಕಾರಿ ನಡೆಸಲಾಗುತ್ತಿದೆ. ರಾತ್ರಿ ವೇಳೆ ಮೀನುಗಳನ್ನು ಕದ್ದು ಸಾಗಿಸಲಾಗುತ್ತಿದೆ. ಕಳೆದ ವರ್ಷ ಮೀನುಗಳನ್ನು ಕದಿಯಲು ಬಂದಿದ್ದ ಕಳ್ಳರು ಅಲ್ಲಿಯೇ ಬಿಟ್ಟು ಹೋಗಿದ್ದ ಭಾರೀ ಗಾತ್ರದ ಮೀನುಗಳು ಅಸುನೀಗಿದ್ದವು. ಇದಕ್ಕೆ ಸ್ಥಳೀಯರು ಮೀನುಗಳಿಗೆ ರಕ್ಷಣೆಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಆದರೆ, ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಮೀನುಗಾರಿಕೆ ಇಲಾಖೆ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸ್ಥಳೀಯ ಗ್ರಾಪಂ ಕಡೆ ಬೊಟ್ಟು ಮಾಡಿ ನುಣುಚಿಕೊಳ್ಳುತ್ತಿದ್ದು, ವಹ್ನಿ ಪುಷ್ಕರಣಿ ಮೀನುಗಳಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ.

ಸೂಕ್ತ ತಡೆಗೋಡೆ ನಿರ್ಮಿಸಿ: ಪ್ರತಿ ವರ್ಷ ಬೇಸಿಗೆ ವೇಳೆ ನೀರು ನಿಲ್ಲುವಂತೆ ಸೂಕ್ತ ತಡೆಗೋಡೆ ನಿರ್ಮಿಸದ ಪರಿಣಾಮ ಪ್ರತಿ ವರ್ಷವೂ ಬೇಸಿಗೆ ವೇಳೆ ಅಪಾರ ಪ್ರಮಾಣದ ಮೀನುಗಳು ಹೊರಹೋಗು ತ್ತಿವೆ. ವಹಿ° ಪುಷ್ಕರಣಿಯಿಂದ 400ಮೀ. ಅಂತ ರದಲ್ಲಿ ಸ್ಥಳೀಯ ಮೀನುಗಾರಿಕೆ ಇಲಾಖೆ ಕಚೇರಿ, ಸಾಕಾಣಿಕೆ ಕೇಂದ್ರವಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.

ಮರಳು ಮೂಟೆ ಅಳವಡಿಕೆ: ನದಿಯಲ್ಲಿ ನೀರಿನ ಮಟ್ಟ ಇಳಿಕೆ ಕಂಡಿರುವ ಪರಿಣಾಮ ವಹ್ನಿ ಪುಷ್ಕರಣಿಯಲ್ಲಿರುವ ಅಪಾರ ಮೀನುಗಳ ರಕ್ಷ ಣೆಗೆ ಹತ್ತಾರು ಮರಳಿನ ಚೀಲ ಹಾಕಿ ಕಲ್ಲುಗಳನ್ನು ಜೋಡಿಸಿದ್ದಾರೆ. ಇದರಿಂದ ಮೀನುಗಳು ಹೊರ ಹೋಗುವು ದನ್ನು ತಡೆಯಲು ಸಾಧ್ಯವಿಲ್ಲ. ಇದರ ಬಳಿ ಕೇವಲ ಎರಡು ಅಡಿ ನೀರು ಹರಿಯುತಿದೆ. ಮೀನುಗಳನ್ನು ಸುಲಭವಾಗಿ ಹಿಡಿಯಬಹುದಾಗಿದೆ. ಅಲ್ಲದೆ ದೊಡ್ಡಮೀನುಗಳು ಹಾರಿ ಹರಿಯುವ ನೀರಿನಲ್ಲಿ ತೇಲಿಕೊಂಡು ಹೋಗುತ್ತಿವೆ.

