ಚನ್ನಮ್ಮನ ಕಿತ್ತೂರು: ಮಕ್ಕಳನ್ನು ಮತ್ತು ಯುವಕರನ್ನು ಇಂತಹ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ತೊಡಗಿಸಿಕೊಂಡು
ಕಾಯಕ್ರಮಗಳನ್ನು ಮಾಡಬೇಕು. ಇದರಿಂದ ಅವರಲ್ಲಿ ಇತಿಹಾಸ ಪ್ರಜ್ಞೆ, ದೇಶಾಭಿಮಾನ ಬೆಳೆಯುತ್ತದೆ ಶಾಸಕ ಬಾಬಾಸಾಹೇಬ
ಪಾಟೀಲ ಹೇಳಿದರು.
Advertisement
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮಾಜಿಯ 200ನೇ ವಿಜಯೋತ್ಸವದ ಸಂಭ್ರಮಾಚಾರಣೆಯ ಕಿತ್ತೂರು ಉತ್ಸವದ ಅಂಗವಾಗಿ “ಕಿತ್ತೂರು ರಾಣಿ ಸಂಸ್ಥಾನ’ದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಮ್ಮ ಅಧ್ಯಯನ ಪೀಠವನ್ನು ಕಿತ್ತೂರು ನಾಡಿಗೆ ಸ್ಥಳಾಂತರಿಸಿದರೆ, ಕಿತ್ತೂರು ಇತಿಹಾಸವನ್ನು ಮತ್ತಷ್ಟು ಹೆಕ್ಕಿ ತೆಗೆಯಲು
ಅನುಕೂಲವಾಗುವುದು ಎಂದು ಹೇಳಿದರು. ರಾಣಿ ಚನ್ನಮ್ಮಳ ತವರೂರು ಕಾಕತಿಯಲ್ಲಿ ಇರುವ ಮನೆ ಸಂಪೂರ್ಣ ಹಾಳಾಗಿದ್ದು, ಅದನ್ನು ಅಭಿವೃದ್ಧಿ ಮಾಡುವ ಕಾರ್ಯ
ತ್ವರಿತವಾಗಿ ಪ್ರಾರಂಭವಾಗಬೇಕು ಎಂದ ಅವರು, ಗುರು ಸಂಸ್ಕೃತಿ ಉಳಿವಿಗಾಗಿ ಕಿತ್ತೂರು ಚೌಕಿಮಠದ ಅಭಿವೃದ್ಧಿಯಾಗಬೇಕು
ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
Related Articles
ಹಚ್ಚಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ ಎಂದ ಅವರು, ಆಧಾರ ಸಹಿತ ಸಂಶೋಧನೆ ಮಾಡಿದ ಇತಿಹಾಸಕಾರರಿಗೆ ಗೌರವ
ಸೂಚಿಸುವ ಕೆಲಸವಾಗಬೇಕು ಎಂದರು.
Advertisement
ಖ್ಯಾತ ವಿದ್ವಾಂಸರು ಬಾಳಣ್ಣ ಶೀಗಿಹಳ್ಳಿ ಮಾತನಾಡಿ, ಕಿತ್ತೂರಿಗೆ 239 ವರ್ಷಗಳ ಇತಿಹಾಸವಿದೆ. ನಮ್ಮ ಕಿತ್ತೂರು ಸಂಸ್ಥಾನಕ್ಕೆಇರುವ ಸೌಭಾಗ್ಯ ಇಡೀ ದೇಶದಲ್ಲಿ ಬೇರೆ ಯಾವ ಸಂಸ್ಥಾನ ಇಲ್ಲ. ಕಿತ್ತೂರು ರಾಣಿ ಚನ್ನಮ್ಮ ಯುದ್ದ ಪರಿಕರಗಳನ್ನು ಬಳಸಿದ
ಪ್ರಥಮ ಭಾರತದ ಮಹಿಳೆ ಎಂದು ಹೇಳಿದರು. ಸಾಹಿತಿ ಸಿ.ಕೆ.ಜೋರಾಪೂರ ಮಾತನಾಡಿ, ಒಂದು ಸಣ್ಣ ಸಂಸ್ಥಾನ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತ್ತಿದ್ದ ಬ್ರಿಟಿಷರನ್ನು ಸೋಲಿಸಿ, ಅವರಲ್ಲಿ ನಡುಕ ಹುಟ್ಟಿಸುವಂತೆ ಮಾಡಿ, ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದದವಳು ರಾಣಿ ಚನ್ನಮ್ಮ. ಕಿತ್ತೂರು ಮಾತ್ರ ಭೂಮಿಯಾಗಿದೆ ಎಂದರು. ಸಾಹಿತಿ ರಾಜಶೇಖರ ಕೋಟಿ ಮಾತನಾಡಿ, ಎಷ್ಟೇ ದೊಡ್ಡ ರಾಜನಿರಲಿ, ಸಾಮ್ರಾಜ್ಯವೇ ಇರಲಿ ಅವರೆಲ್ಲರಿಗೂ ಒಬ್ಬ ಗುರುಗಳು
ಇರುತ್ತಿದ್ದರು. ಅದೇ ರೀತಿ ಕಿತ್ತೂರು ಸಂಸ್ಥಾನಕ್ಕೆ ರಾಜಗುರುಗಳು ಇದ್ದರು. 1782ರಲ್ಲಿ ಮಲ್ಲಸರ್ಜ ದೇಸಾಯಿ ಕಿತ್ತೂರು ಸಂಸ್ಥಾನ
ಪೀಠವನ್ನು ಅಲಂಕರಿಸುತ್ತಾನೆ. ಅವರ ಕಾಲದಲ್ಲಿಯೇ ಮುದಿ ಮಡಿವಾಳ ಶಿವಯೋಗಿಗಳು ಕಿತ್ತೂರು ಸಂಸ್ಥಾನದ ರಾಜಗುರುಗಳಾಗಿ ರಾಜ ಮಲ್ಲಸರ್ಜನಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು. ಶಿಕ್ಷಣ ತಜ್ಞೆ ಡಾ| ವೀಣಾ ಬಿರಾದಾರ ಮಾತನಾಡಿ, ಕಿತ್ತೂರು ಚನ್ನಮ್ಮಳ ದೇಶಾಭಿಮಾನ ಅನನ್ಯ. ದೇಶದಲ್ಲಿ ಅನೇಕ
ರಾಜಮನೆತನಗಳು ಆಳ್ವಿಕೆ ಮಾಡಿದ್ದು, ಕಿತ್ತೂರು ಸಂಸ್ಥಾನ ದೇಶದ ಎಲ್ಲ ಮನೆತನಗಳಿಗಿಂತ ಭಿನ್ನವಾಗಿ ಆಳ್ವಿಕೆ ಮಾಡಿತ್ತು
ಎಂದರು. ಈ ವೇಳೆ ರಾಜಶೇಖರ ಕೋಟಿ ವಿರಚಿತ “ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ’ ಹಾಗೂ ಡಾ| ಸಿ.ಕೆ.ಜೋರಾಪೂರ ಅವರು ರಚಿಸಿದ “ಕರ್ನಾಟಕ ಇತಿಹಾಸ ಒಂದು ಇಣುಕು ನೋಟ’ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.