Advertisement

ಪ್ರಥಮ ಪೂಜಿತ ಜಗವಂದಿತ

06:59 PM Aug 31, 2019 | Suhan S |

ನಾವು ಕಲ್ಪಿಸಿಕೊಂಡಿರುವ ಗಣೇಶನ ಆಕೃತಿ ಹಲವಾರು ಅರ್ಥಗಳನ್ನು ಹೊಮ್ಮಿಸುತ್ತದೆ. ಒಂದು ಕಾಲನ್ನು ಮಡಚಿ, ಇನ್ನೊಂದು ಕಾಲನ್ನು ನೆಲದಲ್ಲಿ ಇರಿಸಿ ಕುಳಿತ ಗಣಪತಿಯ ರೂಪದ ಆಶಯ ಭೂಮಿಯ ಮೇಲೆ ಭದ್ರ ವಾಗಿ ಊರಿಕೊಂಡು ಮೇಲ್ಮುಖವಾಗಿ ಬೆಳೆಯಬೇಕು ಎಂದೇ ಇರಬೇಕು! ನಿಜವಾಗಿಯೂ ದೇವದೇವತೆಗಳು ಇದ್ದಾರೆಯೇ? ಅವರ ಇರವನ್ನು ಆಂತರ್ಯದಲ್ಲಿ ಕಂಡು, ಕೇಳಿ, ಅನುಭವಿಸಿದ ಅನೇಕ ಋಷಿಮುನಿಗಳು ಆಗಿಹೋಗಿದ್ದಾರೆ. ಸುಲಭವಾಗಿ ಒಲಿಯಬಲ್ಲ ದೇವರುಗಳಲ್ಲಿ ಒಬ್ಬ ವಿನಾಯಕ. ಒಂದರ್ಥದಲ್ಲಿ ಪಾರಲೌಕಿಕಕ್ಕೂ ಲೌಕಿಕಕ್ಕೂ ಆತ ಸಂಪರ್ಕ ಸೇತು ಇದ್ದ ಹಾಗೆ. ಇಂದು ಗಣೇಶ ಚತುರ್ಥಿ. ಅವನಿಂದ ಕಲಿಯಬಹುದಾದ ಬದುಕಿನ ಪಾಠಗಳ ವಿಶೇಷ ಪುಟ.

Advertisement

ನಮ್ಮವರ ಬಗ್ಗೆಯೂ ಯೋಚನೆ:  ಬಾಲ ಗಣಪನಿಗೆ ಅಕ್ಕಿ ಮತ್ತು ಹಾಲಿನ ಖೀರು ಪಂಚಪ್ರಾಣ. ಅದಕ್ಕಾಗಿ ಒಮ್ಮೆ ಆತ ಬಾಲಕನಾಗಿ, ಅಕ್ಕಿ ಮತ್ತು ಹಾಲನ್ನು ಹಿಡಿದು ಒಂದು ಹಳ್ಳಿಯ ಹಳೆಯ ಗುಡಿಸಲಿಗೆ ಹೋದನು. ಅಲ್ಲಿ ವಾಸವಿದ್ದ ಮಹಿಳೆ ಖೀರು ಮಾಡಲು ಒಪ್ಪಿಕೊಂಡಳು. ಬಾಲಕ  ಹೊರಗಡೆ ಆಟವಾಡಲು ಹೊರಟು ಹೋದ. ಆಕೆ ಮಲಗಿದಳು. ಎದ್ದಾಗ ಖೀರು ಸಿದಟಛಿವಾಗಿತ್ತು. ಆಕೆಗೂ ಹಸಿವಾಗಿದ್ದರಿಂದ ಬಾಲಕನನ್ನು ಮರೆತು, ಗಣೇಶ ವಿಗ್ರಹಕ್ಕೆ ನೈವೇದ್ಯ ಅರ್ಪಿಸಿ, ತಾನು ತಿಂದುಬಿಟ್ಟಳು. ಬಾಲಕ ಬಂದಾಗ ಖೀರನ್ನು ತಿನ್ನಲು ಕೊಟ್ಟಳು. ನಾನು ಈ ಮೊದಲೇ ಖೀರು ತಿಂದೆ ಎಂದು ಒಪ್ಪಿಕೊಂಡಳು. ಬಾಲಕ ತಾನೂ ಪ್ರಸಾದವನ್ನು ನಾನು ಆಗಲೇ ಸ್ವೀಕರಿಸಿದೆ ಎಂದಾಗ ಮಹಿಳೆಗೆ ಆಶ್ಚರ್ಯ. ಮನೆಗೆ ಬಾಲ ಗಣಪನೇ ಬಂದಿದ್ದಾನೆ ಎಂದು ಖುಷಿ ಪಟ್ಟಳು.