Advertisement

ಆಹಾರ ಕೊರತೆ: ಶ್ರೀ ಕ್ಷೇತ್ರದಲ್ಲಿ ಮಾರ್ಗಶಿರ ಮಾಸದಲ್ಲಿ ತಿಂಗಳ ಕಾಲ ನಡೆಯುವ ಜಾತ್ರೆ ವೇಳೆ ಮೀನುಗಳಿಗೆ ಆಹಾರದ ಕೊರತೆ ಕಾಡುವುದಿಲ್ಲ. ಮತ್ಸ್ಯರಾಶಿ ಕಣ್ತುಂಬಿಕೊಳ್ಳುವ ಸಲುವಾಗಿ ಜಾತ್ರೆಗೆ ಬರುವ ಸಹಸ್ರಾರು ಭಕ್ತರು ಕಡಲೆಪುರಿ ಸಿಹಿ ತಿನಿಸುಗಳನ್ನು ಮೀನುಗಳಿಗೆ ನೀಡುತ್ತಾರೆ. ಆದರೆ, ಬೇಸಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ತೀರ ಕಡಿಮೆ. ಹೀಗಾಗಿ ವಹ್ನಿ ಪುಷ್ಕರಣಿಗೆ ಜನರು ಭೇಟಿ ನೀಡುವುದಿಲ್ಲ. ಪರಿಣಾಮವಾಗಿ ಮೀನುಗಳಿಗೆ ಆಹಾರದ ಕೊರತೆ ವಿಪರೀತವಾಗಿದೆ. ನದಿ ನೀರು ತಗ್ಗಿದ್ದರಿಂದ ಆಹಾರ ಅರಸಿ ಹಲವು ಮೀನುಗಳು ವಹ್ನಿ ಪುಷ್ಕರಣಿಯಿಂದ ಹೊರಹೋಗುತ್ತಿವೆ. ವಹ್ನಿ ಪುಷ್ಕರಣಿ ದಡಕ್ಕೆ ಬರುವ ಮೀನು ಗಳು ಕಳ್ಳರಿಗೆ ಆಹಾರವಾಗುತ್ತಿರುವುದು ದುರಂತವೇ ಸರಿ. ಆಹಾರ ವಿಲ್ಲದೆ ಕೆಲವು ಮೀನುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಪುಷ್ಕರಣಿ ಒಂದು ಕಿ.ಮೀ.ಅಂತರದಲ್ಲಿ ಯಾವುದೆ ರೀತಿಯ ಮೀನುಗಳನ್ನು ಹಿಡಿಯಬಾರದೆಂದು ಸರ್ಕಾರದ ನಿಷೇಧ ವಿದ್ದರೂ ಕಾವಲುಗಾರರು ಇಲ್ಲದ ಕಾರಣ ರಾತ್ರಿ ವೇಳೆ ಕಳ್ಳರಿಗೆ ನಿಯಮಗಳು ಅನ್ವಯಿಸುತ್ತಿಲ್ಲ.

ಕಾವೇರಿ ವಹ್ನಿ ಪುಷ್ಕರಣಿ ಮಹಿಮೆ: ರಾಮನಾಥಪುರ ಪುಣ್ಯ ಕ್ಷೇತ್ರ ಹಾಸನದಿಂದ ದಕ್ಕಿಣಕ್ಕೆ 49 ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19 ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ತ್ರೇತಾ ಯುಗದಲ್ಲಿ ರಾವಣನನ್ನು ಸಂಹರಿಸಿದ ಶ್ರೀ ರಾಮ ಅಯೋಧ್ಯೆಗೆ ಮರಳಿ ಬ್ರಾಹ್ಮಣನಾದ ರಾವಣನ ಅಸುರ ಪರಿವಾರವನ್ನು ಸಂಹರಿಸಿದ. ಇದರಿಂದ ಬ್ರಹ್ಮಹತ್ಯಾ ದೋಷ ಕಾಡುತ್ತದೆ. ಕುಲ ಗುರು ವಶಿಷ್ಠರ ಸೂಚನೆಯಂತೆ ರಾಮನಾಥಪುರಕ್ಕೆ ತೆರಳಿದಾಗ ಅಗಸ್ತ್ಯ ಋಷಿ ಗಳು ವಹ್ನಿ ಪುಷ್ಕರಣಿ ಬಳಿ ಉದ್ಭವ ಶಿವಲಿಂಗ ಪೂಜಿಸುವಂತೆ ತಿಳಿಸುತ್ತಾರೆ. ಅದರಂತೆ ಶಿವ ನನ್ನು ಆರಾಧಿಸಿ ರಾಮ ದೋಷ ಪರಿಹರಿಸಿಕೊಂಡ ಎಂಬುದನ್ನು ಇತಿಹಾಸ ತಿಳಿಸುತ್ತದೆ.

ಪವಿತ್ರ ಪುಷ್ಕರಣಿಯಿರುವ ಸ್ಥಳ: ರಾಮೇಶ್ವರ ದೇಗುಲದ ಪಕ್ಕದಲ್ಲಿರುವ ಪ್ರಸಿದ್ಧ ಕಾವೇರಿ ಪುಷ್ಕರಿಣಿಗಳಲ್ಲಿ ವಹ್ನಿ ಪುಷ್ಕರಣಿ ಒಂದು. ಇನ್ನೂ ಎರಡು ಕೆ.ಆರ್‌. ನಗರದ ಬಳಿ ಅರ್ಕ ಪುಷ್ಕರಣಿ, ತಮಿಳುನಾಡಿನ ಶ್ರೀ ರಂಗದಲ್ಲಿ ಚಂದ್ರ ಪುಷ್ಕರಣಿಯಿದೆ. ಈ ಪುಷ್ಕರಣಿಯಲ್ಲಿರುವ ಮೀನು ಗಳು ದೇವತೆಗಳ ಅವತಾರವೆಂದು ನಂಬಲಾಗಿದೆ. ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ರಾಮನಾಥಪುರ ಕ್ಷೇತ್ರಕ್ಕೆ ಆಗಮಿಸಿದಾಗ ಮೀನಿಗೆ ಮುಗುತಿ ಚುಚ್ಚಿದ್ದರೆಂದು ಹಿರಿಯರು ಹೇಳುತ್ತಾರೆ.

ವಹ್ನಿ  ಪುಷ್ಕರಣಿ ಕಲುಷಿತಗೊಳ್ಳದಂತೆ ಕಾವೇರಿ ನದಿಯಲ್ಲಿ ಕೊಳೆತು ನಾರುತ್ತಿದ್ದ ಹಳೇ ಬಟ್ಟೆಗಳು ಹೂವಿನ ತ್ಯಾಜ್ಯ, ಊಟ ಮಾಡಿ ಬಿಸಾಡಿದ ಊಟದ ಎಲೆಗಳು, ಪ್ಲಾಸ್ಟಿಕ್‌ ತ್ಯಾಜ್ಯ ಹೊರ ತೆಗೆಯಲಾಗಿದೆ. ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿದ್ದು ಮೀನುಗಳ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಗ್ರಾಪಂ ಆಡಳಿತ ಕ್ರಮ ಕೈಗೊಳ್ಳಬೇಕಿದೆ. ●ಕುಮಾರಸ್ವಾಮಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧ್ಯಕ್ಷ.

ರಾಮನಾಥಪುರದ ವಹ್ನಿ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿರುವು ದರಿಂದ ನದಿಗೆ ಮರಳುಮೂಟೆ ಕಟ್ಟಿ ನೀರು ನಿಲ್ಲಿಸ ಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿ ಸರಕಾರದ ಗಮನಕ್ಕೆ ತರಲಾಗುವುದು. ರಾತ್ರಿ ವೇಳೆ ಕಾವಲು ಗಾರರ ನೇಮಕಕ್ಕೆ ಸಿಸಿ ಟಿವಿ ಅವಳವಡಿಸಿ ಹೈಮಾಸ್ಕ್ ದೀಪ ಅಳವಡಿಸಲು ಸ್ಥಳೀಯ ಗ್ರಾಪಂ ಮುಂದಾಗಬೇಕು. ●ಪ್ರೀತಾ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು, ಹಾಸನ.

-ವಿಜಯ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next