ಇನ್ನೊಬ್ಬರ ಮೇಲೆ ಅಸಹನೆ ಸರಿಯಲ್ಲ: ಗಣಪತಿ ಸದಾ ತಿನ್ನುವುದರಲ್ಲಿ ಕಾಲ ಕಳೆಯುತ್ತಿದ್ದನು. ಗಣಪತಿ ಸದಾ ತಿನ್ನುವುದರಲ್ಲಿ ಕಾಲ ಕಳೆಯುತ್ತಿದ್ದನು. ಆತನ ಹೊಟ್ಟೆ ಬಹಳ ದೊಡ್ಡದಾಗಿತ್ತು. ಎಷ್ಟು ತಿಂದರೂ ಕೂಡ ಕಡಿಮೆಯೇ. ಅಂತೆಯೇ ತಿಂಡಿ ಪ್ರಿಯ ಗಣಪನೂ ಒಂದೂ ಸಾರಿ, ಸರಿಯಾಗಿ ಹೊಟ್ಟೆ ಬಿರಿಯುವಂತೆ ತಿಂದು ಬಿಟ್ಟಿದ್ದನು. ಮುಂದೆ ನಡೆಯಲು ಕೂಡ ಕಷ್ಟವಾಗುವ ಸ್ಥಿತಿಯಾಗಿತ್ತು. ಈ ಮಧ್ಯೆ ಹಾಗೇಯೇ ದಾರಿ ಸಾಗಿಸುತ್ತಾ ಹೊರಟ್ಟಿದ್ದ ನಮ್ಮ ಗಣಪ ಕಲ್ಲು ಎಡವಿ ಬಿದ್ದೇ ಬಿಟ್ಟನು. ಆಗ ಅವನ ಡೊಳ್ಳು ಹೊಟ್ಟೆ ಒಡೆದು ಹೋಯಿತು. ಇದನ್ನೇ ನೋಡುತ್ತಿದ್ದ, ಚಂದ್ರ ಗಣಪನ ಸ್ಥಿತಿಯನ್ನು ಕಂಡು ಮುಸಿ ಮುಸಿ ನಗುತ್ತಿದ್ದನು. ಪಾರ್ವತಿ ಸುತ ಗಣಪನಿಗೆ ಎಲ್ಲೆಲ್ಲಿದ ಸಿಟ್ಟು ಬಂದಿತ್ತು. ತತ್‌ಕ್ಷಣ ಚಂದ್ರನಿಗೆ ಶಾಪ ನೀಡಿದನು. ನನ್ನ ಮೆರವಣಿಗೆ ಆಗುವಾಗ, ಭಕ್ತರು ನಿನ್ನನ್ನು ನೋಡದಂತಾಗಲಿ ಎಂದು ಶಾಪವಿತ್ತನು. ಅದಕ್ಕೆ ಗಣೇಶ ಚೌತಿಯಂದು ಹೆಚ್ಚಾಗಿ ಚಂದ್ರ ದರ್ಶನ ಮಾಡುವುದಿಲ್ಲ.

ವಿಷ್ಣುವಿನ ಶಂಖ ಕಳೆದುಹೋದ ಕಥೆ: ವಿಷ್ಣು ಎಂದರೆ ಸುದರ್ಶನ ಚಕ್ರ ಮತ್ತು ಶಂಖ ಎಲ್ಲರ ಕಣ್ಣ ಮುಂದೆ ಬರುತ್ತದೆ. ತನ್ನ ಜೊತೆ ಶಂಖ ಯಾವತ್ತು ಇರುತ್ತದೆ. ಆದರೆ ಒಂದು ದಿನ ವಿಷ್ಣುವಿನ ಶಂಖ ಕಾಣೆಯಾಗುತ್ತದೆ. ವಿಷ್ಣು ತನ್ನ ಎಲ್ಲ ಶಕ್ತಿಯನ್ನು ಬಳಸಿ ಶಂಖ ಹುಡುಕಲು ಆರಂಭಿಸಿದ. ಶಂಖವನ್ನು ಹುಡುಕುತ್ತಿದ್ದ ವಿಷ್ಣುವಿಗೆ ದೂರದಲ್ಲೆಲ್ಲೊ ಶಂಖನಾದ ಕೇಳಿಸುತ್ತದೆ. ಆ ಧ್ವನಿಯನ್ನು ಹುಡುಕಿಕೊಂಡು ಹೋದ ಆತನಿಗೆ ಕೈಲಾಸದಲ್ಲಿ ಶಂಖನಾದ ಕೇಳಿಸುತ್ತದೆ. ಕೈಲಾಸ ತಲುಪಿದ ವಿಷ್ಣು ಗಣೇಶ ಶಂಖವನ್ನು ಆಸಕ್ತಿಯಿಂದ ಊದುತ್ತಿರುವುದು ಕಾಣಸಿಗುತ್ತದೆ. ಅದನ್ನು ಕಂಡ ವಿಷ್ಣು, ಗಣೇಶ ಸುಲಭವಾಗಿ ಶಂಖ ವಾಪಸ್ಸು ಮಾಡಲ್ಲ ಎಂದುತಿಳಿದು ಶಿವನ ಬಳಿ ಹೋಗಿ ಶಂಖ ವಾಪಸ್ಸು ಮಾಡುವಂತೆ ಹೇಳುತ್ತಾನೆ. ಆದರೆ ಶಿವ ತನಗೂ ಗಣೇಶನನ್ನು ಪ್ರಶ್ನಿಸುವಶಕ್ತಿ ಇಲ್ಲ .ಗಣೇಶನನ್ನು ಪ್ರಾರ್ಥಿಸಿದರೆ, ಆತನನ್ನು ಪೂಜಿಸಿದರೆ ಮಾತ್ರ ಆತ ಶಂಖ ವಾಪಸ್ಸು ನೀಡುವನು ಎನ್ನುತ್ತಾನೆ. ಕೊನೆಗೆ

ವಿಷ್ಣು ಪೂಜೆಗೆ ಎಲ್ಲ ಸಿದಟಛಿತೆ ಮಾಡಿ ಭಕ್ತಿಯಿಂದ ಪೊಜೆಸುತ್ತಾನೆ. ಇದರಿಂದ ಖುಷಿಗೊಂಡ ಗಣೇಶ ವಿಷ್ಣುವಿನ ಶಂಖವನ್ನು ವಾಪಾಸ್ಸಾಗಿಸುತ್ತಾನೆ.

Advertisement

ನಿಯಮ ಪಾಲನೆ ಅಗತ್ಯ:  ಗಣೇಶ ಹುಟ್ಟಿದ ಸಂದರ್ಭದಲ್ಲಿ ಶಿವ ದೇವರು ಒಂದು ಹೊಸ ನಿಯಮ ವನ್ನು ಮಾಡುತ್ತಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಹೋಗುವಾಗಲು ಮೊದಲು ಗಣೇಶನನ್ನು ಪೂಜಿಸಿ ಹೊರಡಬೇಕೆಂಬ ನಿಯಮ. ಸ್ವಲ್ಪ ಸಮಯ ಕಳೆದಾಗ ಸ್ವತಃ ಶಿವನೇ ಈ ನಿಯಮವನ್ನು ಮರೆತು ತ್ರಿಪುರ ದಹನ ಯುದ್ಧಕ್ಕೆ ತೆರಳುತ್ತಾರೆ. ಯುದ್ಧದಲ್ಲಿ ಶಿವನ ರಥದ ಚಕ್ರ ನೆಲದಲ್ಲಿ ಹೂತು ಸೋಲಾಗುತ್ತದೆ. ಆಗ ಶಿವನಿಗೆ ತಾನು ಮಾಡಿದ ನಿಯಮ ನೆನಪಾಗುತ್ತದೆ. ಆ ಕ್ಷಣವೇ ಗಣೇಶನಆರಾಧನೆಯನ್ನು ಮಾಡಿ ಯುದ್ಧದಲ್ಲಿ ಜಯ ಗಳಿಸುತ್ತಾರೆ.

ಹಣ ಸಂಪತ್ತು ಶಾಶ್ವತವಲ್ಲ : ಒಮ್ಮೆ ಕುಬೇರ ಎಲ್ಲಾ ದೇವಾನು ದೇವತೆ ಗಳನ್ನು ಔತಣ ಕೂಟಕ್ಕೆ ಆಹ್ವಾನಿಸಿದನು. ಅದರಂತೆ ಶಿವ ಪಾರ್ವತಿಯರು ತಮ್ಮ ಅನುಪಸ್ಥಿತಿಯಲ್ಲಿ ಗಣೇಶನನ್ನು ಕೂಟಕ್ಕೆ ಕಳುಹಿಸಿ ಕೊಟ್ಟರು. ಕುಬೇರನಿಗೆ ತಾನು ತುಂಬಾ ಸಂಪತ್ತು ಉಳ್ಳವನು, ತನಗಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಬೀಗು ವಾಗ ಗಣೇಶನಿಗೆ ಇವನ ಸೊಕ್ಕನ್ನು ಹೇಗಾದರೂ ಕೊನೆಗೊಳಿಸಬೇಕೆಂದು ಕೊಂಡು ಊಟಕ್ಕೆ ಕುಳಿತಾಗ ಎಲ್ಲವನ್ನೂ ಖಾಲಿ ಮಾಡುತ್ತಾನೆ ಕುಬೇರ ಅವನಿಗೆ ಬಡಿಸಿ ಬಡಿಸಿ ಸೋತು ಹೋಗುತ್ತಾನೆ. ಅವನ ಬಂಗಾರ, ಬೆಳ್ಳಿ,ವಜ್ರ ಎಲ್ಲವನ್ನೂ ನೀಡಿ ದರೂ ಪುಟ್ಟ ಗಣೇಶನಿಗೆ ಅದು ಸಾಲುವುದಿಲ್ಲ.ಆಗ ಕುಬೇರನಿಗೆ ತನ್ನ ತಪ್ಪಿನ ಅರಿ ವಾಗುತ್ತದೆ ನಾನು ಇದ್ದಾಗ ಜಂಬ ಪಡಬಾರದಿತ್ತು ಎಂದುಅವನಿಗೆಅರಿವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next